ರಾಷ್ಟ್ರೀಯ

ಹುಟ್ಟುಹಬ್ಬದ ವೇಳೆ ಸ್ನೇಹಿತರ ಹುಚ್ಚಾಟಕ್ಕೆ ವಿದ್ಯಾರ್ಥಿ ಸಾವು ! ವಿಡಿಯೋ ವೈರಲ್

Pinterest LinkedIn Tumblr

ಕೇವಲ ಕೇಕ್‌ ಕಟ್‌ ಮಾಡಿ ಜನ್ಮ ದಿನ ಆಚರಣೆ ಮಾಡುವುದು, ಸಿಹಿ ಹಂಚುವುದಷ್ಟೇ ಅಲ್ಲ ಚಿತ್ರ ವಿಚಿತ್ರವಾಗಿ ಆಚರಿಸುತ್ತಾರೆ. ಹುಟ್ಟು ಹಬ್ಬ ಆಚರಿಸಿಕೊಳ್ಳುವವನಿಗೆ ಅಚ್ಚರಿಯನ್ನಷ್ಟೇ ಅಲ್ಲ, ಭೀತಿಗೊಳಪಡಿಸುವ ಹುಚ್ಚುತನ ಹಲವರಿಗಿದೆ.

ಇಲ್ಲೊಂದು ವಿದ್ಯಾರ್ಥಿಗಳ ಗುಂಪು ಸ್ನೇಹಿತ ಜನ್ಮದಿನದಂದು ಸೆಲಬ್ರೇಟ್‌ ಮಾಡುವ ನೆಪದಲ್ಲಿ ಚೆನ್ನಾಗಿ ಗುದ್ದಿದ್ದಾರೆ. ಖುಷಿಯ ಅಮಲಲ್ಲಿದ್ದ ಎಲ್ಲರೂ ಸೇರಿ ಹಾಗೆ ಗುದ್ದಿದರ ಪರಿಣಾಮ ಏನಾಗುತ್ತದೆ ಎಂಬ ಅರಿವು ಅವರಿಗಾಗಿರಲಿಲ್ಲ. ಅರಿವಾಗುವಷ್ಟರಲ್ಲಿ ಜನ್ಮದಿನವನ್ನು ಆಚರಿಸಿಕೊಂಡ ಸ್ನೇಹಿತ ಪ್ರಾಣ ತ್ಯಜಿಸಿದ್ದ.

ಕಳೆದ 2 ತಿಂಗಳ ಹಿಂದೆ ಐಎಂಎಂ ಕಾಲೇಜಿನ ವಿದ್ಯಾರ್ಥಿಗಳು ಹುಟ್ಟು ಹಬ್ಬ ಆಚರಣೆಯ ಹುಚ್ಚುತನದಿಂದ ಸ್ನೇಹಿತನನ್ನೇ ಕಳೆದು ಕೊಂಡಿದ್ದಾರೆ. ಜನ್ಮದಿನದ ಪ್ರೀತಿಯ ಗುದ್ದು ಎಂದು ಸಿಕ್ಕಾಪಟ್ಟೆ ಚಚ್ಚಿದ್ದಾರೆ. ಕೆಲವರು ಮನಬಂದಂತೆ ತುಳಿದಿದ್ದಾರೆ. ಸಿಕ್ಕಿದ್ದೇ ಚಾನ್ಸ್‌ ಎಂಬಂತೆ ಥಳಿಸಿದ್ದಾರೆ. ಪರಿಣಾಮ ಮರುದಿನ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಸ್ನೇಹಿತರ ಹೊಡೆತದಿಂದ ಮೇದೋಜ್ಜೀರಕ ಗ್ರಂಥಿಗೆ ಗಂಭೀರವಾದ ಗಾಯವಾಗಿತ್ತು. ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕೊನೆಗೆ ಜನ್ಮದಿನದ ಖುಷಿಯಲ್ಲಿದ್ದ ವಿದ್ಯಾರ್ಥಿ ಪ್ರಾಣವನ್ನೇ ತ್ಯಜಿಸಿದ್ದ.

ಐಎಂಎಂ ವಿದ್ಯಾರ್ಥಿಗಳ ಹುಚ್ಚಾಟದ ಹುಟ್ಟುಹಬ್ಬ ಆಚರಣೆಯ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ತೀವ್ರ ಆಘಾತ ವ್ಯಕ್ತ ಪಡಿಸಿದ್ದಾರೆ. ಯುವಕರ ಇಂತಹ ವರ್ತನೆಗಳಿಗೆ ತೀವ್ರ ಕಳವಳ ವ್ಯಕ್ತ ಪಡಿಸಿದ್ದಾರೆ. ಹುಟ್ಟು ಹಬ್ಬವನ್ನು ಇಂತಹ ಹುಚ್ಚಾಟಗಳೊಂದಿಗೆ ಮಾಡದೆ ಇರುವಂತೆ ನಿಮ್ಮ ಮಕ್ಕಳಿಗೆ, ಕಿರಿಯರಿಗೆ ಬುದ್ಧಿ ಹೇಳಿ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

Comments are closed.