ಬೆಂಗಳೂರು: ಖ್ಯಾತ ನಾಟಕಕಾರ, ನಟ, ನಿರ್ದೇಶಕ, ಗಿರೀಶ್ ಕಾರ್ನಾಡ್ ಇದೇ ಸೋಮವಾರ ನಿಧನರಾಗಿದ್ದಾರೆ. ಇದೀಗ ಅವರ ಪುತ್ರ ಪತ್ರಕರ್ತ ಮತ್ತು ಲೇಖಕರಾದ ರಘು ಕಾರ್ನಾಡ್ ತಮ್ಮ ತಂದೆಯ ಅಂತಿಮ ದಿನಗಳನ್ನು ನೆನೆದು ಫೇಸ್ ಬುಕ್ ಪೋಸ್ಟ್ ಮಾಡಿದ್ದಾರೆ.
“ನನ್ನ ಮನಸ್ಸಿನಲ್ಲಿ ಬೇರೂರಿದ ಚಿತ್ರದಲ್ಲಿ ನನ್ನ ತಂದೆ ಸೋಫಾ ಮೇಲೆ ತನ್ನ ವಿಸ್ಕಿ ಗ್ಲಾಸ್ ಹಿಡಿದು ಇತಿಹಾಸ, ದಂತಕಥೆ, ಹಾಡು, ಜನಪದ, ತತ್ತ್ವಶಾಸ್ತ್ರದ ಕುರಿತಂತೆ ವಿವರಿಸುತ್ತಿರುವುದು ಕಾಣುತ್ತೇನೆ. ಅವರು ನನ್ನ ಪ್ರೀತಿಯ ವ್ಯಕ್ತಿಯಾಗಿದ್ದರು.
“ಕಳೆದ ವಾರ ನಾನು ಹಾಗೂ ನನ್ನ ಸೋದರಿ ಸ್ನೇಹಿತರೊಬ್ಬರ ಮದುವೆ ಸಲುವಾಗಿ ನನ್ನ ಮನೆಯಲ್ಲೇ ಇದ್ದೆವು. ಆ ಶನಿವಾರ ರಾತ್ರಿ ನನ್ನ ತಂದೆ ಆರ್ಶಿಯಾ ಸತ್ತರ್ ಗೆ ಸಂದರ್ಶನ ನೀಡಿದ್ದರು.ಭಾನುವಾರ ಸಂಜೆ ನಾವೆಲ್ಲ್ ಮನೆಯ ಟೆರೇಸ್ ಗೆ ಹೋಗಿ ಕೆಲ ಸಮಯ ಒಟ್ಟಾಗಿ ಕಳೆದಿದ್ದೆವು. ನಾನು ಅವರಿಗೆ ಫಿಸಿಯೋ ಥೆರಪಿ ಮಾಡಿಸಿದ್ದೆ. ನನ್ನ ಸೋದರಿ ಅವರ ಉಗುರುಗಳನ್ನು ಕತ್ತರಿಸಿದ್ದಳು.ಅವರ ಆರೋಗ್ಯದ ಬಗೆಗೆ ಮಾತನಾಡುತ್ತಾ ನಾವು ಕಳವಳ ವ್ಯಕ್ತಪಡಿಸಿದ್ದೆವು. ಆದರೆ ಅತ್ಯಂತ ದುಃಖಕರ ವಿಚಾರವೆಂದರೆ ಮರುದಿನ ಸೋಮವಾರವೇ ಅವರು ನಿಧನರಾದರು.
“ಅಂದಿನಿಂದ ನನ್ನ ಮನಸ್ಸು, ಮನೆಯೊಳಗೆ ಕೊಂಕಣಿ, ಕನ್ನಡ, ತಮಿಳು, ಇಂಗ್ಲೀಷ್, ಹಿಂದಿ, ಮಲಯಾಳಂ ಭಾಷೆಗಳೆಲ್ಲವೂ ಸುರುಳಿ ಸುರುಳಿಯಾಗಿ ಸುತ್ತುತ್ತಿದೆ.ಇದು ಅಪ್ಪನಿಗೆ ನನ್ನ ಶ್ರದ್ದಾಂಜಲಿ ಎಂಬಂತೆ ಭಾಸವಾಗುತ್ತಿದೆ.
“ಅಪ್ಪನ ಕುರಿತು ತಾವೆಲ್ಲರೂ ತೋರಿದ ಪ್ರೀತಿ, ಕಾಳಜಿಗಾಗಿ ನಾನು ಕೃತಜ್ಞತೆ ಹೇಳುತ್ತೇನೆ.
“ಅವರ ಜೀವನ ಮತ್ತು ಕೆಲಸದ ಮೂಲಕ ನೀವು ಹೇಗೆ ಪ್ರಭಾವಿತರಾಗಿದ್ದೀರಿ ಎಂಬುದರ ಬಗೆಗೆ ಸಂದೇಶ ಕಳಿಸಿದ ಎಲ್ಲರಿಗೆ ಧನ್ಯವಾದಗಳು, ಅವರ ಜೀವನವು ಗುರುಗಳು ಮತ್ತು ಪ್ರಾಧ್ಯಾಪಕರು, ಚಿಕ್ಕಮ್ಮ ಸಹೋದರಿಯರು, ಸ್ನೇಹಿತರು, ಸಹಯೋಗಿಗಳು, ನಿರ್ದೇಶಕರು, ವಿದ್ಯಾರ್ಥಿಗಳು, ಪ್ರಕಾಶಕರು ನಟರು, ಓದುಗರು, ಎದುರಾಳಿಗಳು, ಸಹಾಯಕರು, ಕೆಲವು ಪ್ರಮುಖ ಚಾಲಕರು ಮತ್ತು ಅನೇಕ ಮಂದಿಯಿಂದ ಶ್ರೀಮಂತವಾಗಿತ್ತು. ಅವರ ಕಡೆಯ ಕೆಲವು ದಿನಗಳಲ್ಲಿ ನಾನು ಆ ಹೆಸರುಗಳನ್ನು ಕೇಳಿದ್ದೇನೆ. ಒಬ್ಬ ಅಸಾಮಾನ್ಯ ವ್ಯಕ್ತಿಯ ಬದುಕಿನ ಪ್ರಯಾಣದಲ್ಲಿ ಜತೆಯಾದ ಆ ಎಲ್ಲರಿಗೆ ನಾನು ಧನ್ಯವಾದ ಹೇಳುತ್ತೇನೆ.”
Comments are closed.