ಕರಾವಳಿ

ಪ್ರೀತಿ ಎಂದರೇನು ? ಬಲ್ಲಿರಾ..!

Pinterest LinkedIn Tumblr

ಭಕ್ತಿ,ಆರಾಧನೆ, ಪೂಜ್ಯ ಭಾವನೆ, ಸೂಜಿಗಲ್ಲಿನಂಥ ಮನಸೆಳೆತ…… ಊಹುಂ ಗೊತ್ತಿಲ್ಲ.
ಆದರೆ ಇಲ್ಲಿರುವ ಕೆಲ ಚಿಂತನೆಗಳಲ್ಲಿ ಅದು ಇರಬಹುದೇನೋ.
* ತನ್ನ ಇಡೀ ಜೀವನವನ್ನು ಭಾರತದ ಬಿಡುಗಡೆಗಾಗಿ ಮುಡಿಪಿಟ್ಟ ಗಾಂಧೀಜಿ ಈ ದೇಶ ವಾಸಿಗಳ ಮೇಲೆ ಇಟ್ಟದ್ದು
* ಬೇಕೆಂದಷ್ಟೂ ಐಹಿಕ ಸಂಪತ್ತು ಗಳಿಸಬಹುದಾಗಿದ್ದರೂ ಜೀವನದುದ್ದಕ್ಕೂ ಬಡತನವನ್ನೇ ಉಂಡು,ಹಾಸಿ,ಹೊದ್ದು ಜಗತ್ತಿಗೇ ಜಗದ ರಸದೌತಣ ಉಣಬಡಿಸಿದ ಸಾಹಿತಿಗಳಾದ, ಬೇಂದ್ರೆ, ಡಿ.ವಿ.ಗುಂಡಪ್ಪನಂಥವರು ಈ ಬದುಕನ್ನು ಬದುಕಿದ ರೀತಿ ಇದೆಯಲ್ಲ….ಅದು
* ಕೆ.ಎಸ್.ನರಸಿಂಹ ಸ್ವಾಮಿಯವರು ಜೀವನವನ್ನು ನೋಡಿದ ರೀತಿ..
* ಪ್ರತಿಯೊಬ್ಬರ ಜೀವನದ ಮೊಟ್ಟ ಮೊದಲ ಆಕಾಶ,ಅದ್ಭುತ,ಆಶ್ಚರ್ಯ,ಬೆರಗು THE REAL HERO ‘ಅಪ್ಪ‘ ತನ್ನ ಮಕ್ಕಳಿಗಾಗಿ ಮಾಡುವುದು ಕೇವಲ ಅಪ್ಪನ ಕರ್ತವ್ಯವೇ ?
* ಜಗತ್ತಿನ ಎಲ್ಲ ಮಕ್ಕಳ ಮೇಲೆ ಮದರ್ ಥೆರೇಸಾ ಇಟ್ಟಿದ್ದು ಮತ್ತು ಎಲ್ಲರೂ ಆಕೆಯಲ್ಲಿ ಕಂಡದ್ದು
* ಇಡೀ ಜೀವನವನ್ನು ಕಲೆಗಾಗಿ ಮುಡಿಪಿಡುವ ಒಬ್ಬ ಕಲಾವಿದ ತನಗೆ ಸಲ್ಲುವ ಒಂದು ಸಣ್ಣ ಸನ್ಮಾನ ಸ್ವೀಕರಿಸಲು ಹಾತೊರೆಯುವ ಅವನಲ್ಲಿರುವ ಜೀವನಪ್ರೀತಿ ಜೀವಸೆಲೆಯಲ್ಲವೇ
* ಯಾವ ಲಾಭವಿರದಿದ್ದರೂ ನಮ್ಮ ಕೆಲಸ ಮಾಡಿ ಕೊಡುವ, ಕಲಿಸುವ, ಸಹಾಯ ಮಾಡುವ , ನಮ್ಮನ್ನು ಸದಾ ಗಮನಿಸುವ, ಆದರೆ ನಮಗೆ ಅಪರಿಚಿತರಾದ ಅವರು ನಮ್ಮ ಮೇಲೆ ತೋರಿಸುವುದು ?
* ಏನೇ ತಪ್ಪು ಮಾಡಿದರೂ ಕ್ಷಮಿಸುವ ಗುಣವೇಕೆ ಇರಬೇಕು ಜಗದಲ್ಲಿ ? ಮನಸ್ಸು ಮನುಷ್ಯನನ್ನು ಆಳುತ್ತದೆ, ಮನುಷ್ಯ ತಪ್ಪು ಮಾಡುತ್ತಾನೆ. ನ್ಯಾಯ,ನೀತಿ,ಕಾನೂನು ಮಾನವನ ಅಪರಾಧಗಳನ್ನು ನಿಯಂತ್ರಿಸುತ್ತವೆ. ಎಲ್ಲವನ್ನೂ ಮೀರಿದ್ದು ಕಾನೂನು. ಕಾನೂನಿಗೂ ಮಿಗಿಲಾದದು ಯಾವುದು ? ……..ಕಾನೂನಿನಿಂದಲೂ ತಿದ್ದಲಾಗದ್ದನ್ನು ತಿದ್ದವುದು ಯಾವುದು ?

ಬದುಕಿನ ಒಂದು ವಿಚಿತ್ರ ನಿಯಮ..
ಪ್ರೀತಿಸುವುದೆಲ್ಲಾ ಸಿಗುವುದಾದರೆ ಕಣ್ ನೀರಿಗೆ ಬೆಲೆ ಎಲ್ಲಿದೆ..
ಸಿಗುವುದೆಲ್ಲಾವನ್ನು ಪ್ರೀತಿಸುವುದಾದರೆ ಕಣ್ಣೀರಿಗೆ ಅವಕಾಶ  ಎಲ್ಲಿದೆ….

” ತೇನವಿನಾ ತೃಣಮಪಿ ನ ಚಲಿತ”
ಭಗವಂತನ ಇಚ್ಛೆ ಇಲ್ಲದೇ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲವೆಂದ ಮೇಲೆ ಭಗವಂತನೇ ಪ್ರೇಮರೂಪಿಯಾಗಿ ಎಲ್ಲರ ಹೃದಯದಲ್ಲೂ ಪ್ರತಿಷ್ಠಾಪನೆಗೊಂಡಿರುವಾಗ ಪ್ರೀತಿಯಿಲ್ಲದೇ ಜಗದ ಯಾವ ಅಣುವೂ ಸಹ ಸಜೀವವಲ್ಲ.

Comments are closed.