ಮಂಗಳೂರು : ರಾಜ್ಯ ಸರಕಾರಿ ನೌಕರರ ಸಂಘ, ದ.ಕ. ಜಿಲ್ಲಾ ಶಾಖೆಯ ಪ್ರತಿನಿಧಿಯಾಗಿ ಚುನಾವಣೆಯಲ್ಲಿ ಆಯ್ಕೆಯಾಗಿರುವ ಎಂ. ಹರೀಶ್ ಕುಮಾರ್, ಪ್ರಥಮ ದರ್ಜೆ ಸಹಾಯಕರು ಇವರನ್ನು ಇಲಾಖಾ ವತಿಯಿಂದ ಸನ್ಮಾನಿಸಲಾಯಿತು.
ಮೀನುಗಾರಿಕೆ ಉಪನಿರ್ದೇಶಕರು, ಮಂಗಳೂರು ಇವರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರಿ, ಸಿಬ್ಬಂದಿಗಳು ಮತ್ತು ವಿವಿಧ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿದರು.
ಮೀನುಗಾರಿಕೆ ಉಪನಿರ್ದೇಶಕರಾದ ಡಿ. ತಿಪ್ಪೇಸ್ವಾಮಿ ಇವರು ಮೀನುಗಾರಿಕೆ ಇಲಾಖೆಯ ಪರವಾಗಿ ಎಂ. ಹರೀಶ್ ಕುಮಾರ್ ಇವರನ್ನು ಸನ್ಮಾನಿಸಿದರು.
ಡಿ. ತಿಪ್ಪೇಸ್ವಾಮಿ ಇವರು ತಮ್ಮ ಭಾಷಣದಲ್ಲಿ ಸನ್ಮಾನಿತರು ರಾಜ್ಯ ಸರಕಾರಿ ನೌಕರರ ಸಂಘದ ಪ್ರತಿನಿಧಿಯಾಗಿ ಆಯ್ಕೆಯಾಗಿರುವುದು ಸಂತೋಷದ ವಿಚಾರವೆಂದು ಹೇಳುತ್ತಾ, ಮುಂದೆ ನೌಕರರ ಸಂಘದಲ್ಲಿ ಉನ್ನತ ಹುದ್ದೆಯನ್ನು ಪಡೆದು ಇಲಾಖೆಯ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಬೇಕೆಂದು ತಿಳಿಸಿದರು.
ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಮಹೇಶ್ ಕುಮಾರ್ ಇವರು ಎಂ. ಹರೀಶ್ ಕುಮಾರ್ ಇವರಿಗೆ ಶುಭ ಹಾರೈಸಿದರು. ಕಾರ್ಯಕ್ರಮವನ್ನು ಮೀನುಗಾರಿಕೆ ಇಲಾಖೆಯ ರವಿ ಕುಮಾರ್ ಇವರು ನಿರೂಪಿಸಿದರು. ಕಾರ್ಯಕ್ರಮದ ವ್ಯವಸ್ಥೆಯನ್ನು ಯೋಗೀಶ್ ಇವರು ನಿರ್ವಹಿಸಿದರು.
Comments are closed.