ರಾಷ್ಟ್ರೀಯ

ರಾಜ್ಯದ ಯಾರಿಗೆ ಒಲಿಯಲಿದೆ ಕೇಂದ್ರದ ಮಂತ್ರಿ ಪಟ್ಟ

Pinterest LinkedIn Tumblr


ನವದೆಹಲಿ: 17ನೇ ಲೋಕಸಭಾ ಚುನಾವಣೆ ಫಲಿತಾಂಶ ಬಂದಿದ್ದು ಆಯ್ತು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು ಆಯ್ತು, ಮೇ 30ರಂದು ನರೇಂದ್ರ ಮೋದಿ ಅವರು 2ನೇ ಈ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಲ್ಲದೇ ಈಗ ರಾಜ್ಯದಲ್ಲಿ 25 ಸ್ಥಾನಗಳನ್ನು ಪಡೆದು ಮೋದಿ ಕೈ ಬಲಪಡಿಸಿರುವ ಬಿಜೆಪಿ ನಾಯಕರು ಸದ್ಯ ಚರ್ಚೆ ನಡೆಸುತ್ತಿರುವುದು ಯಾರಿಗೆ ಸಿಗಲಿದ ಮಂತ್ರಿ ಸ್ಥಾನ ಎಂಬುದಾಗಿದೆ.

ಕಳೆದ ಬಾರೀ ಕೇಂದ್ರ ಸಂಪುಟದಲ್ಲಿ ಮಂತ್ರಿ ಸ್ಥಾನ ಪಡೆದವರಿಗೆ ಈ ಸಲ ಮಂತ್ರಿ ಸ್ಥಾನ ಸಿಗುತ್ತಾ ಅಥವಾ ಹೊಸಬರಿಗೆ ಮೋದಿ ಅವಕಾಶ ಕೊಡಲಿದ್ದಾರಾ(?) ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಸಮುದಾಯದ ಆಧಾರದ ಮೇಲೆ ಸಚಿವ ಸ್ಥಾನ ಸಿಗಲಿದ್ಯಾ ಅಥವಾ ಅನುಭವನ್ನು ಪರಿಗಣಿಸಿ ಮಂತ್ರಿಸ್ಥಾನ ನೀಡಲಿದ್ದಾರಾ(?) ಎಂಬುದನ್ನು ಅಂದಾಜಿಸಲಾಗುತ್ತಿದೆ. ಬ್ರಾಹ್ಮಣ ಕೋಟಾದಲ್ಲಿ ಈ ಬಾರಿ ಧಾರವಾಡ ಕ್ಷೇತ್ರ ಬಿಜೆಪಿ ವಿಜೇತ ಅಭ್ಯರ್ಥಿ ಪ್ರಹ್ಲಾದ್ ಜೋಷಿಗೆ ಒಲಿಯಲಿದೆಯಾ ಅದೃಷ್ಟ(?) ಕಳೆದ ಸಲ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದ ದಿವಗಂತ ಅನಂತ್ ಕುಮಾರ್ ಸ್ಥಾನ ತುಂಬೋರ್ಯಾರು(?) ಮೈಸೂರು-ಕೊಡಗು ಕ್ಷೇತ್ರದಿಂದ ಎರಡು ಬಾರಿ ಗೆಲುವು ಪಡೆದಿರುವ ಯುವ ಸಂಸದ ಪ್ರತಾಪ್ ಸಿಂಹಗೂ ಒಲಿಯಲಿದೆಯಾ ಅದೃಷ್ಟ(?) ಎಂಬ ಚರ್ಚೆ ನಡೆಯುತ್ತಿದೆ.

ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಯುವಸಂಸದ ತೇಜಸ್ವಿ ಸೂರ್ಯ ಪರ ಕೆಲವು ಆರ್​​ಎಸ್​ಎಸ್ ನಾಯಕರು ಲಾಬಿ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಸೋಲಿಸಿದ ಡಾ. ಉಮೇಶ್ ಜಾಧವ್ ಕೇಂದ್ರ ಮಂತ್ರಿ ಆಗ್ತಾರಾ(?) ದೇವೆಗೌಡರ ವಿರುದ್ದ ಜಯ ಸಾಧಿಸಿದ ಜಿ.ಎಸ್ ಬಸವರಾಜು ಹೆಸರು ಕೂಡಾ ಮುನ್ನಾಲೆಗೆ ಬಂದಿದೆ.

ಇನ್ನೊಂದು ಕಡೆ ಬಿಎಸ್ ಯೂಡಿಯೂರಪ್ಪ ಅವರ ಆಪ್ತ ವಲಯದವರಾದ ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರ ಬಿಜೆಪಿ ವಿಜೇತ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ರಾಜ್ಯದಲ್ಲಿ ಗೆದ್ದಿರುವ ಮೊದಲ ಸಂಸದೆ ಮಹಿಳೆಯಾಗಿರುವುದರಿಂದ ಮಂತ್ರಿ ಸ್ಥಾನ ಸಿಗುವುದನ್ನು ತಳ್ಳಿಹಾಕುವಂತಿಲ್ಲ. ಇನ್ನೊಂದು ಕಡೆ ರಮೇಶ್ ಜಿಗಜಿಣಗಿ ಬದಲು ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಶ್ರೀನಿವಾಸ್ ಪ್ರಸಾದ್​ ಅವರಿಗೆ ಮಂತ್ರಿ ಸ್ಥಾನ ಸಿಗಬಹುದು ಎಂಬ ಮಾತುಕೇಳಿ ಬರುತ್ತಿವೆ.

ಅಲ್ಲದೇ ಕಳೆದ ಸಲ ಮಂತ್ರಿಯಾಗಿದ್ದ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ವಿಜೇತ ಅಭ್ಯರ್ಥಿ ಡಿ.ವಿ ಸದಾನಂದಗೌಡರಿಗೆ ಹಾಗೂ ವಿವಾದಿತ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ವಿಜೇತ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆಗೆ ಮೋದಿ ಸಂಪುಟದಲ್ಲಿ ಮಂತ್ರಿ ಸ್ಥಾನ ಈ ಬಾರಿ ಕೋಕ್ ನೀಡುವ ಸಾಧ್ಯತೆಯಿದೆ ಎಂದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

Comments are closed.