ಮಂಡ್ಯ: ಒಳಹರಿವು ಹೆಚ್ಚಾದರೆ ತಮಿಳುನಾಡಿಗೆ ನೀರು ಬಿಡಿ ಎಂದು ಪ್ರಾಧಿಕಾರ ಸೂಚಿಸಿದ್ದು, ಈ ಬಗ್ಗೆ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ಜಿ.ಮಾದೇಗೌಡ ಹೇಳಿಕೆ ನೀಡಿದ್ದಾರೆ.
ನೀರಿದ್ದರೆ ತಾನೇ ಬಿಡೋದು. ಬೇಕಿದ್ದರೆ ಪ್ರಾಧಿಕಾರದವರೇ ಬಂದು ನೀರು ಬಿಡಿಸಿಕೊಳ್ಳಲಿ. ನಮಗೇ ಕುಡಿಯೋಕೆ ನೀರಿಲ್ಲ. ರಾಜ್ಯದಲ್ಲಿ ಜನ ಗುಳೆ ಹೋಗ್ತಿದ್ದಾರೆ. ಬೋರ್ ವೆಲ್, ಕೆರೆ-ಕಟ್ಟೆಗಳು ಖಾಲಿಯಾಗಿವೆ. ನಮಗೆ ಇರೋದೇ ಸ್ವಲ್ಪ ನೀರು. ಅದನ್ನ ಕುಡಿಯೋಕೆ ಮಾತ್ರ ಇಟ್ಕೊಂಡಿದ್ದೀವಿ ಎಂದು ಹೇಳಿದ್ದಾರೆ.
ಅಲ್ಲದೇ, ಸರ್ಕಾರ ಯಾವ ಕಾರಣಕ್ಕೂ ನೀರು ಬಿಡಬಾರದು. ಬಿಟ್ರೆ ಜನ ದಂಗೆ ಏಳ್ತಾರೆ. ನಮ್ಮ ಬೆಳೆಗಳಿಗೂ ನೀರು ಸಾಲ್ತಿಲ್ಲ. ಈ ನಡುವೆಯೇ ಈ ರೀತಿ ಆದೇಶ ಅರ್ಥವಾಗ್ತಿಲ್ಲ. ನೀರು ಬಿಟ್ಟಿದ್ದೆ ಆದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
Comments are closed.