ಉಡುಪಿ: ಚಲಿಸುತ್ತಿದ್ದ ದ್ವಿಚಕ್ರವಾಹನದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿಯ ತೀವ್ರತೆಗೆ ವಾಹನ ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾದ ಘಟನೆ ಉಡುಪಿಯ ಇಂದ್ರಾಳಿ ಸಮೀಪದ ರೈಲ್ವೇ ಬ್ರಿಡ್ಜ್ ಬಳಿ ಸಂಭವಿಸಿದೆ.
ಮೆಕ್ಯಾನಿಕ್’ವೊಬ್ಬರು ಈ ಆಕ್ಟಿವಾ ವಾಹನ ರಿಪೇರಿ ಮಾಡಿಕೊಂಡು ವಾಪಾಸಾಗುತ್ತಿದ್ದರು, ಮಳೆಯಿಂದ ಈ ವಾಹನದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಈ ಅವಘಡ ಉಂಟಾಗಿದೆ ಎಂದು ತಿಳಿದುಬಂದಿದೆ. ಅದೃಷ್ಟವಷಾತ್ ಸವಾರ ವಾಹನ ದಿಂದ ಇಳಿದು ಬಚಾವಾಗಿದ್ದಾರೆ. ನೋಡನೋಡುತ್ತಿದ್ದಂತೆ, ವಾಹನ ಬೂದಿಯಾಗಿದೆ.
ಮಣಿಪಾಲ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Comments are closed.