ಲಕ್ನೋ: ವಿವಾದದ ಮೇಲೆ ವಿವಾದ ಸೃಷ್ಟಿಸುವಲ್ಲಿ ಬಿಜೆಪಿ ಸಂಸದ ವರುಣ್ ಗಾಂಧಿ ಅದ್ಭುತ ಕಲೆ ಹೊಂದಿದ್ದಾರೆ. ಸದ್ಯ ವರುಣ್ ಸುಲ್ತಾನ್ ಪುರದಲ್ಲಿ ತಮ್ಮ ತಾಯಿ ಮನೇಕಾ ಗಾಂಧಿ ಅವರ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮೇ 12 ರಂದು ನಡೆಯುವ ಆರನೇ ಹಂತದ ಚುನಾವಣೆಯಲ್ಲಿ ಸುಲ್ತಾನ್ ಪುರ ಕೂಡ ಸೇರಿದೆ.
ಸೋಮವಾರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ವರುಣ್ ಗಾಂಧಿ, ನನ್ನ ತಾಯಿಯದ್ದು ಅತ್ಯುತ್ತಮ ಆತ್ಮ, ನೀವೂ ಪ್ರತಿಯೊಬ್ಬರು ಮಾತೆಗೆ ಮತ ಹಾಕಬೇಕು, ಮಾತಾ ಅವರೇ ಭಾರತ ಮಾತಾ, ನೀವು ಹಿಂದೂಸ್ತಾನದಲ್ಲಿ ವಾಸವಾಗಿದ್ದೀರಾ, ನೀವು ಹಿಂದೂಸ್ತಾನಕ್ಕೆ ವೋಟ್ ಮಾಡಬೇಕು,.ಒಂದು ವೇಳೆ ಎಸ್ ಪಿ- ಬಿಎಸ್ ಪಿ ಗೆ ಮತ ಹಾಕಿದಕೇ ನೀವು ಪಾಕಿಸ್ತಾನಕ್ಕೆ ಮತಹಾಕಿದಂತೆ ಎಂದು ಹೇಳಿದ್ದಾರೆ.
ಮನೇಕಾ ಗಾಂಧಿ ವಿರುದ್ಧ ಬಿಎಸ್ ಪಿಯ ಚಂದ್ರ ಭದ್ರ ಸಿಂಗ್ ಸೋನು ಸಿಂಗ್ ಮತ್ತು ಅವರ ಸಹೋದರ ಯಶ್ ಭದ್ರ ಸಿಂಗ್ ಸ್ಪರ್ಧಿಸಿದ್ದಾರೆ. ಸೋನು ಸಿಂಗ್ ವರುಣ್ ಗಾಂಧಿ ಅವರ ಆಪ್ತರಾಗಿದ್ದರು, ಆದರೆ ಈಗ ಮೈತ್ರಿ ಅಭ್ಯರ್ಥಿಯಾಗಿದ್ದಾರೆ.
Comments are closed.