ಕರಾವಳಿ

ಬಂದರು ದಕ್ಕೆ, ಬೋಳೂರು ಪ್ರದೇಶಕ್ಕೆ ಶಾಸಕ ಕಾಮತ್ ಭೇಟಿ: ಕಾಮಗಾರಿಗಳ ಪರಿಶೀಲನೆ

Pinterest LinkedIn Tumblr

ಮಂಗಳೂರು, ಜೂನ್. 21: ಮಂಗಳೂರಿನ ಬಂದರು (ದಕ್ಕೆ) ಪ್ರದೇಶಕ್ಕೆ ಮತ್ತು ಬೋಳೂರು ಪ್ರದೇಶಕ್ಕೆ ಭೇಟಿ ನೀಡಿದ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಈಗಾಗಲೇ ಅನುಷ್ಟಾನಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮತ್ತು ಪ್ರಸ್ತುತ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿದರು ಮತ್ತು ಮುಂದಿನ ದಿನಗಳಲ್ಲಿ ನಡೆಯಲಿರುವ ಕಾಮಗಾರಿಗಳ ಬಗ್ಗೆ ಬಂದರು, ಮೀನುಗಾರಿಕಾ ಮತ್ತು ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕಾಮತ್, ಮೀನುಗಾರರ ಸಮಾಜದ ಮುಖಂಡರೊಂದಿಗೆ ಬಂದರು ದಕ್ಕೆ ಮತ್ತು ಬೋಳೂರು ಪ್ರದೇಶಕ್ಕೆ ಭೇಟಿ ನೀಡಿದ್ದೇನೆ.

ಮಂಗಳೂರು ಬಂದರು ದಕ್ಕೆ ಮುಂಭಾಗದಲ್ಲಿ ಹೂಳೆತ್ತುವ ಕಾಮಗಾರಿಗೆ ಒಂದು ಕೋಟಿ, ಮಂಗಳೂರಿನ ಹಳೆಬಂದರಿನ ಬಿಎಂಡಿ ಫೇರಿಯಿಂದ ಬೆಂಗ್ರೆ (ಕಸಬಾ) ವರೆಗೆ ಹೂಳೆತ್ತುವ ಕಾಮಗಾರಿಗೆ 99.50 ಲಕ್ಷ, ಮಂಗಳೂರು ಹಳೆಬಂದರಿನ ಉತ್ತರ ದಕ್ಕೆಯ ಕುಸಿದ ಭಾಗಗಳಲ್ಲಿ ಆರ್ ಸಿಸಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ 50 ಲಕ್ಷ, ದಕ್ಷಿಣ ಕನ್ನಡ ಜಿಲ್ಲೆ ಬೋಳೂರು ಬೊಕ್ಕಪಟ್ಣ ಎಂಬಲ್ಲಿ ಪ್ರಯಾಣಿಕರ ಜೆಟ್ಟಿ ನಿರ್ಮಾಣ ಕಾಮಗಾರಿಗೆ 45 ಲಕ್ಷ, ಆವರಣ ಗೋಡೆ ಹಾಳಾದ ಭಾಗವನ್ನು ಸರಿಪಡಿಸಿ ಭದ್ರಪಡಿಸುವುದು, ಮಧ್ಯ ದಕ್ಕೆಯ ಗೇಟ್ ಅಭಿವೃದ್ಧಿ, ವೀಕ್ಷಣಾ ಗೋಪುರ ನಿರ್ಮಾಣ ಮತ್ತು ರೇಡಿಯೋ ಕಮ್ಯೂನಿಕೇಶನ್ ಟವರ್ ಕಾಮಗಾರಿಗಳಿಗೆ 1 ಕೋಟಿ 32 ಲಕ್ಷ, ಮಂಗಳೂರು ಮೀನುಗಾರಿಕಾ ಬಂದರಿನ ಓಕ್ಷನ್ ಹಾಲ್ ಗೆ ನೆಲಹಾಸನ್ನು ಒದಗಿಸುವುದು ಮತ್ತು ಮೇಲ್ಛಾವಣಿಯ ಟ್ರಸ್ ಗಳಿಗೆ ಬಣ್ಣ ಬಳಿಯುವುದಕ್ಕೆ 10.50 ಲಕ್ಷ, ಮಂಗಳೂರು ಹಳೆ ಮೀನುಗಾರಿಕಾ ಬಂದರಿನ ಉತ್ತರದಕ್ಕೆಯ ಸರಪಳಿ 0.030 ಕಿ.ಮೀ ನಿಂದ 0.150 ಕಿ.ಮೀ ವರೆಗೆ ಕುಸಿದ ವಾರ್ಫಿನ ಆಯ್ದ ಭಾಗಗಳ ದುರಸ್ತಿಗೆ 15 ಲಕ್ಷ, ಮಂಗಳೂರಿನ ಮೀನುಗಾರಿಕಾ ಬಂದರಿನ ಯಾಂತ್ರಿಕ ಮೀನುಗಾರರ ಸಂಘದ ದಕ್ಷಿಣ ವಾರ್ಫ್ ಕಾಂಕ್ರೀಣಿಕರಣಕ್ಕೆ 15 ಲಕ್ಷ ರೂಪಾಯಿ ಅನುದಾನದ ಮೂಲಕ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು ಮತ್ತು ಸ್ಥಳೀಯ ಪ್ರಮುಖರು ಇನ್ನು ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಬೇಡಿಕೆ ಇಟ್ಟಿದ್ದಾರೆ. ಅದನ್ನು ಕೂಡ ಹಂತಹಂತವಾಗಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಶಾಸಕರೊಂದಿಗೆ ಮೀನುಗಾರರ ಹಿರಿಯ ಮುಖಂಡ ನಿತಿನ್ ಕುಮಾರ್, ಮೊಗವೀರ ಸಭಾ ಅಧ್ಯಕ್ಷ ರಾಜಶೇಖರ್, ದೇವಾನಂದ ಗುರಿಕಾರ,ಮಾಜಿ ಮನಪಾ ಸದಸ್ಯರಾದ ಪ್ರೇಮಾನಂದ ಶೆಟ್ಟಿ,ಮೀರಾ ಕರ್ಕೇರಾ,ರಘುವೀರ್ ಪಣಂಬೂರು,ಬಿಜೆಪಿ ಮುಖಂಡರಾದ ದೀಪಕ್ ಪೈ,ಜಗದೀಶ್ ಶೆಟ್ಟಿ,ಅನಿಲ್ಸ್,ಶಿವಪ್ರಸಾದ್,ಯೋಗೀಶ್ ಕಾಂಚನ್,ರಾಹುಲ್ ಶೆಟ್ಟಿ, ಹಾಗೂ ಮೊಗವೀರ ಸಭಾದ ಎಲ್ಲಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.