ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ 2ನೇ ಬಾರಿ ಭಾರೀ ಅಂತರದಿಂದ ಗೆದ್ದರು ಅವರಿಗೆ ಸ್ವ-ಹಿತಾಶಕ್ತಿ ಇಲ್ಲ, ದೇಶಕ್ಕಾಗಿ ಅವರು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಭಾಷಣ ಮಾಡಿದ್ದಾರೆ.
ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಘಟಿಕೋತ್ಸವದಲ್ಲಿಂದು ಮಾತನಾಡಿದ ಅವರು, ಮೋದಿ ಅವರು ದೇಶಕ್ಕಾಗಿ ಅರ್ಪಿಸಿಕೊಂಡಿದ್ದರಿಂದ ಮತ್ತೆ ಅವರು ಪ್ರಧಾನಿ ಆಗುತ್ತಿದ್ದಾರೆ. ಅವರು ಯಾವತ್ತೂ ದೇಶ..ದೇಶ..ದೇಶ..ಅಂತಾ ಹೇಳ್ತಾರೆ ಎಂದು ಸಚಿವ ಜಿ.ಟಿ ದೇವೇಗೌಡ ಮೋದಿ ಅವರನ್ನು ಕೊಂಡಾಡಿದ್ದಾರೆ.
ಇನ್ನು ನೀವು-ನಾವು ಎಲ್ಲರೂ ದೇಶಕ್ಕಾಗಿ ದುಡಿಯಬೇಕೆಂದು ಮೋದಿ ಹೇಳ್ತಾರೆ. ಒಬ್ಬ ಪ್ರಧಾನಿ ನಾನು ಸಂಸದನಂತೆ ಸರಳವಾಗಿ ಇರ್ತಿನಿ ಅಂತಾ ಹೇಳ್ತಾರೆ. ಮೋದಿ ಟೀ-ಕಾಫೀ ಮಾರಾಟ ಮಾಡಿ ಕಷ್ಟಪಟ್ಟು ಬಂದಿದ್ದೇನೆ ಎಂದು ಹೇಳ್ತಾರೆ ಎಂದರು.
ಅಲ್ಲದೇ ದೇವಾಲಯಕ್ಕೆ ಹೋಗಿ ನೂರ ಸಲ ಪ್ರದಕ್ಷಿಣೆ ಮಾಡೋದರಿಂದ ಅಲ್ಲ, ತಂದೆ-ತಾಯಿ ಆಶೀರ್ವಾದವನ್ನು ಪಡೆಯಬೇಕು, ಗುರು-ಹಿರಿಯರ ಆಶೀರ್ವಾದ ಪಡೆಯಬೇಕು ಆ ಮೂಲಕ ಈಗ ನರೇಂದ್ರ ಮೋದಿ ಅವರು ತಮ್ಮ ತಾಯಿ ಅವರಿಗೆ ಕಾಲು ಮುಗಿದು ನಮಸ್ಕಾರ ಮಾಡಿ ಎಲ್ಲರಿಗೂ ಮಾದರಿಯಾಗುವಂತೆ ತೋರಿಸಿದ್ದಾರೆ ಎಂದು ದೋಸ್ತಿ ಸರ್ಕಾರದ ಸಚಿವ ಜಿ.ಟಿ ದೇವೇಗೌಡ ಘಟಿಕೋತ್ಸವದಲ್ಲಿ ಮೋದಿ ಬಗ್ಗೆ ಮೆಚ್ಚುಗೆ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ.
Comments are closed.