ಮನೋರಂಜನೆ

ನಟಸಾರ್ವಭೌಮ ಸಿನಿಮಾದ ಬಿಗ್ ಹಿಟ್​ ಬಳಿಕ ಲವ್​ ಸ್ಟೋರಿ ಹೇಳೋಕೆ ಬರುತ್ತಿರುವ ಪವನ್ ಒಡೆಯರ್​!

Pinterest LinkedIn Tumblr


ನಿರ್ದೇಶಕ ಪವನ್ ಒಡೆಯರ್ ಸಿನಿಮಾ ಅನೌನ್ಸ್ ಆಗಿದ್ದು ಅಭಿಮಾನಿಗಳಿಗೆ ಸಖತ್ ಥ್ರಿಲ್ ಕೊಟ್ಟಿದೆ. ಟೈಟಲ್​ ಏನು..? ಪವನ್ ಲವ್ ಸ್ಟೋರಿಗೆ ಯಾರು ಹಿರೋ..? ಯಾರು ಹಿರೋಯಿನ್ ಅಂತೆಲ್ಲಾ ಕ್ಯೂರಿಯಾಸಿಟಿ ಹುಟ್ಟಿಸಿದ್ದು ಸುಳ್ಳಲ್ಲ. ಆದ್ರೀಗ ಎಲ್ಲಾ ಕುತುಹೂಲಕ್ಕೆ ತೆರೆ ಬಿದ್ದಿದೆ. ಪವನ್ ಒಡೆಯರ್ “ರೇಮೊ” ಅನ್ನೋ ಲವ್ ಸ್ಟೋರಿ ಕಥೆ ಹೇಳೋದಿಕ್ಕೆ ರೆಡಿಯಾಗ್ತಿದ್ದಾರೆ.

ಬೆಂಗಳೂರಿನ ಶಂಕರ ಮಠದಲ್ಲಿ ಸ್ಕ್ರೀಪ್​ ಪೂಜೆ ನೆರವೇರಿಸಲಾಯಿತು. ಹ್ಯಾಟ್ರಿಕ್ ಹಿರೋ ಶಿವಣ್ಣ ಹಾಗೂ ಪತ್ನಿ ಗೀತಾ ಶಿವರಾಜ್​ಕುಮಾರ್ ಪವನ್ ಒಡೆಯರ್ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಪವನ್ ಸ್ಟೋರಿಗೆ ಇಶಾನ್- ಆಶಿಕಾ ಜೋಡಿ. ಅಂದ ಹಾಗೇ ಪವನ್ ಒಡೆಯರ್ ನಿರ್ದೇಶಿಸ್ತಿರೋ ರೇಮೊ ಸಿನಿಮಾಕ್ಕೆ ರೋಗ್ ಸಿನಿಮಾ ಖ್ಯಾತಿಯ ಇಶಾನ್ ಹಿರೋ ಆದ್ರೆ, ಆ್ಯಪಲ್ ಬ್ಯೂಟಿ ಆಶಿಕಾ ರಂಗನಾಥ್ ಇಶಾನ್​ಗೆ ಜೋಡಿಯಾಗಿ ಅಭಿನಯಿಸಲಿದ್ದಾರೆ.

ಇನ್ನು, ದಿ ವಿಲನ್​ ಸಿನಿಮಾಕ್ಕೆ ಬಂಡವಾಳ ಹೂಡಿರೋ ಸಿ. ಆರ್​. ಮನೋಹರ್ ಈ ಚಿತ್ರಕ್ಕೂ ನಿರ್ಮಾಣ ಮಾಡ್ತಿದ್ದಾರೆ. ಮುಂದಿನ ತಿಂಗಳ ಜುಲೈನಿಂದ ಶೂಟಿಂಗ್ ಸ್ಟಾರ್ಟ್ ಆಗಲಿದ್ದು, ಗೂಗ್ಲಿ ಸೂಪರ್ ಹಿಟ್ ಬಳಿಕ ಮತ್ತೊಂದು ಲವ್ ಸ್ಟೋರಿ ಕೈಗೆತ್ತಿಕೊಂಡಿರೋ ಪವನ್​ ಒಡೆಯರ್ ಸೂಪರ್ ಹಿಟ್ ಸಿನಿಮಾ ಕೊಡೋದಿಕ್ಕೆ ಭರ್ಜರಿ ಪ್ರಿಪರೇಷನ್ ಮಾಡಿಕೊಂಡಿದ್ದಾರೆ.

Comments are closed.