ಮನೋರಂಜನೆ

ಮತ್ತೆ ಸಲ್ಮಾನ್ ಖಾನ್ ಜೊತೆ ನಟಿಸಲು ಆಗಲ್ಲ: ದಿಶಾ ಪಠಾಣಿ

Pinterest LinkedIn Tumblr


ಮುಂಬೈ: ನನಗೆ ಮತ್ತೆ ಸಲ್ಮಾನ್ ಖಾನ್ ಅವರ ಜೊತೆ ನಟಿಸುವುದಕ್ಕೆ ಆಗಲ್ಲ ಎಂದು ಬಾಲಿವುಡ್ ನಟಿ ದಿಶಾ ಪಠಾಣಿ ಹೇಳಿದ್ದಾರೆ.

ಸಲ್ಮಾನ್ ಖಾನ್ ಅವರ ಮುಂಬರುವ ‘ಭಾರತ್’ ಚಿತ್ರದಲ್ಲಿ ದಿಶಾ ಪಠಾಣಿ ಟ್ರಾಪಿಜಿ ಕಲಾವಿದೆ (trapeze artist) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಶಾ ಮೊದಲ ಬಾರಿಗೆ ಸಲ್ಮಾನ್ ಅವರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು, ಇಬ್ಬರ ಕೆಮೆಸ್ಟ್ರಿ ಹೇಗಿದೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತೀಚೆಗೆ ದಿಶಾ ಪಠಾಣಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ದಿಶಾ, “ವಯಸ್ಸಿನ ಅಂತರ ಇರುವ ಕಾರಣ ನನಗೆ ಸಲ್ಮಾನ್ ಖಾನ್ ಅವರ ಜೊತೆ ನಟಿಸಲು ಮತ್ತೆ ಅವಕಾಶ ಸಿಗುವುದಿಲ್ಲ” ಎಂದು ಹೇಳಿದ್ದಾರೆ.

ನಿರ್ದೇಶಕ ಅಲಿ ಸರ್ ಈ ಚಿತ್ರದಲ್ಲಿ ನನಗೆ ಸಲ್ಮಾನ್ ಖಾನ್ ಅವರ ಜೊತೆ ಟ್ರಾಪಿಜಿ ಕಲಾವಿದೆ ಪಾತ್ರದಲ್ಲಿ ನಟಿಸಬೇಕು ಎಂದು ಹೇಳಿದ್ದರು. ಶೂಟಿಂಗ್‍ಗಾಗಿ ಸೆಟ್‍ಗೆ ತಲುಪಿದ್ದಾಗ ನನಗೆ ಸಲ್ಮಾನ್ ಸರ್ ಜೊತೆ ನಟಿಸಲು ಮತ್ತೆ ನಟಿಸಲು ಅವಕಾಶ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಎಂದು ಯೋಚಿಸುತ್ತಿದೆ. ನಿರ್ದೇಶಕ ಅಲಿ ಅವರು ನನಗೆ ಸ್ಕ್ರಿಪ್ಟ್ ಬಗ್ಗೆ ಹೇಳುವಾಗ ಅವರು ಕೂಡ ಈ ಮಾತನ್ನು ಹೇಳುತ್ತಿದ್ದರು ಎಂದರು.

ನನ್ನ ಹಾಗೂ ಸಲ್ಮಾನ್ ಅವರ ವಯಸ್ಸಿನ ಅಂತರದಿಂದ ನನಗೆ ಮತ್ತೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುವುದಿಲ್ಲ. ಭಾರತ್ ಚಿತ್ರದಲ್ಲಿ ಸಲ್ಮಾನ್ ಅವರನ್ನು 20-30 ವರ್ಷದವರಂತೆ ತೋರಿಸಲಾಗುತ್ತೆ ಎಂದು ಹೇಳಲಾಗಿತ್ತು. ಆಗ ನಾನು ನಮ್ಮಿಬ್ಬರ ಜೋಡಿ ಮ್ಯಾಚ್ ಆಗುತ್ತೆ ಎಂದು ತಕ್ಷಣ ಸಿನಿಮಾವನ್ನು ಒಪ್ಪಿಕೊಂಡೆ. ಸಲ್ಮಾನ್ ಹಾರ್ಡ್ ವರ್ಕರ್ ಆಗಿದ್ದು, ನಾನು ಅವರಿಂದ ಹೆಚ್ಚು ಕಲಿತ್ತಿದ್ದೇನೆ ಎಂದು ದಿಶಾ ಪಠಾಣಿ ತಿಳಿಸಿದ್ದಾರೆ.

ನಾನು ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ. ಏಕೆಂದರೆ ನನ್ನ ಹಾಗೂ ಸಲ್ಮಾನ್ ಖಾನ್ ಅವರ ಜೋಡಿ ಎಲ್ಲರಿಗೂ ಇಷ್ಟವಾಗಿದೆ. ನಮ್ಮಿಬ್ಬರ ನಡುವೆ ಒಳ್ಳೆಯ ಕೆಮೆಸ್ಟ್ರಿ ಇತ್ತು. ನಾನು ಅಭಿಮಾನಿಗಳ ಜೊತೆ ಕೋರಿಯೋಗ್ರಾಫರ್ ಹಾಗೂ ನಿರ್ದೇಶಕರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ದಿಶಾ ಸಂದರ್ಶನದಲ್ಲಿ ಹೇಳಿದ್ದಾರೆ.

Comments are closed.