ಕಲಬುರಗಿ : ಈ ಬಾರಿ ನನಗೆ ಮಂತ್ರಿ ಸ್ಥಾನ ಬೇಕು ಅದರಲ್ಲಿ ದೂಸರಾ ಮಾತೇ ಇಲ್ಲ ಎಂದು ಕಲಬುರಗಿ ಜಿಲ್ಲೆಯ ಜೇವರಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಹೇಳಿದ್ದಾರೆ.
ನನಗೆ ಯಾಕೆ ಮಂತ್ರಿ ಸ್ಥಾನ ಬೇಡ
ಮಾಧ್ಯಮಗಳ ಮುಂದೆ ಮಂಗಳವಾರ ಮಾತನಾಡಿದ ಅವರು, ರಾಜ್ಯ ರಾಜಕೀಯದ ಬೆಳವಣಿಗೆಯಲ್ಲಿ ಈಗ ಸಂಪುಟ ಪುನಾರಚನೆ ಆಗುತ್ತಿದೆ. ಪಕ್ಷ ಬಿಟ್ಟು ಹೋಗಬೇಕೆಂದುಕೊಂಡಿದ್ದ ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಬದಲು ಪಕ್ಷಕ್ಕೆ ನಿಷ್ಠೆಯಿಂದ ಇರುವವರಿಗೆ ಸಚಿವ ಸ್ಥಾನ ನೀಡಿ, ನಿಷ್ಠಾವಂತರನ್ನು ಪರಿಗಣಿಸಬೇಕು. ನನಗೆ ಯಾಕೆ ಮಂತ್ರಿ ಸ್ಥಾನ ಬೇಡ ಎಂದು ಪಕ್ಷದ ಮುಖಂಡರನ್ನು ಪ್ರಶ್ನೆ ಕೇಳುವುದಾಗಿ ಹೇಳಿದರು.
ನಮ್ಮ ತಂದೆ ದಿವಂಗತ ಧರ್ಮಸಿಂಗ್ ಸಹ ಪಕ್ಷಕ್ಕೆ ದುಡಿದಿದ್ದಾರೆ
ಎರಡು ಬಾರಿ ಗೆದ್ದಿದ್ದೇನೆ ಮತ್ತು ನಮ್ಮ ತಂದೆ ದಿವಂಗತ ಧರ್ಮಸಿಂಗ್ ಸಹ ಪಕ್ಷಕ್ಕೆ ದುಡಿದಿದ್ದಾರೆ. ಹೀಗಾಗಿ ನಾಯಕರಿಗೆ ಡಿಮ್ಯಾಂಡ್ ಮಾಡಿದ್ದೇನೆ. ಅದಕ್ಕಾಗಿಯೇ ಕಲಬುರಗಿಯಿಂದ ಬೆಂಗಳೂರಿಗೆ ಹೋಗುತ್ತಿದ್ದೇನೆ. ಏನಾಗುತ್ತದೆ ಅಂತ ಮುಂದೆ ನೋಡೋಣ ಎಂದರು.
Comments are closed.