ಅಂತರಾಷ್ಟ್ರೀಯ

ಕೊಹ್ಲಿಯನ್ನು ಅಭಿನಂದನ್​ ರೀತಿ ವಿಚಾರಣೆಗೆ ಒಳಪಡಿಸಿದ ಪಾಕ್!

Pinterest LinkedIn Tumblr


ಭಾರತ-ಪಾಕಿಸ್ತಾನ ಪಂದ್ಯಕ್ಕೆ ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಮೆಗಳು ಕೂಡ ಹರಿದಾಡುತ್ತಿವೆ. ಈಗ ಇಂಡಿಯಾ-ಪಾಕ್​ ಮ್ಯಾಚ್​ ಕುರಿತು ಹರಿಬಿಡಲಾದ ಹೊಸ ವಿಡಿಯೋ ಸದ್ಯದ ಹಾಟ್​ ಟ್ರೆಂಡ್​ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎಂಬುದಕ್ಕೆ ಈ ಸ್ಟೋರಿ ಓದಿ.

ಪಾಕಿಸ್ತಾನ ಸೇನೆ ಬಂಧಿಸಿದ್ದ ಭಾರತ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ವಿಚಾರ ಭಾರೀ ಸದ್ದು ಮಾಡಿತ್ತು. ಪಾಕಿಸ್ತಾನ ಸೇನೆ ಅಭಿನಂದನ್​ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿತ್ತು. ‘ನಿಮ್ಮ ಉದ್ದೇಶವೇನು? ಟೀ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಪಾಕ್​ ಅಧಿಕಾರಿಗಳು ಅಭಿನಂದನ್​ಗೆ ಮುಂದಿಟ್ಟಿದ್ದರು.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಕೂಡ ಆಗಿತ್ತು. ಇದೇ ಮಾದರಿಯಲ್ಲಿ ವಿಡಿಯೋ ಒಂದನ್ನು ಸಿದ್ಧಪಡಿಸಲಾಗಿದೆ.

ವೈರಲ್​ ಆದ ವಿಡಿಯೋದಲ್ಲಿ ಸಂದರ್ಶನಕ್ಕೊಳಗಾಗುವ ವ್ಯಕ್ತಿ ಅಭಿನಂದನ್​ ರೀತಿಯಲ್ಲೇ ಕಾಣುತ್ತಾರೆ. ಈ ಜಾಹಿರಾತಿನ ತಾತ್ಪರ್ಯವೆಂದರೆ ಭಾರತೀಯ ತಂಡದ ಕಪ್ತಾನ ವಿರಾಟ್​ ಕೊಹ್ಲಿ, ಅಭಿನಂದನ್​ ವರ್ಧಮಾನ್​. ಪಾಕಿಗರು ಮ್ಯಾಚ್​ಗೆ ಮುನ್ನ ಕೊಹ್ಲಿಯನ್ನು ಬಂಧಿಸಿರುತ್ತಾರೆ ಮತ್ತು ವಿಚಾರಣೆ ನಡೆಸುತ್ತಾರೆ. ವಿಚಾರಣೆಯಲ್ಲಿ ಅಭಿನಂದನ್​ಗೆ ಪಾಕ್​ ಸೇನೆ ಪ್ರಶ್ನಿಸಿದಂತೆ ಪ್ರಶ್ನಿಸುತ್ತಾರೆ.

ಒಟ್ಟಿನಲ್ಲಿ ಪಾಕಿಸ್ತಾನದವರು ಅಭಿನಂದನ್​ ಮಾದರಿಯಲ್ಲಿ ಕೊಹ್ಲಿಯವರನ್ನು ಸಂದರ್ಶನ ಮಾಡುತ್ತಿದ್ದಾರೆ ಎಂಬುದನ್ನು ಸೂಚ್ಯವಾಗಿ ತೋರಿಸಲಾಗಿದೆ. ‘ನೀವು ಟಾಸ್​ ಗೆದ್ದರೆ ಏನು ಮಾಡುತ್ತೀರಿ?, ’11 ಜನರ ತಂಡದಲ್ಲಿ ಯಾರೆಲ್ಲ ಇರುತ್ತಾರೆ’ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಈ ವೇಳೆ ಅಭಿನಿಂದನ್​ ರೀತಿ ಕಾಣುವ ವ್ಯಕ್ತಿ, ‘ನಾನು ಅದನ್ನು ಹೇಳಲು ಸಾಧ್ಯವಿಲ್ಲ’ ಎನ್ನುವ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲ ಟೀ ಚೆನ್ನಾಗಿದೆಯೇ ಎಂದು ಕೇಳುವ ಮೂಲಕ ಅಭಿನಂದನ್​ ಅವರ ವಿಡಿಯೋವನ್ನು ನೆನಪಿಸಿದೆ.

ಪಾಕಿಸ್ತಾನದ ಈ ಜಾಹೀರಾತನ್ನು ಭಾರತೀಯರು ಕೇವಲ ಹಾಸ್ಯ ಎಂದು ಪರಿಗಣಿಸಿಲ್ಲ. ಯಾಕೆಂದರೆ ಅಭಿನಂದನ್​ ವರ್ಧಮಾನ್​ರನ್ನು ಪಾಕ್​ ವಶಕ್ಕೆ ಪಡೆದಾಗ ಪ್ರತಿಯೊಬ್ಬ ಭಾರತೀಯನ ದೇಶಾಭಿಮಾನ ಕೆರಳಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಜಾಹೀರಾತಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಇನ್ನು, ಮೌಕಾ ಮೌಕಾ ಹಾಡು ಕೂಡ ಭಾರಿ ವೈರಲ್​ ಆಗಿದೆ. 2015ರ ಏಕದಿನ ಕ್ರಿಕೆಟ್ ವಿಶ್ವಕಪ್ ವೇಳೆ ಆರಂಭವಾದ ಜಾಹೀರಾತು ಇದೀಗ ಮತ್ತೆ ಬಂದಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದ ಸಮಯದಲ್ಲಿ ಈ ಜಾಹೀರಾತು ಸಿಕ್ಕಾಪಟ್ಟೆ ಹಿಟ್​ ಆಗಿತ್ತು. ಈಗ ಇದೇ ಕಾನ್ಸೆಪ್ಟ್​ ಇಟ್ಟುಕೊಂಡು ಹೊಸದೊಂದು ವಿಡಿಯೋ ಮಾಡಲಾಗಿದೆ.

Comments are closed.