ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೆ ಮೊದಲು ಪ್ರಪೋಸ್ ಮಾಡಿದ ಹುಡುಗ ಹಾಗೂ ಮೊದಲ ಕ್ರಶ್ ಯಾರೆಂದು ರಿವೀಲ್ ಆಗಿದೆ. ಈ ಹುಡುಗನಿಗೆ ಅಂಬಿ ಸಿಕ್ಕಾಗಲೆಲ್ಲಾ ಈ ಮಾತು ಹೇಳುತ್ತಿದ್ದರಂತೆ. ಯಾರು ಆ ನಟ ಏನು ಆ ಮಾತು ಇಲ್ಲಿದೆ ನೋಡಿ.
ಸುಮಾರು ಮೂವತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿ ಮಿಂಚಿದ ಬಹುಭಾಷ ನಟಿ ಸುಮಲತಾ ಸಿನಿ ಜರ್ನಿ ಶುರು ಮಾಡಿದಾಗ ಈ ನಟ ಪುಟ್ಟ ಬಾಲಕನಾಗಿದ್ದಾಗ ಫಸ್ಟ್ ಪ್ರಪೋಸ್ ಮಾಡಿದ್ದರಂತೆ.
ಹೌದು ಸುಮಲತಾಗೆ ಫಸ್ಟ್ ಪ್ರಪೋಸ್ ಮಾಡಿದ್ದು ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಸುಮಲತಾ ಮೊದಲ ಸಿನಿಮಾ ‘ರವಿಚಂದ್ರನ್’ ಮಾಡುವಾಗ ಅವರು 16 ವರ್ಷದ ಟೀನೆಜ್ ಹುಡುಗಿ. ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್‌ಗೆ 6 ವರ್ಷವಷ್ಟೇ. ಶೂಟಿಂಗ್ ಮುಗಿಸಿಕೊಂಡು ಇಬ್ಬರು ಸೆಟ್‌ನಲ್ಲೇ ಆಟವಾಡುತ್ತಾ ಸಮಯ ಕಳೆಯುತ್ತಿದ್ದರು.
ಒಂದು ದಿನ ಶೂಟಿಂಗ್ ನಂತರ ಪುನೀತ್ ಮನೆಗೆ ಹೋಗಿ ‘ನಾನು ಮದುವೆ ಆಗುವುದಾದರೆ ಅದು ಸುಮಲತಾರನ್ನೇ ಎಂದು ನಿರ್ಧರಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ‘ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ ನಾನು’ ಎಂಬ ಹಾಡನ್ನು ಕೇಳಿ ಪ್ರಪೋಸ್ ಮಾಡಿದ್ದು ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸುಮಲತಾ ನೆನಪಿಸಿಕೊಂಡಿದ್ದಾರೆ.
ಅಂಬರೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಮಲತಾ ಈ ವಿಚಾರವನ್ನು ಅಂಬಿಯೊಂದಿಗೆ ಹಂಚಿಕೊಂಡಿದ್ದರಂತೆ. ಅಂದಿನಿಂದ ಪುನೀತ್ ಅಂಬಿಯನ್ನು ಮೀಟ್ ಮಾಡಿದಾಗಲೆಲ್ಲಾ ‘ನನ್ನ ಮಗನೇ ನೀನು ಅವಾಗಲೇ ನನ್ನ ಹೆಂಡತಿನಾ ಮದುವೆ ಆಗ್ತೀನಿ ಅಂತ ಹೇಳಿದ್ಯಾ’ ಎಂದು ರೇಗಿಸುತ್ತಿದ್ದರಂತೆ.
ಇನ್ನು 13 ವರ್ಷವಿದ್ದಾಗ ಸುಮಲತಾ ‘ಮನ್ಮದ ಲೀಲಾ’ ಚಿತ್ರ ನೋಡಿ ಕಮಲ್ ಹಾಸನ್‌ಗೆ ಫುಲ್ ಫಿದಾ ಆಗಿದ್ದರಂತೆ. ಸುಮಲತಾ ಪುಸ್ತಕವೊಂದರಲ್ಲಿ ಕಮಲ್ ಹಾಸನ್ ಫೋಟೋ ಅಂಟಿಸಿ ಇಟ್ಟುಕೊಂಡಿದ್ದರಂತೆ!
Comments are closed.