ನವದೆಹಲಿ: ಸತತ ಪರಿಶ್ರಮದ ಬಳಿಕ ಕೊನೆಗೂ ವಾಯುಸೇನೆಯ ರಕ್ಷಣಾ ಕಾರ್ಯಾಚರಣೆ ತಂಡ ಎಎನ್32 ವಿಮಾನ ಪತನ ಸ್ಥಳ ತಲುಪಿದ್ದು, ವಿಮಾನದಲ್ಲಿದ್ದ ಎಲ್ಲ ಸಿಬ್ಬಂದಿಗಳೂ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಸತತ 2 ದಿನಗಳ ಪರಿಶ್ರಮದ ಬಳಿಕ ಇಂದು ರಕ್ಷಣಾ ಕಾರ್ಯಾಚರಣೆ ತಂಡ ಘಟನಾ ಸ್ಥಳ ತಲುಪಿದ್ದು, ಘಟನೆಯಲ್ಲಿ ವಿಮಾನದೊಳಗಿದ್ದ ಎಲ್ಲ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ.
ಮೃತರನ್ನು ವಿಂಗ್ ಕಮಾಂಡರ್ ಜಿಎಂ ಚಾರ್ಲ್ಸ್, ಸ್ಕ್ವಾಡ್ರನ್ ಲೀಡರ್ ಹೆಚ್ ವಿನೋದ್, ಫ್ಲೈಟ್ ಲೆಫ್ಟಿನೆಂಟ್ ಆರ್ ಥಾಪಾ, ಫ್ಲೈಟ್ ಲೆಫ್ಟಿನೆಂಟ್ ಎ ತನ್ವರ್, ಫ್ಲೈಟ್ ಲೆಫ್ಟಿನೆಂಟ್ ಎಸ್ ಮೊಹಾಂತಿ, ಫ್ಲೈಟ್ ಲೆಫ್ಟಿನೆಂಟ್ ಎಂಕೆ ಗರ್ಗ್, ವಾರಂಟ್ ಆಫೀಸರ್ ಕೆಕೆ ಮಿಶ್ರಾ, ಸರ್ಗೆಂಟ್ ಅನೂಪ್ ಕುಮಾರ್, ಕಾರ್ಪೋರಲ್ ಶೆರಿನ್, ಲೀಡ್ ಏರ್ ಕ್ರಾಫ್ಟ್ ಮನ್ ಎಸ್ ಕೆ ಸಿಂಗ್, ಲೀಡ್ ಏರ್ ಕ್ರಾಫ್ಟ್ ಮನ್ ಪಂಕಜ್, ನಾನ್ ಕಾಂಬಾಟಂಟ್ ಎಂಪ್ಲಾಯ್ ಪುತಲಿ, ನಾನ್ ಕಾಂಬಾಟಂಟ್ ಎಂಪ್ಲಾಯ್ ರಾಜೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಎಲ್ಲ ಸಿಬ್ಬಂದಿಗಳಿಗೂ ವಾಯುಸೇನೆ ಶ್ರದ್ಧಾಂಜಲಿ ಅರ್ಪಿಸಿದೆ.
ಅಸ್ಸಾಂನ ಜೊರ್ಹಟ್ ವಿಮಾನ ನಿಲ್ದಾಣನಿಂದ ಟೇಕ್ ಆಫ್ ಆಗಿದ್ದ ಭಾರತೀಯ ವಾಯುಪಡೆಯ ಎನ್-32 ಮಿಲಿಟರಿ ಸಾಗಣೆ ಯುದ್ಧ ವಿಮಾನ ಜೂನ್ 3ರಂದು ನಿಗೂಢವಾಗಿ ಕಣ್ಮರೆಯಾಗಿತ್ತು, ವಿಮಾನದ ಪತ್ತೆಗಾಗಿ ವಾಯುಸೇನೆ, ನೌಕಾದಳ ಮತ್ತು ಇಸ್ರೋ ಉಪಗ್ರಹಗಳು ವಿಮಾನದ ಶೋಧ ಕಾರ್ಯಾಚರಣೆ ನಡೆಸಿದ್ದವು. ಇದೀಗ ವಿಮಾನ ಪತನವಾದ ಸ್ಥಳ ಪತ್ತೆಯಾಗಿದ್ದು, ಅರುಣಾಚಲ ಪ್ರದೇಶದ ಪರ್ವತಗಳಲ್ಲಿ ವಿಮಾನ ಪತನವಾಗಿತ್ತು,
Comments are closed.