ರಾಷ್ಟ್ರೀಯ

ಮತ್ತೊಬ್ಬ ತೃಣಮೂಲ ಕಾಂಗ್ರೆಸ್ ಶಾಸಕ ಮೋನಿರುಲ್ ಇಸ್ಲಾಂ ಬಿಜೆಪಿಗೆ ಸೇರ್ಪಡೆ

Pinterest LinkedIn Tumblr


ನವದೆಹಲಿ:ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಗೆ ಮತ್ತೊಂದು ಆಘಾತ ಎಂಬಂತೆ ಟಿಎಂಸಿ ಶಾಸಕ ಮೋನಿರುಲ್ ಇಸ್ಲಾಮ್ ಬುಧವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ತೃಣಮೂಲ ಕಾಂಗ್ರೆಸ್ ನ ಇಬ್ಬರು ಶಾಸಕರು, 50 ಮಂದಿ ಕೌನ್ಸಿಲ್ ರ್ ಗಳು ಬಿಜೆಪಿ ಸೇರಿದ್ದ ಬೆನ್ನಲ್ಲೇ ಇಂದು ಮತ್ತೊಬ್ಬರು ಟಿಎಂಸಿ ಶಾಸಕ ಬಿಜೆಪಿ ಸೇರ್ಪಡೆಗೊಳ್ಳುವ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಭಾರೀ ಹಿನ್ನಡೆಯಾದಂತಾಗಿದೆ.

ತೃಣಮೂಲ ಕಾಂಗ್ರೆಸ್ ಶಾಸಕ ಮೋನಿರುಲ್ ಇಸ್ಲಾಮ್ ಹಾಗೂ ಟಿಎಂಸಿ ಯೂತ್ ವಿಂಗ್ ನ ಇಬ್ಬರು ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಆಸೀಫ್ ಇಕ್ಬಾಲ್ ಮತ್ತು ಗಧಾಧರ್ ಹಾಜ್ರಾ, ಪಕ್ಷದ ಮುಖಂಡ ನಿಮೈ ದಾಸ್ ಜೊತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಮೋನಿರುಲ್ ಇಸ್ಲಾಂ ಸೇರ್ಪಡೆಯಿಂದಾಗಿ, ಟಿಎಂಸಿ ಮುಸ್ಲಿಂ ಶಾಸಕರೂ ಕೂಡಾ ಬಿಜೆಪಿ ಸೇರ್ಪಡೆಯಾಗಿರುವುದು ಪ್ರಧಾನಿ ನರೇಂದ್ರ ಮೋದಿಯವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷಣೆಗೆ ಧ್ಯೋತಕವಾಗಿದೆ ಎಂದು ಬಿಜೆಪಿ ಅಭಿಪ್ರಾಯವ್ಯಕ್ತಪಡಿಸಿದೆ.

Comments are closed.