ಬೆಂಗಳೂರು: 17ನೇ ಲೋಕಸಭಾ ಚುನಾವಣೆಯ ಫಲಿತಾಂಶವು ಮೇ 23ರಂದು ಪ್ರಕಟಗೊಂಡಿದ್ದು ದೇಶದ್ಯಂತ ಬಾರತೀಯ ಜನತಾ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ರಾಜ್ಯದಲ್ಲಿ ಕೆಲವು ಘಟಾನುಘಟಿ ರಾಜಕೀಯ ಹಿರಿಯ ನಾಯಕರು ಸೋಲು ಕಂಡಿರುವುದು ಬಾರೀ ಕುತೂಹಲ ಮೂಡಿಸಿದೆ.
ಈ ಬಾರಿ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಇತರ ಪಕ್ಷಗಳು ಒಟ್ಟಾಗಿ ಮಹಾಘಟ್ ಬಂಧನ್ ಮಾಡಿಕೊಂಡು ಸ್ಪರ್ಧಿಸಿದ್ದವು ಈ ಹಿನ್ನಲೆಯಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ದೊಡ್ಡ ಯೋಜನೆಯನ್ನು ರೂಪಿಸಿದ್ದರು ಸಹ ಕಮಲಪಡೆಯು ಎದುರಾಳಿ ಲೆಕ್ಕಾಚಾರವನೆಲ್ಲಾ ಬುಡಮೇಲು ಮಾಡಿದೆ. ರಾಜ್ಯದಲ್ಲಿ ಸೋಲು ಕಾಣದ ಹಿರಿಯ ರಾಜಕೀಯ ನಾಯಕರು ಸೋತು ಸುಣ್ಣವಾಗಿದ್ದಾರೆ.
ಕಾಂಗ್ರೆಸ್, ಮಲ್ಲಿಕಾರ್ಜುನ್ ಖರ್ಗೆ – ಕಲಬುರಗಿ ಕ್ಷೇತ್ರ ಸೋಲು
ಮಲ್ಲಿಕಾರ್ಜುನ್ ಖರ್ಗೆ ಅವರು ಕಲಬುರಗಿ ಕೇತ್ರದಲ್ಲಿ ಸತತವಾಗಿ 12 ಬಾರಿ ಜಯಗಳಿಸಿ ಲೋಕಸಭಾಗೆ ಎಂಟ್ರಿ ಕೊಟ್ಟಿದ್ದರು. ಆದರೆ, ಈ ಸಲ ಅವರನ್ನು ಹೇಗಾದರೂ ಮಾಡಿ ಅವರ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ ಮಾಸ್ಟರ್ ಪ್ಲಾನ್ ರೆಡಿ ಮಾಡಿಕೊಂಡು ಅದನ್ನು ಪ್ರಯೋಗ ಮಾಡಿದ ಪರಿಣಾಮವೇ ಖರ್ಗೆ ಸೋತು ಮನೆಸೇರುವಂತಾಯ್ತು. ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಅವರು ಈ ಕ್ಷೇತ್ರದಲ್ಲಿ ಗೆದ್ದು ದೆಹಲಿ ರಾಜಕಾರಣಕ್ಕೆ ಲಗ್ಗೆಯಿಟ್ಟಿದ್ದಾರೆ.
ಕಾಂಗ್ರೆಸ್, ವೀರಪ್ಪ ಮೊಯ್ಲಿ- ಸೋಲು, ಚಿಕ್ಕಬಳ್ಳಾಪುರ ಕ್ಷೇತ್ರ
ವೀರಪ್ಪ ಮೊಯ್ಲಿ ಅವರು ಸಹ ಕಾಂಗ್ರೆಸ್ನ ಹಿರಿಯ ಮುಖಂಡರು ಇವರು ಕ್ಷೇತ್ರದ ಪ್ರಬಲ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್ ಪಕ್ಷದಿಂದ ಇವರು ಸತತ ಗೆದ್ದು ಲೋಕಸಭಾಗೆ ಪ್ರವೇಶ ಪಡೆದಿದ್ದರು. ಆದರೆ ಈ ಸಲ ಬಿಜೆಪಿ ಅಭ್ಯರ್ಥಿ ಬಿ.ಎನ್ ಬಚ್ಚೇಗೌಡ ಅವರ ಮುಂದೆ ಸೋಲು ಅನುಭವಿಸುವ ಮೂಲಕ ತಮ್ಮ ಗೆಲುವಿನ ಓಟಕ್ಕೆ ಇತಿಶ್ರೀ ಆಡಿದರು.
ಕಾಂಗ್ರೆಸ್ ಕೆ.ಎಚ್ ಮುನಿಯಪ್ಪ-ಸೋಲು, ಕೋಲಾರ ಕ್ಷೇತ್ರ
ಕೆ.ಎಚ್ ಮುನಿಯಪ್ಪ ಅವರು ಕೋಲಾರ ಕ್ಷೇತ್ರದಲ್ಲಿ ಗೆಲುವ ಕುದುರೆ ಇವರು ಸಹ ಈ ಕ್ಷೇತ್ರದಿಂದ ಹಲವು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದಿದ್ದರು. ಈ ಸಲವು ಇವರು ಗೆಲ್ಲುತ್ತಾರೆ ಅಂತ ಕೈ ಮುಖಂಡರು ಭರವಸೆ ಇಟ್ಟುಕೊಂಡಿದ್ದರು ಆದರೆ ಬಿಜೆಪಿ ಅಭ್ಯರ್ಥಿ ಎಸ್ ಮುನಿಸ್ವಾಮಿ ಅವರ ರಭಸಕ್ಕೆ ಸಿಲುಕಿ ಸೋಲನ್ನು ಒಪ್ಪಿಕೊಂಡಿದ್ದಾರೆ.
ಹೆಚ್.ಡಿ ದೇವೇಗೌಡ-ಸೋಲು, ತುಮಕೂರು ಕ್ಷೇತ್ರ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರು ರಾಜಕಾರಣದಲ್ಲಿ ಬಹಳ ಚನ್ನಾಗಿ ಪಳಗಿದಂತಹ ಹಿರಿಯವರು. ತುಮಕೂರು ಕ್ಷೇತ್ರದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಈ ಸಲ ಏಕೋ ಹೆಚ್.ಡಿ ದೇವೇಗೌಡರನ್ನು ದೆಹಲಿ ರಾಜಕಾರಣಕ್ಕೆ ಕಳಿಸಿಕೊಡುವಲ್ಲಿ ಕ್ಷೇತ್ರದ ಜನ ಮನಸ್ಸು ಮಾಡಲಿಲ್ಲ ಪರಿಣಾಮ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಜಿ.ಎಸ್ ಬಸವರಾಜು ಅವರನ್ನು ಕಲ್ಪತರು ನಾಡಿನ ಜನ ಮತ್ತೆ ಅಪ್ಪಿಕೊಂಡಿದ್ದು ಅವರನ್ನು ಲೋಕಸಭಾಗೆ ಆರಿಸಿಕಳಿಸಿದ್ದಾರೆ.
Comments are closed.