ಟಾಲಿವುಡ್ ನ ಸೂಪರ್ ಹಿಟ್ ಮೂವಿ ಅರ್ಜುನ್ ರೆಡ್ಡಿ ಚಿತ್ರ ಸದ್ಯ ಬಾಲಿವುಡ್ ರಿಮೇಕ್ ಕಬೀರ್ ಸಿಂಗ್ ಹೆಸರಿನಲ್ಲಿ ತೆರೆ ಮೇಲೆ ಬರಲು ತಯಾರಾಗುತ್ತಿದೆ. ಇನ್ನೂ ಕಬೀರ್ ಸಿಂಗ್ ಚಿತ್ರದ ದೃಶ್ಯವೊಂದರಲ್ಲಿ ಚಿತ್ರದ ನಿರ್ದೇಶಕ ಕನ್ನಡದ ಹಾಡೊಂದನ್ನು ಬಳಸಿಕೊಳ್ಳುವ ಮೂಲಕ ಕನ್ನಡಾಭಿಮಾನವನ್ನು ಮೆರೆದಿದ್ದಾರೆ.
ಸಾಮಾನ್ಯವಾಗಿ ದಕ್ಷಿಣ ಭಾಷೆಯ ಚಿತ್ರಗಳಲ್ಲಿ ಹಿಂದಿ ಭಾಷೆಯಲ್ಲಿ ಸಾಕಷ್ಟು ಹಾಡು, ಡೈಲಾಗ್ಗಳನ್ನು ಬಳಸಿಕೊಂಡಿರುವುದನ್ನು ಕೇಳಿರುತ್ತೀರಿ. ಆದರೆ, ಬಾಲಿವುಡ್ ಸಿನಿಮಾದಲ್ಲಿ ದಕ್ಷಿಣ ಭಾರತದ ಭಾಷೆಯನ್ನು ಬಳಸುವುದು ಕಡಿಮೆ. ಆದರೆ ಶಾರುಖ್- ದೀಪಿಕಾ ಪಡುಕೋಣೆ ಅಭಿನಯದ ‘ಚೆನ್ನೈ ಎಕ್ಸ್ಪ್ರೆಸ್’ ಸಿನಿಮಾ ತೆರೆಕಂಡಾಗ ಬಾಲಿವುಡ್ ಸಿನಿಮಾದಲ್ಲಿ ತಮಿಳು ಭಾಷೆ ಕೇಳಿ ತಮಿಳುನಾಡಿನ ಜನ ಥ್ರಿಲ್ ಆಗಿದ್ದರು. ಹಾಗೂ ಬಾಲಿವುಡ್ ನಲ್ಲಿ ತಮಿಳು ಭಾಷೆ ಅಲ್ಲಲ್ಲಿ ಕೇಳಿಬರುವುದಲ್ಲದೆ ಹೊಸ ಟ್ರೆಂಡ್ ಕೂಡ ಕ್ರಿಯೇಟ್ ಮಾಡಿತ್ತು. ಇದೀಗಾ ಅಂತಹದೇ ಒಂದು ಅನುಭವ ಕನ್ನಡಿಗರಿಗೂ ಆಗುತ್ತಿದೆ.
ಟಾಲಿವುಡ್ ನಲ್ಲಿ ವಿಜಯ್ ದೇವರಕೊಂಡ ಅಭಿನಯದ ‘ಅರ್ಜುನ್ ರೆಡ್ಡಿ’ ಸಿನಿಮಾ ಟಾಲಿವುಡ್ ಬಾಕ್ಸಾಫೀಸ್ ಲೂಟಿ ಮಾಡಿತ್ತು ಜೊತೆಗೆ ವಿಜಯ್ ದೇವರುಕೊಂಡಗೆ ಈ ಸಿನಿಮಾ ಭಾರಿ ಯಶಸ್ಸು ತಂದುಕೊಡುವ ಮೂಲಕ ಭಾರೀ ಬೇಡಿಕೆ ತಂದುಕೊಟ್ಟಿತ್ತು. ಇನ್ನು ‘ಅರ್ಜುನ್ ರೆಡ್ಡಿ’ ಸಿನಿಮಾವನ್ನು ಸಂದೀಪ್ ವಂಗಾ ನಿರ್ದೇಶಿಸಿದ್ದರು. ಅಲ್ಲದೆ ಚಿತ್ರದಲ್ಲಿ ನಾಯಕ ಮಂಗಳೂರಿನ ಮೆಡಿಕಲ್ ಕಾಲೇಜೊಂದರಲ್ಲಿ ಹೌಸ್ ಸರ್ಜನ್ ಆಗಿರುತ್ತಾನೆ. ಹೀಗಾಗಿ, ಅಲ್ಲಲ್ಲಿ ತುಳು, ಕನ್ನಡದ ಡೈಲಾಗ್ಗಳೂ ಕೇಳಿಬಂದಿತ್ತು.
ಇದೀಗಾ ‘ಅರ್ಜುನ್ ರೆಡ್ಡಿ’ಯನ್ನು ನಿರ್ದೇಶಿಸಿದ್ದ ಸಂದೀಪ್ ವಂಗಾ ಅವರೇ ಬಾಲಿವುಡ್ನ ‘ಕಬೀರ್ ಸಿಂಗ್’ಗೂ ಆ್ಯಕ್ಷನ್ ಕಟ್ ಹೇಳಿದ್ದು, ಈ ಸಿನಿಮಾದಲ್ಲಿ ಶಾಹಿದ್ ಕಪೂರ್ಗೆ ಕಿಯಾರಾ ಅಡ್ವಾನಿ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಇದುವರೆಗೂ ಸಾಫ್ಟ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಶಾಹಿದ್ ಕಪೂರ್ ‘ಕಬೀರ್ ಸಿಂಗ್’ನಲ್ಲಿ ಮಾಸ್ ಹೀರೋ ಆಗಿ ಮಿಂಚಿದ್ದಾರೆ. ಸದ್ಯ ಚಿತ್ರದ ಹಾಡು ಹಾಗೂ ಟ್ರೈಲರ್ ಮೂಲಕವೇ ಸಖತ್ ಸದ್ದು ಮಾಢುತ್ತಿರುವ ಈ ಚಿತ್ರ ಇದೀಗಾ ಟ್ರೆಂಡಿಗ್ ನಲ್ಲಿ ಸೌಂಡ್ ಮಾಡುತ್ತಿದ್ದು, ಯುವ ಜನತೆಯ ಗಮನ ಸೆಳೆಯುತ್ತಿದೆ. ಜೊತೆಗೆ ‘ಕಬೀರ್ ಸಿಂಗ್’ ಸಿನಿಮಾವನ್ನು ಬಾಲಿವುಡ್ ನ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿಕೊಳ್ಳಲಾಗಿದ್ದು, ಬಾಲಿವುಡ್ ಸಿನಿಮಾದಲ್ಲೂ ಕನ್ನಡದ ಕಂಪು ಪಸರಿಸಿದೆ!
ಕಬೀರ್ ಸಿಂಗ್ ಚಿತ್ರದ ದೃಶ್ಯವೊಂದರಲ್ಲಿ ಎಂಬಿಬಿಎಸ್ ಮುಗಿಸಿದ ನಾಯಕ ತನ್ನ ಗೆಳೆಯರೊಂದಿಗೆ ಫೈರ್ ಕ್ಯಾಂಪ್ ಹಾಕಿಕೊಂಡು ಪಾರ್ಟಿ ಮಾಡುತ್ತಿರುತ್ತಾನೆ. ಅದೇ ಗುಂಪಿನಲ್ಲಿದ್ದ ಹುಡುಗಿಯೊಬ್ಬಳು ಪ್ರೇಮ್ ನಿರ್ದೇಶನದ ಕನ್ನಡದ ಸೂಪರ್ ಹಿಟ್ ಸಿನಿಮಾ ‘ಎಕ್ಸ್ಕ್ಯೂಸ್ ಮಿ’ಯ ಚಿತ್ರದ ಪೋಪುಲರ್ ಸಾಂಗ್ ‘ಪ್ರೀತ್ಸೆ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರೋ?’ ಹಾಡನ್ನು ಹಾಡುತ್ತಾಳೆ! ಅಲ್ಲಿ ಆ ಹಾಡು ಯಾಕೆ ಬಳಸಿಕೊಳ್ಳಲಾಗಿದೆ. ಇನ್ನೂ ಚಿತ್ರದ ಈ ಸನ್ನಿವೇಶದಲ್ಲಿ ಯಾಕೆ ಬರುತ್ತದೆ ಎಂದು ತಿಳಿಯಬೇಕಾದರೆ ನೀವು ಚಿತ್ರ ನೋಡಬೇಕು.
Comments are closed.