ಕುಂದಾಪುರ: ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಈ ಹಿಂದೆ ಉಡುಪಿ ಹಾಗೂ ಉತ್ತರಕನ್ನಡ ಭಾಗದಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸಿ ದೋ ನಂಬರ್ ದಂಧೆಕೋರರಿಗೆ ಸಿಂಹಸ್ವಪ್ನರಾಗಿದ್ದ ನಿತ್ಯಾನಂದ ಗೌಡ ಅವರು ಸದ್ಯ ಕೋಟ ಪೊಲೀಸ್ ಠಾಣೆ ಠಾಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಈ ಹಿಂದೆ ಉಡುಪಿ ಜಿಲ್ಲೆಯ ಕಾಪು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದಂಧೆಕೋರರ ಹೆಡೆಮುರಿಕಟ್ಟಿದ್ದ ಪಿಎಸ್ಐ ಅವರನ್ನು ಏಕಾಏಕಿ ಎತ್ತಂಗಡಿ ಮಾಡಿದ್ದು ಜನಾಕ್ರೋಷಕ್ಕೆ ಕಾರಣವಾಗಿತ್ತು. ಬಳಿಕ ಅವರನ್ನು ಬೇರೆಕಡೆಗೆ ವರ್ಗಾಯಿಸಿದ್ದು ಈ ಹಿಂದೆ ಉಡುಪಿ ಟ್ರಾಫಿಕ್ ಠಾಣೆ ಉಪನಿರೀಕ್ಷಕರಾಗಿದ್ದ ಅವರನ್ನು ಸದ್ಯ ಕೋಟ ಪೊಲೀಸ್ ಠಾಣಾಧಿಕಾರಿಯಾಗಿ ವರ್ಗ ಮಾಡಲಾಗಿದೆ.
ಒಂದಷ್ಟು ಗುಂಪು ಕಲಹ, ಮಟ್ಕಾ,ಇಸ್ಪಿಟ್, ಜುಗಾರಿ ಸೇರಿದಂತೆ ಗಾಂಜಾದಂತಹ ಗಂಭೀರ ಸಮಸ್ಯೆಗಳು ಸದ್ಯ ಕೋಟ ಭಾಗದಲ್ಲಿ ನಡೆಯುತ್ತಿದ್ದು ಇದಕ್ಕೆಲ್ಲಾ ಕಡಿವಾಣ ಹಾಕುವುದು ಮಾತ್ರವಲ್ಲದೇ ಟ್ರಾಫಿಕ್ ಸಮಸ್ಯೆ ಸೇರಿದಂತೆ ಕೆಲವು ಕಾನೂನು ಸುವ್ಯವಸ್ಥೆ ಕಾಪಾಡುವ ಅಗತ್ಯ ಕ್ರಮಗಳನ್ನು ನೂತನ ಪಿಎಸ್ಐ ಕೈಗೊಳ್ಳುವ ಆಶಾವಾದ ಇಲ್ಲಿನ ಜನರದ್ದು. ಕೆಲವೇ ದಿನಗಳಲ್ಲಿ ಅಕ್ರಮಗಳಿಗೆ ಬ್ರೇಕ್ ಹಾಕ್ತೇನೆ ಎಂಬ ವಿಶ್ವಾಸವನ್ನು ಪಿಎಸ್ಐ ನಿತ್ಯಾನಂದ ಗೌಡ ವ್ಯಕ್ತಪಡಿಸಿದ್ದಾರೆ.
ಸದ್ಯ ಪಿಎಸ್ಐ ನಿತ್ಯಾನಂದ ಗೌಡ ಕೋಟ ಠಾಣಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದು ಈ ಭಾಗದ ಕಾನೂನು ಬಾಹಿರ ಅಕ್ರಮಕ್ಕೆ ಕಡಿವಾಣ ಬೀಳಬೇಕಿದೆ.
ವರದಿ- ಯೋಗೀಶ್ ಕುಂಭಾಸಿ
Comments are closed.