ಕರಾವಳಿ

ಬ್ರಹ್ಮಕಲಶೋತ್ಸವ ಹಿನ್ನಲೆ : ಶ್ರೀ ಕ್ಷೇತ್ರ ಕದ್ರಿಗೆ ಆಗಮಿಸಿದ ಹಸಿರು ಹೊರೆಕಾಣಿಕೆ ದಿಬ್ಬಣ

Pinterest LinkedIn Tumblr

ಮಂಗಳೂರು : ಇತಿಹಾಸ ಪ್ರಸಿದ್ಧ ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳು ಹಾಗೂ ದೇವಸ್ಥಾನ ಮತ್ತು ದೈವಸ್ಥಾನಗಳ ವತಿಯಿಂದ ಸಂಗ್ರಹಿಸಲ್ಪಟ್ಟ ಹಸಿರು ಹೊರೆಕಾಣಿಕೆ ಮೆರವಣಿಗೆ ನಗರದ ಕೇಂದ್ರ ಮೈದಾನದದಿಂದ ಬಹಳ ವಿಜೃಂಭಣೆಯಿಂದ ಕದ್ರಿ ಶ್ರೀ ಕ್ಷೇತ್ರಕ್ಕೆ ಆಗಮಿಸಿತು.

ಸಂಘ ಸಂಸ್ಥೆಗಳು ಹೊರೆಕಾಣಿಕೆಯನ್ನು ತಮ್ಮ ವಾಹನದ ಮೂಲಕ ಮಧ್ಯಾಹ್ನ ನೆಹರೂ ಮೈದಾನಕ್ಕೆ ತಲುಪಿಸಿದ್ದರು. ಬಳಿಕ ಅಲ್ಲಿಂದ ಹೊರೆಕಾಣಿಕೆ ದಿಬ್ಬಣವು ಕದ್ರಿ ಮಂಜುನಾಥೇಶ್ವರ ದೇವಸ್ಥಾನಕ್ಕೆ ಆಗಮಿಸಿತು.

ಶ್ರೀ ಕ್ಷೇತ್ರಕದ್ರಿಯಲ್ಲಿ ಮೇ 2ರಿಂದ 11ರವರೆಗೆ ಜರಗಲಿರುವ ಬ್ರಹ್ಮಕಲಶ ಮಹಾರುದ್ರಯಾಗ ಹಾಗೂ ಮಹಾದಂಡ ರುದ್ರಾಭಿಷೇಕ ಶ್ರೀ ಶ್ರೀರಾಜಾ ನಿರ್ಮಲನಾಥ್‌ಜೀಕದ್ರಿ ಮಠಾಧೀಶರ ಉಪಸ್ಥಿತಿಯಲ್ಲಿ ಹಾಗೂ ದೇರೆಬೈಲು ಬ್ರ| ಶ್ರೀ ವಿಠಲದಾಸ ತಂತ್ರಿಗಳ ನೇತೃತ್ವದಲ್ಲಿ ಈಗಾಗಲೇ ಆರಂಭಗೊಂಡಿದೆ.

ಗುರುವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ತೋರಣ ಮೂಹೂರ್ತ, ಉಗ್ರಾಣ ಮೂಹೂರ್ತ, ಪುಣ್ಯಾಹ, ಮಧುಪರ್ಕ, ಅಗ್ನಿಜನನ, ಆಧ್ಯಗಣಯಾಗ, ಸಂಜೆ ಸಪ್ತ ಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ದಿಕ್ಷಾಲಬಲಿ, ಮಲರಾಯ ಭಂಡಾರ ಆಗಮನ, ಧ್ವಜರೋಹಣ, ಭೇರಿತಾಡನ, ಅಂಕುರಾರೋಹಣ, ಉತ್ಸವ ಬಲಿ, ಭೂತ ಬಲಿ ಜರಗಿತು.

ಧಾರ್ಮಿಕ ಸಭಾಕಾರ್ಯಕ್ರಮ : ಕದ್ರಿಯೋಗೀಶ್ವರ ಮಠದ ಶ್ರೀ ನಿರ್ಮಲನಾಥ್‌ಜೀಗೌರವ ಉಪಸ್ಥಿತಿಯಲ್ಲಿ ಮೊದಲ ದಿನ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಕ್ಷೇತ್ರ‌ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು, ಕಟೀಲು ವಾಸುದೇವ‌ ಆಸ್ರಣ್ಣ ಅವರು ದೀಪ ಪ್ರಜ್ವಲನೆ ನೆರವೇರಿಸಿ ದರು. ಬ್ರ| ಶ್ರೀ ದೇರೆಬೈಲು ವಿಠಲದಾಸ ತಂತ್ರಿಗಳು ಧಾರ್ಮಿಕ‌ ಉಪನ್ಯಾಸ‌ ನೀಡಿದರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ‌ ಅಧ್ಯಕ್ಷ ಡಾ. ಎ. ಜನಾರ್ದನ ಶೆಟ್ಟಿ‌ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಧಾನ ಅತಿಥಿಗಳಾಗಿ ಎಸ್. ಡಿ. ಎಂ. ಎಜ್ಯುಕೇಶನ್ ಸೊಸೈಟಿ, ಉಜಿರೆ‌ಇದರ ಕಾರ್ಯದರ್ಶಿ ಶ್ರೀ ಹರ್ಷೇಂದ್ರಕುಮಾರ್ ಧರ್ಮಸ್ಥಳ, ಕರ್ಣಾಟಕ ಬ್ಯಾಂಕ್‌ನ್‌ಅಧ್ಯಕ್ಷರಾದ ಶ್ರೀ ಪಿ. ಜಯರಾಮ್ ಭಟ್, ಮುಂಬೈ ಉದ್ಯಮಿಕರ್ನಿರೆ ವಿಶ್ವನಾಥ ಶೆಟ್ಟಿ, ಕರಾವಳಿ ಕಾಲೇಜು‌ ಅಧ್ಯಕ್ಷ‌ ಎಸ್. ಗಣೇಶ್‌ರಾವ್, ಕುದ್ರೋಳಿ ಭಗವತಿಕ್ಷೇತ್ರದ‌ಅಧ್ಯಕ್ಷಗಣೇಶ್‌ಕುಂಟಲ್‌ಪಾಡಿ, ಉರ್ವ ಮಾರಿಗುಡಿಯ‌ಅಧ್ಯಕ್ಷ ಹರಿಶ್ಚಂದ್ರ ಕರ್ಕೇರ ಬೈಕಂಪಾಡಿ ಭಾಗವಹಿಸಿದ್ದರು.

Comments are closed.