Photo: Ashok Belman
ದುಬೈ: ದುಬೈಯ ಇಂಡಿಯನ್ ಹೈಸ್ಕೂಲಿನ ಶೇಖ್ ರಾಶಿದ್ ಆಡಿಟೋರಿಯಂನಲ್ಲಿ ‘ದುಬೈ ಯಕ್ಷ ಮಿತ್ರರು’ ಶುಕ್ರವಾರದಂದು ಸಂಜೆ ಆಯೋಜಿಸಿದ್ದ ‘ಯಕ್ಷ ಸಂಭ್ರಮ-2019 ‘ ಕಾರ್ಯಕ್ರಮದಲ್ಲಿ ‘ಕಟೀಲು ಕ್ಷೇತ್ರ ಮಹಾತ್ಮೆ’ ಎಂಬ ಕನ್ನಡ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.
ಯುಎಇಯಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಯಕ್ಷಗಾನದ ಅಭಿಮಾನಿಗಳೇ ಅಪಾರ ಸಂಖ್ಯೆಯಲ್ಲಿದ್ದು, ‘ಕಟೀಲು ಕ್ಷೇತ್ರ ಮಹಾತ್ಮೆ’ ನೋಡುವುದಕ್ಕೆ ಜನ ಕಿಕ್ಕಿರಿದು ಸೇರಿದ್ದರು.
‘ಕಟೀಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನದ ಭಾಗವತಿಕೆ, ಮಾತುಗಾರಿಕೆ, ವೇಷಭೂಷಣ ವೀಕ್ಷಕರಲ್ಲಿ ಹೊಸ ಹುರುಪನ್ನು ತಂದುಕೊಟ್ಟಿತು.
ಯಕ್ಷಗಾನಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ACME ಬಿಲ್ಡಿಂಗ್ ಮೆಟೀರಿಯಲ್ಸ್ನ ಆಡಳಿತ ನಿರ್ದೇಶಕ, ಕನ್ನಡ ಸಿನೆಮಾ ನಿರ್ಮಾಪಕ, ಗಾಯಕರೂ ಆಗಿರುವ ಹರೀಶ್ ಶೇರಿಗಾರ್, ಉದ್ಯಮಿಗಳಾದ ಗುಣಶೀಲ ಶೆಟ್ಟಿ, ಗಿರೀಶ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ವಿಠ್ಠಲ್ ಶೆಟ್ಟಿ, ಪದ್ಮರಾಜ್ ಎಕ್ಕಾರ್, ಯಕ್ಷ ಮಿತ್ರರು ಸಂಘಟನೆಯ ದಯಾ ಕಿರೋಡಿಯನ್, ಚಿದಾನಂದ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
ಯಕ್ಷಗಾನದಲ್ಲಿ ಭಾಗವತರಾಗಿ ಬಲಿಪ ಪ್ರಸಾದ್ ಭಟ್ ಹಾಗು ದುಬೈಯ ಕೃಷ್ಣ ಪ್ರಸಾದ್ , ಚೆಂಡೆ ಮದ್ದಳೆಯಲ್ಲಿ ಜನಾರ್ಧನ ತೋಳ್ಪಡಿತ್ತಾಯ ಹಾಗು ಮುರಾರಿ ಕಾದಂಬಳಿತ್ತಾಯ, ವಿಶೇಷ ವೇಷಾಧಾರಿಯಾಗಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಅಕ್ಷಯ್ ಕುಮಾರ್ ಮಾರ್ನಾಡ್, ಲೋಕೇಶ್ ಮುಚ್ಚುರು, ಪ್ರಭಾಕರ ಸುವರ್ಣ ದುಬೈ, ವೇಷಭೂಷಣ ಮತ್ತು ವರ್ಣಾಲಂಕಾರ ರಮೇಶ್ ಶೆಟ್ಟಿ ಬಾಯಾರು ಹಾಗು ವಸಂತ ಸಹಕರಿಸಿದ್ದರು.
ಬಲಿಪ ಪ್ರಸಾದ್ ಭಟ್, ಕೃಷ್ಣ ಪ್ರಸಾದ್ , ಜನಾರ್ಧನ ತೋಳ್ಪಡಿತ್ತಾಯ, ಮುರಾರಿ ಕಾದಂಬಳಿತ್ತಾಯ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಅಕ್ಷಯ್ ಕುಮಾರ್ ಮಾರ್ನಾಡ್, ಲೋಕೇಶ್ ಮುಚ್ಚುರು, ಪ್ರಭಾಕರ ಸುವರ್ಣ ದುಬೈ, ರಮೇಶ್ ಶೆಟ್ಟಿ ಬಾಯಾರು, ವಸಂತ ಸೇರಿದಂತೆ ಹಲವರಿಗೆ ಈ ಸಂದರ್ಭದಲ್ಲಿ ಗಣ್ಯರು ಸನ್ಮಾನಿಸಿದರು.
Comments are closed.