ನಾನು ಸಹ ಪ್ರಕಾಶ್ ರೈ ಅಭಿಮಾನಿ. ಎಲ್ಲರಿಗೂ ಸೋಲಿನ ನೋವು ಇರುತ್ತದೆ. ಪ್ರಕಾಶ್ ರೈ ಅವರಿಗೆ ಆಗಿರುವ ಸೋಲು ರಾಜಕೀಯ ಜೀವನಕ್ಕೆ ಹಿನ್ನೆಡೆ ಇರಬಹುದು. ಆದ್ರೆ ಅವರ ಚಿತ್ರರಂಗದ ಜೀವನಕ್ಕೆ ಶುಭವಾಗಲೆಂದು ಹಾರೈಸುತ್ತೇನೆಂದು ಸಂಸದ ಪ್ರತಾಪ್ ಸಿಂಹ ಪ್ರಕಾಶ್ ರೈ ಕುರಿತು ಪ್ರೀತಿಯ ಮಾತುಗಳನ್ನಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವ್ರು, ನಟನೆಯ ವಿಚಾರದಲ್ಲಿ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಅವರ ನಟನೆಗೆ ನಾನು ಸಹ ಅಭಿಮಾನಿ. ಆದ್ರೆ ಅವರ ಸೈದ್ದಾಂತಿಕ ವಿಚಾರಗಳಿಗೆ ನಮ್ಮ ವಿರೋಧ ಇದೆ. ಮೋದಿ, ಅಮಿತ್ ಷಾ ಬಗ್ಗೆ ಸಭ್ಯತೆ ಮೀರಿ ಮಾತನಾಡಿದ್ರು. ಆಗ ನಾನು ಅವರನ್ನ ಕಟುವಾಗಿ ಟೀಕಿಸಿದ್ದೆ. ಈಗ ಅವರು ಚುನಾವಣೆ ನಿಂತು ಸೋತಿದ್ದಾರೆ. ಅವರ ಸೋಲಿನ ನೋವು ಅವರಿಗೆ ಮಾತ್ರ ಗೊತ್ತಿರುತ್ತೆ. ಹೀಗಾಗಿ ಈ ಸಂದರ್ಭದಲ್ಲಿ ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆಂದು ಪ್ರಕಾಶ್ ರೈ ಸೋಲಿನ ಕುರಿತು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಅಲ್ಲದೇ ಕೇಂದ್ರದ ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ, ಸಚಿವ ಸ್ಥಾನದ ಆಸೆಯೂ ನನಗಿಲ್ಲ. ಕ್ಷೇತ್ರದಲ್ಲಿ ಕೊಟ್ಟಿರುವ ಭರವಸೆಯ ಎಲ್ಲ ಕೆಲಸ ಮಾಡುವ ಸ್ವಾರ್ಥಿ ಮಾತ್ರ ನಾನು. ಸಚಿವ ಸ್ಥಾನವನ್ನ ಶ್ರೀನಿವಾಸ್ ಪ್ರಸಾದರಂಥ ಹಿರಿಯ ರಾಜಕಾರಣಿಗೆ ಸಿಕ್ಕರೆ ಸಂತಸ ಎಂದಿದ್ದಾರೆ.
ಇನ್ನು 1ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿದ್ದ ಕ್ಷೇತ್ರದ ಮತದಾರರು ಹಾಗೂ ಮುಖಂಡರು ಸೇರಿದಂತೆ ಮೋದಿ ಹಾಗೂ ಬಿಎಸ್ವೈಗೆ ಇದೇ ವೇಳೆ ಧನ್ಯವಾದ ಅರ್ಪಿಸಿದ್ದಾರೆ.
Comments are closed.