ಬೆಂಗಳೂರು: ಮಂಡ್ಯದ ಮೈತ್ರಿ ಅಭ್ಯರ್ಥಿ ಮತ್ತು ಪುತ್ರ ನಿಖಿಲ್ ಗೆಲುವಿಗಾಗಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ಪೂಜೆ ಮುಂದುವರೆದಿದೆ. ನಿಖಿಲ್ ಗೆಲ್ಲಿಸುವಂತೆ ದೇವರ ಮೊರೆಗೆ ಮುಂದಾಗಿರುವ ಮುಖ್ಯಮಂತ್ರಿ ಎಚ್ಡಿಕೆ, ತಮಿಳುನಾಡಿನ ಮುರುಗನ್ ದೇವಾಲಯಕ್ಕೆ ತೆರಳಿದ್ದಾರೆ.
ಬೆಂಗಳೂರಿನಲ್ಲಿ ಬಸವ ಜಯಂತಿ ಕಾರ್ಯಕ್ರಮ ಮುಗಿಸಿದ ಅವರು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಅಲ್ಲಿಂದವಿಶೇಷ ವಿಮಾನದಲ್ಲಿ ಪ್ರಯಾಣ ಮಾಡಲಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ಮುಗಿದ ಬಳಿಕ ಸಿಎಂ ಹೆಚ್ಡಿ ಕುಮಾರಸ್ವಾಮಿ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದರು.
ಇತ್ತೀಚೆಗೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಸೇರಿದಂತೆ ಕುಮಾರಸ್ವಾಮಿ ಜತೆಗೆ ಇಡೀ ಕುಟಂಬವೇ ಶೃಂಗೇರಿ ಸಮೀಪದ ಹಳ್ಳಿಯೊಂದಕ್ಕೆ ತೆರಳಿತ್ತು. ಅಮಾವಾಸ್ಯೆ ಪ್ರಯುಕ್ತ ಅಲ್ಲಿನ ಉಮಾ ಮಹೇಶ್ವರಿ ದೇವಾಲಯದಲ್ಲಿ ಹೋಮ ಮುಗಿಸಿದ ಸಿಎಂ ಕುಟುಂಬ ಬೆಂಗಳೂರಿಗೆ ವಾಪಸ್ಸಾಗಿತ್ತು. ಅದೇ ರೀತಿ ಇಂದು ಕುಟುಂಬ ಸದಸ್ಯರೊಂದಿಗೆ ತಮಿಳುನಾಡಿನ ಪಳನಿ ಮುರಗನ್ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ದೇವಸ್ಥಾನಕ್ಕೆ ಇದು ಎರಡನೇ ಭೇಟಿ ಎಂಬುದು ವಿಶೇಷ.
ಮಾಧ್ಯದ ಜೊತೆಗಿನ ಮುನಿಸನ್ನು ಕುಮಾರಸ್ವಾಮಿ ಮುಂದುವರಿಸಿದ್ದಾರೆ. ಬಸವ ಪುತ್ಥಳಿಗೆ ಮಾಲೆ ಹಾಕಿದ ಅವರು ಮಾಧ್ಯಮಗಳ ಕಡೆ ತಿರುಗಿಯೂ ನೋಡದೆ ಹೋದರು. ಈ ಹಿಂದೆ ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಪೂಜೆ ಸಲ್ಲಿಸಿದ್ದರು. ಅಷ್ಟೇ ಅಲ್ಲ ವಿಶೇಷ ಪೂಜೆ ಸಲ್ಲಿಕೆ ಮಾಡಿತ್ತು. ಈ ಮೊದಲಿನಿಂದಲೂ ಕುಮಾರಸ್ವಾಮಿ ಅವರು ದೇವರ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, “ನಿಮ್ಮಲ್ಲಿನ ಚರ್ಚೆ, ಸುದ್ದಿಗಳನ್ನು ನೋಡಿ ನಾನು ಮಾಧ್ಯಮಗಳಿಗೆ ಬಹಿಷ್ಕಾರ ಹಾಕಿದ್ದೇನೆ. ಅದೇನು ಸ್ಟೋರಿನೋ, ಅದೇನು ಚರ್ಚೆ ಮಾಡ್ತೀರೋ ಮಾಡಿಕೊಳ್ಳಿ. ನಿಮ್ಮ ಜೊತೆ ಮಾತನಾಡಬಾರದು ಎಂದು ತೀರ್ಮಾನ ಮಾಡಿದ್ದೇನೆ. ಏನೇನು ಚರ್ಚೆ ಮಾಡ್ತಿರೋ ಮಾಡಿಕೊಳ್ಳಿ. ಮಜಾ ಮಾಡಿ,” ಎಂದು ಕುಮಾರಸ್ವಾಮಿ ಹೇಳಿದ್ದರು.
Comments are closed.