ಕರಾವಳಿ

ಬಿಜೈ ಇಲೆಕ್ಟ್ರಾನಿಕ್ ರಿಪೇರಿ ಅಂಗಡಿಯಲ್ಲಿ ಬೆಂಕಿ ಅವಘಡ :ಸಾವಿರಾರು ರೂ.ಮೌಲ್ಯದ ಸೊತ್ತು ಬೆಂಕಿಗಾಹುತಿ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು : ನಗರದ ಬಿಜೈನ ಕಮರ್ಷಿಯಲ್ ಕಟ್ಟಡವೊಂದರಲ್ಲಿ ಕಾರ್ಯನಿರ್ವಾಹಿಸುತ್ತಿದ್ದ ಇಲೆಕ್ಟ್ರಾನಿಕ್ ರಿಪೇರಿ ಅಂಗಡಿ ಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸಾವಿರಾರು ರೂ.ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿದೆ.

ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಬಿಜೈ ವೃತ್ತದ ಕಡೆ ಸಾಗುವ ರಸ್ತೆಯಲ್ಲಿ ( ಟಾಟಾ ಶೋರೂಂನ ಪಕ್ಕದ ಕಟ್ಟಡ)ರುವ ಭವಾನಿ ಗಣೇಶ್ ಕಮರ್ಷಿಯಲ್ ಕಾಂಪ್ಲೆಕ್ಸ್ ನ ತಳ ಅಂತಸ್ತಿನಲ್ಲಿರುವ ಇಲೆಕ್ಟ್ರಾನಿಕ್ ರಿಪೇರಿ ಅಂಗಡಿಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ಇಲೆಕ್ಟ್ರಾನಿಕ್ ಅಂಗಡಿಯಲ್ಲಿ ರಿಪೇರಿಗಾಗಿ ಬಂದಿದ್ದ ಹಲವು ಸಾಮಗ್ರಿಗಳು ಬೆಂಕಿಗಾಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಸ್ಥಳಕ್ಕೆ ಕದ್ರಿ ಅಗ್ನಿಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ಸಂಭವಿಸದಂತೆ ತಡೆದರು.

Comments are closed.