ರಾಜ್ಯದಲ್ಲಿ ಇರುವ ಮೈತ್ರಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಸಂಸತ್ನಲ್ಲಿ ಹೇಳಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ, 2009-2013ರ ವರೆಗೂ ಬಿಜೆಪಿ ಭ್ರಷ್ಟಾ ಆಡಳಿತ ನಡೆಸಿತ್ತು. ‘ಯಡಿಯೂರಪ್ಪ ಸರ್ಕಾರವಿದ್ದಾಗ ಭ್ರಷ್ಟಾಚಾರ ಹೆಚ್ಚಿತ್ತು’ ಎಂದ ಅವರು, ಐಎಂಎ ವಂಚನೆ ಬಗ್ಗೆಯೂ ಪ್ರಸ್ತಾಪಿಸಿದರು. ಸಂಸತ್ನಲ್ಲೇ ತೇಜಸ್ವಿ, ಪ್ರತಾಪ್ ಸಿಂಹ ಇಬ್ಬರಿಗೂ ಪ್ರಜ್ವಲ್ ರೇವಣ್ಣ ಟಾಂಗ್ ಕೊಟ್ಟರು. ಇದರಿಂದ ರಾಜ್ಯ ಬಿಜೆಪಿ ನಾಯಕರಿಗೆ ತೇಜಸ್ವಿ ಸೂರ್ಯ ಮುಜುಗರ ತಂದರು.
ತೇಜಸ್ವಿ ಮಾತಿಗೆ ಪ್ರಜ್ಬಲ್ ರೇವಣ್ಣ ಸರಿಯಾಗೇ ತಿರುಗೇಟು
ಲೋಕಸಭೆಯಲ್ಲಿ ತೇಜಸ್ವಿ ಸೂರ್ಯ ಮಾತಿಗೆ ಬಿಜೆಪಿಯಲ್ಲೇ ಬೇಸರ ವ್ಯಕ್ತವಾಗಿದೆ. ಬಿಜೆಪಿ ನಾಯಕರ ಬಾಯಲ್ಲೂ ಪ್ರಜ್ವಲ್ ರೇವಣ್ಣ ಸೈ ಎನಿಸಿಕೊಂಡಿದ್ದಾರೆ. ಇನ್ನೂ ರಾಜ್ಯ ಬಿಜೆಪಿ ವಲಯದಲ್ಲಿಯೂ ಯುವ ಸಂಸದರ ವಾಕ್ಸಮರದ್ದೇ ಚರ್ಚೆ ನಡೆಯುತ್ತೀದೆ. ಎಲ್ಲರನ್ನೂ ಮೆಚ್ಚಿಸುವ ಭರದಲ್ಲಿ ತೇಜಸ್ವಿ ಎಡವಟ್ಟು ಮಾಡಿದರು. ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡಲಿಲ್ಲ, ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದರು ತೇಜಸ್ವಿ ಮಾತಿಗೆ ಪ್ರಜ್ಬಲ್ ರೇವಣ್ಣ ಸರಿಯಾಗೇ ತಿರುಗೇಟು ಕೊಟ್ಟರು ಎನ್ನುತ್ತಿದ್ದಾರೆ.
ರಾಜ್ಯ ಬಿಜೆಪಿ ನಾಯಕರ ನಡುವೆ ನಡೆದ ಚರ್ಚೆ
ಪ್ರಜ್ವಲ್ ಸಂತೋಷ್ ಹೆಗಡೆ ವರದಿ ಪ್ರಸ್ತಾಪಿಸಿ ಹಿಂದಿನ ಇತಿಹಾಸ ಕೆದಕಿದರು. ಪ್ರಜ್ವಲ್ ರೇವಣ್ಣ ದೇವೆಗೌಡರನ್ನು ನೆನೆದೇ ಮಾತು ಪ್ರಾರಂಭಿಸಿದರು. ಆದರೆ ತೇಜಸ್ವಿ ಮೋದಿ ಹೊಗಳಿದರೇ ಹೊರತು, ದಿವಂಗತ. ಅನಂತ್ ಕುಮಾರ್ ಅಥವಾ ಯಡಿಯೂರಪ್ಪ ಯಾರ ಹೆಸರನ್ನೂ ಹೇಳಲಿಲ್ಲ, ಪ್ರಜ್ವಲ್ ರೇವಣ್ಣ , ಮಂಡ್ಯ ರೈತರು, ಕಾವೇರಿ ನೀರಿನ ಸಮಸ್ಯೆ
ಪ್ರಸ್ತಾಪಿಸಿದರು. ಐ.ಎಂ.ಎ ಜ್ಯುವೆಲ್ಸ್ ಹಗರಣದಲ್ಲಿ ರಾಜ್ಯ ಮೈತ್ರಿ ಸರ್ಕಾರದ ಕ್ರಮ ಸಮರ್ಥಿಸಿಕೊಂಡರು. ಸಂತೋಷ್ ಹೆಗಡೆ ವರದಿ ಪ್ರಸ್ತಾಪ ಮಾಡಿ ಬಿಜೆಪಿ ಸಂಸದರ ಬಾಯಿ ಮುಚ್ಚಿಸಿದರು. ತೇಜಸ್ವಿ , ಪ್ರತಾಪ್ ಸಿಂಹ, ಎಲ್ಲ ಸಂಸದರು ಸುಮ್ನೆ ಕೂರುವಂತೆ ಮಾಡಿದರು ಎಂದು ರಾಜ್ಯ ಬಿಜೆಪಿ ನಾಯಕರ ನಡುವೆ ಚರ್ಚೆ ನಡೆಯುತ್ತೀದೆ.
ಕಂಟೆಂಟ್ ಇಲ್ಲದೇ ತೇಜಸ್ವಿ ಮಾತನಾಡಬಾರದು
ಬಿಜೆಪಿ ಕಾರ್ಯಕ್ರಮಗಳಲ್ಲಿ ಮಾತನಾಡುವುದಕ್ಕೂ, ಲೋಕಸಭೆಯಲ್ಲಿ ಮಾತನಾಡುವುದಕ್ಕೂ ವ್ಯತ್ಯಾಸ ಇದೆ. ಹೀಗಾಗಿ ಇನ್ನು ಮುಂದೆ ಕಂಟೆಂಟ್ ಇಲ್ಲದೇ ತೇಜಸ್ವಿ ಮಾತನಾಡಬಾರದು. ಈ ಬಗ್ಗೆ ತೇಜಸ್ವಿ ಸೂರ್ಯಗೆ ತಿಳಿ ಹೇಳುವಂತೆ ಸೂಚಿಸುವ ಅಗತ್ಯ ಇದೆ ಎಂದು ಕೆಲ ನಾಯಕರು ತಿಳಿಸಿದ್ದಾರೆ.
Comments are closed.