ಮನೋರಂಜನೆ

ಪುರುಷರ ಕಾಟದಿಂದ ಬೆಸತ್ತಿರುವ ಬಾಲಿವುಡ್​ ನಟ!

Pinterest LinkedIn Tumblr


ಸಾಮಾನ್ಯವಾಗಿ ಚಿತ್ರವೊಂದು ಹಿಟ್​ ಆದರೆ ನಟ-ನಟಿಯರಿಗೆ ನೇಮು-ಫೇಮು ಬಂದು ಬಿಡುತ್ತದೆ. ಹಾಗೆಯೇ ಇಂತಹ ನಾಯಕ ನಾಯಕಿಯರ ಹಿಂದೆ ಒಂದಷ್ಟು ಅಭಿಮಾನಿಗಳ ಬಳಗ ಕೂಡ ಹುಟ್ಟಿಕೊಳ್ಳುವುದು ಸಹಜ. ಇಲ್ಲಿ ನಟರ ಹಿಂದೆ ಯುವತಿಯರು ಮುಗಿ ಬಿದ್ದರೆ, ನಟಿಮಣಿಯರಿಗಾಗಿ ಹೈಕ್ಳ ದಂಡೇ ಸೇರುವುದು ಸಾಮಾನ್ಯ. ಆದರೆ ಬಾಲಿವುಡ್​ನ ಹೊಸ ನಟನೊಬ್ಬನ ಪರಿಸ್ಥತಿ ಮಾತ್ರ ತೀರಾ ವಿಭಿನ್ನ.

ಬಿಟೌನ್​​ನಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ಅರ್ಜುನ್ ಮಾಥುರ್ ಎಂಬ ನಟನಿಗೆ ಯುವಕರಿಂದ ಅಸಭ್ಯ ರೀತಿಯ ಸಂದೇಶಗಳು ಬರುತ್ತಿವೆಯಂತೆ. ಅದರಲ್ಲೂ ಕೆಲವರು ತನ್ನನ್ನು ಮದುವೆಯಾಗುವಂತೆ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಯುವ ನಟ ಅಳಲು ತೋಡಿಕೊಂಡಿದ್ದಾರೆ.

ಇದಕ್ಕೆಲ್ಲಾ ಕಾರಣವಾಗಿರುವುದು ಅರ್ಜುನ್ ನಟಿಸಿರುವ ಹೊಸ ವೆಬ್​ ಸಿರೀಸ್. ‘ಮೇಡ್​ ಇನ್ ಹೆವೆನ್’ ಎಂಬ ವೆಬ್ ಸರಣಿಯಲ್ಲಿ ಸಲಿಂಗಿ ಪಾತ್ರವನ್ನು ಅರ್ಜುನ್ ನಿರ್ವಹಿಸಿದ್ದರು. ದಿನ ಬೆಳಗಾಗುವುದರೊಳಗೆ ಈ ವೆಬ್​ ಸಿರೀಸ್ ಹಿಟ್ ಆಗಿದೆ. ಒಂದಷ್ಟು ಚಿತ್ರಗಳಲ್ಲಿ ಬಣ್ಣ ಹಚ್ಚಿದರೂ ಸಿಗದ ಜನಪ್ರಿಯತೆ ವೆಬ್​ ಸಿರೀಸ್​ನಿಂದ ಸಿಕ್ಕಿದ ಖುಷಿಯಲ್ಲಿದ್ದರು ಯುವ ನಟ.

ಆದರೆ ಈ ಫೇಮ್ ಇದೀಗ ನಟನ ನಿದ್ದೆಗೆಡಿಸಿದೆ. ದಿನಂಪ್ರತಿ ಅರ್ಜುನ್​ಗೆ ನೂರಾರು ಮೆಸೇಜ್​ಗಳು ಬರುತ್ತಿದೆಯಂತೆ. ಅದರಲ್ಲಿ ಹೆಚ್ಚಿನವು ಅಸಭ್ಯದಿಂದ ಕೂಡಿರುತ್ತದೆ. ಮತ್ತೆ ಕೆಲವರು ನೀವು ಸಲಿಂಗಿ ನಾ ಎಂದು ಕೇಳುತ್ತಿದ್ದಾರೆ. ಇನ್ನು ಕೆಲವರು ತನ್ನನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಿದ್ದಾರೆ ಎಂದು ನಟ ನೋವು ತೋಡಿಕೊಂಡಿದ್ದಾರೆ.

ನಾನು ಈ ಹಿಂದೆ ಕೂಡ ಸಲಿಂಗಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದೇನೆ. ಆದರೆ ಈ ಬಾರಿ ನನ್ನ ಪಾತ್ರವನ್ನು ಎಲ್ಲರೂ ಗುರುತಿಸಿಕೊಂಡಿದ್ದಾರೆ. ನಮ್ಮ ಸಮಾಜದಲ್ಲಿ ಸಲಿಂಗಿಗಳಿಗೆ ಗೌರವ ನೀಡುತ್ತಿಲ್ಲ. ಆದರೆ ಈ ವೆಬ್​ ಸಿರೀಸ್​ನಿಂದ ಅದು ದೂರವಾಗುವ ಆತ್ಮ ವಿಶ್ವಾಸವಿದೆ ಎಂದು ಮೆಸೇಜ್ ಮಾಡಿದವರು ಇದ್ದಾರೆ. ಇದೆಲ್ಲವೂ ಖುಷಿ ಕೊಟ್ಟರೂ, ಅದಕ್ಕಿಂತ ಹೆಚ್ಚಾಗಿ ನನಗೆ ಬರುತ್ತಿರುವ ಕೆಟ್ಟ ಮೆಸೇಜ್​ಗಳೇ ಈಗ ಚಿಂತೆಯಾಗಿದೆ ಎಂದಿದ್ದಾರೆ ಅರ್ಜುನ್.

ಹಾಗೆಯೇ ನಾನು ತೆರೆ ಮೇಲೆ ಕಾಣಿಸಿಕೊಳ್ಳುವ ಪಾತ್ರಕ್ಕೂ ನಿಜ ಜೀವನಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರಗಳಲ್ಲಿ ಮೂಡಿ ಬರುವ ರೋಲ್​ಗಳನ್ನು ಹೋಲಿಸಿ ನನಗೆ ಮೆಸೇಜ್ ಮಾಡಬೇಡಿ ಎಂದು ಅರ್ಜುನ್ ಮಾಥುರ್ ಮನವಿ ಮಾಡಿಕೊಂಡಿದ್ದಾರೆ. ‘ದಿ ಆ್ಯಕ್ಸಿಡೆಂಟಲ್ ಪ್ರೈಮ್‍ ಮಿನಿಸ್ಟರ್’ ಸಿನಿಮಾದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಾತ್ರದಲ್ಲಿ ಅರ್ಜುನ್ ಅಭಿನಯಿಸಿದ್ದರು. ಈ ಪಾತ್ರದ ಬಳಿಕ ಅರ್ಜುನ್​ಗೆ ಅವಕಾಶ ಮಹಾಪೂರವೇ ಹರಿದು ಬರುತ್ತಿವೆಯಂತೆ.

Comments are closed.