ಕನ್ನಡದ ಡಿಂಪಲ್ ಕ್ವೀನ್ ಖ್ಯಾತಿಯ ನಟಿ ರಚಿತಾ ರಾಮ್ ಅವರು ಇನ್ಮುಂದೆ ನಾನು ಅಂಥ ಪಾತ್ರಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಸಂಪ್ರದಾಯಸ್ಥ ಹೆಣ್ಣು ಮಗಳು ಎಂಬಂತಹ ಪಾತ್ರಗಳಿಗೆ ಸೂಕ್ತ ಆಯ್ಕೆ ಎಂಬಂತಿದ್ದ ನಟಿ ರಚಿತಾ ರಾಮ್ ಅವರು ಇದೀಗ ವಿಭಿನ್ನ ಪಾತ್ರದಲ್ಲಿ ನಟಿಸಲು ಹೋಗಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು, ನಟಿ ರಚಿತಾ ರಾಮ್ ಅವರು ಹಾಟ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ಕೆರಳಿಸಿದೆ ಎನ್ನಲಾಗಿದೆ.
ಈ ಮೊದಲು ಬುಲ್ ಬುಲ್, ರನ್ನ, ರಥಾವರ್, ಚಕ್ರವ್ಯೂಹ, ಭರ್ಜರಿ, ಅಯೋಗ್ಯ, ಸೀತಾರಾಮ ಕಲ್ಯಾಣ ಹೀಗೆ ತಮ್ಮ ಪ್ರತಿಯೊಂದು ಸಿನಿಮಾದಲ್ಲೂ ರಚಿತಾ ಹಳ್ಳಿ ಹುಡುಗಿ ಅಥವಾ ಗ್ಲಾಮರ್‌ಲೆಸ್ ರೋಲ್‌ನಲ್ಲೇ ಕಾಣಿಸಿಕೊಂಡಿದ್ದು ಹೆಚ್ಚು. ಆದರೆ ಇತ್ತೀಚಿನ ತಮ್ಮ ‘ಐ ಲವ್ ಯೂ’ ಚಿತ್ರದಲ್ಲಿ ರಚಿತಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅದು ಅವರ ಅಭಿಮಾನಿಗಳಿಗೆ ಇಷ್ಟವಾಗದೇ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದರೆ ಎನ್ನಲಾಗಿದೆ. ಐ ಲವ್ ಯೂ ಚಿತ್ರ ಇನ್ನೂ ತೆರಗೆ ಬಂದಿಲ್ಲವಾದರೂ ಬಿಡುಗಡೆಯಾಗಿರುವ ಟ್ರೇಲರ್ ಮತ್ತು ಹಾಡುಗಳ ಮೂಲಕ ರಚಿತಾ ಅಭಿಮಾನಿಗಳಿಗೆ ಐ ಲವ್ ಯೂ ಚಿತ್ರದಲ್ಲಿ ರಚಿತಾ ಲುಕ್ ರಿವೀಲ್ ಆಗಿದೆ. ಹೀಗಾಗಿ ಅವರ ಫ್ಯಾನ್ಸ್ ಬೇಸರಪಟ್ಟುಕೊಂಡಿದ್ದಾರಂತೆ.
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಐ ಲವ್ ಯೂ’ ಸಿನಿಮಾದಲ್ಲಿ ರಚಿತಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕೆ ಅಗತ್ಯವಿರುವ ಕಾರಣಕ್ಕೆ ಬೋಲ್ಡ್ ಆಗಿ ಕಾಣಿಸಿಕೊಂಡ ರಚಿತಾ ಇದೀಗ ಅಭಿಮಾನಿಗಳು ಬೇಸರಗೊಂಡ ತಕ್ಷಣ್ ಅಲರ್ಟ್ ಆಗಿದ್ದಾರೆ. ಕೆಲವರಿಗೆ ರಚಿತಾ ಮಾಡ್ ಲುಕ್ ಇಷ್ಟವಾಗಿದ್ದರೂ ಹಲವರಿಗೆ ಅದು ಕಿರಿಕಿರಿ ಉಂಟುಮಾಡಿದೆಯಂತೆ. ಹೀಗಾಗಿ ಅಭಿಮಾನಿಗಳು ‘ಆ ಥರದ’ ಪಾತ್ರ ಬೇಡ ಎಂದು ಬೇರೆ ಬೇರೆ ರೀತಿಯಲ್ಲಿ ರಚಿತಾಗೆ ಮೆಸೇಜ್ ಮುಟ್ಟಿಸಿದ್ದಾರಂತೆ.
‘ಐ ಲವ್ ಯೂ’ ಸಿನಿಮಾದಲ್ಲಿ ರಚಿತಾ ರಾಮ್ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಒಂದು ಹಾಡು ಮತ್ತು ಕೆಲವು ದೃಶ್ಯಗಳಲ್ಲಿ ಹಾಟ್ ಆಗಿ ರಚಿತಾ ರಾಮ್ ಅಭಿನಯಿಸಿದ್ದಾರಂತೆ. ಇದು ಅಭಿಮಾನಿಗಳಿಗೆ ನೋವು ಉಂಟು ಮಾಡಿದೆ. ರಚಿತಾ ರಾಮ್ ಇಷ್ಟು ಬೋಲ್ಡ್ ಮಾತ್ರ ಮಾಡಬಾರದು. ಇಂತಹ ಪಾತ್ರದಲ್ಲಿ ನೋಡಲು ಕಷ್ಟವಾಗುತ್ತದೆ ಎಂದಿದ್ದಾರೆ ಎನ್ನಲಾಗಿದೆ. ಇದೀಗ ಅಭಿಮಾನಿಗಳ ಅಭಿಪ್ರಾಯಕ್ಕೆ ಬೆಲೆಕೊಟ್ಟ ರಚಿತಾ ತಾವು ಇನ್ಮುಂದೆ ಇಂಥ ಪಾತ್ರ ಮಾಡುವುದಿಲ್ಲ ಎಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ.
Comments are closed.