ಹೆಚ್ಚುತ್ತಿರುವ ನಕಲಿ ಖಾತೆಗಳ ಹಾವಳಿ; ನಕಲಿ ಖಾತೆ ರಚನೆಯ ಹಿಂದೆ ದುರುದ್ದೇಶ; ಅಂತಹ ಖಾತೆಗಳ ಗುರುತಿಸುವಿಕೆಗೆ ಆಧುನಿಕ ತಂತ್ರಜ್ಞಾನ
ಜನಪ್ರಿಯ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ Facebook ಸುಮಾರು 2.2 ಬಿಲಿಯನ್ ಖಾತೆಗಳನ್ನು ಅಳಿಸಿ ಹಾಕಿದೆ. ಕಳೆದ ಆರು ತಿಂಗಳುಗಳಿಂದ ನಕಲಿ ಖಾತೆಗಳನ್ನು ಸೃಷ್ಟಿಸಿ, ನಿಂದಿಸುವ ಚಾಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ, Facebook ಈ ಕ್ರಮವನ್ನು ತೆಗೆದುಕೊಂಡಿದೆ.
2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ Facebook 2.2 ಬಿಲಿಯನ್ ಖಾತೆಗಳನ್ನು ತೆಗೆದುಹಾಕಿದೆ. ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ ಸುಮಾರು 1.2 ಬಿಲಿಯನ್ ಖಾತೆಗಳನ್ನು Facebook ನಿಷ್ಕ್ರಿಯಗೊಳಿಸಿತ್ತು.
ಕಳೆದ ವಾರ ಬಿಡುಗಡೆಯಾದ Community Standards Enforcement Report ಈ ಮಾಹಿತಿಯನ್ನು ಬಹಿರಂಗ ಪಡಿಸಿದೆ. Community Standards ಗಳನ್ನು ಉಲ್ಲಂಘಿಸುವ ಖಾತೆಗಳ ವಿರುದ್ಧ Facebook ನಿರ್ದಾಕ್ಷಿಣ್ಯ ಕ್ರಮವನ್ನು ತೆಗೆದುಕೊಳ್ಳುತ್ತದೆ.
ವಿಶೇಷವಾಗಿ ಕೆಂಬ್ರಿಡ್ಜ್ ಅನಾಲಿಟಿಕಾ ವಿವಾದದ ಬಳಿಕ Facebook ನಕಲಿ ಖಾತೆ ಹಾಗೂ ನಿಯಮ ಉಲ್ಲಂಘನೆಯ ವಿರುದ್ಧ ಸಮರ ಸಾರಿದೆ.
Facebook ಅಂದಾಜಿನ ಪ್ರಕಾರ ಒಟ್ಟು ಖಾತೆಗಳ ಪೈಕಿ 5 ಶೇ. ಖಾತೆಗಳು ನಕಲಿಯಾಗಿವೆ. ಇಂತಹ ಖಾತೆಗಳು ಸೃಷ್ಟಿಯಾದ ಕೆಲವೇ ನಿಮಿಷದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಗುರುತಿಸಲಾಗುತ್ತದೆ. ಬಳಿಕ ಅವುಗಳನ್ನು ಅಳಿಸಿಹಾಕಲಾಗುತ್ತದೆ.
Comments are closed.