ರಾಷ್ಟ್ರೀಯ

ದೇಶದ ಹಲವೆಡೆ ಮುಂದಿನ 72 ಗಂಟೆಯಲ್ಲಿ ಭಾರೀ ಮಳೆ ಸಾಧ್ಯತೆ!

Pinterest LinkedIn Tumblr


ಕೆಲವೇ ದಿನಗಳಲ್ಲಿ ಭಾರತದ ಹಲವೆಡೆ ಮುಂಗಾರು ಪ್ರವೇಶಿಸಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮುಂದಿನ 72 ಗಂಟೆಗಳಲ್ಲಿ ನೈಋತ್ಯ ಮುಂಗಾರು ಬಂಗಾಳದ ದಕ್ಷಿಣ ಕೊಲ್ಲಿಯಿಂದ ಹಿಡಿದು ಅಂಡಮಾನ್ ದ್ವೀಪಗಳು ಹಾಗೂ ಅಂಡಮಾನ್ ಸಮುದ್ರ ತೀರದ ಕೆಲ ಭಾಗಗಳಲ್ಲಿ ಮಳೆ ತರಲಿದೆ ಅಂತ ಇಲಾಖೆ ಮಾಹಿತಿ ನೀಡಿದೆ. ಮೇ 29 ರಿಂದ ಜೂನ್ 1ರ ನಡುವೆ ಈಶಾನ್ಯ ವಲಯದ ರಾಜ್ಯಗಳಾದ ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಹಾಗೂ ತ್ರಿಪುರಾದಲ್ಲಿ ಭಾರೀ ಮಳೆಯಾಗಲಿದೆ ಅಂತಲೂ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಈಗಾಗಲೇ ಕೆಲ ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದು, ಮಧ್ಯಪ್ರದೇಶ, ಛತ್ತೀಸ್​​ಗಢ, ಮಹಾರಾಷ್ಟ್ರ, ತೆಲಂಗಾಣ, ಹರಿಯಾಣ, ಚಂಡೀಘಢ, ದೆಹಲಿ, ರಾಜಸ್ಥಾನ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಹಾಗೂ ಒಡಿಶಾ ರಾಜ್ಯಗಳಲ್ಲಿ ಇನ್ನೂ 2ರಿಂದ 3 ದಿನಗಳ ಕಾಲ ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಾಗಲಿದೆ ಅಂತಲೂ ಇಲಾಖೆ ಮಾಹಿತಿ ನೀಡಿದೆ.

Comments are closed.