ಬಾಗಲಕೋಟೆ: ಅಕ್ಕಿ ..ಹಾಲು.. ಶೂ ನಮ್ದು ವೋಟ್ ಯಾಕೆ ಬಿಜೆಪಿಗೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಮತ ಹಾಕಿದವರನ್ನು ಪ್ರಶ್ನೆ ಮಾಡಿದ್ದಾರೆ.
ಅನ್ನಭಾಗ್ಯ, ಶೂಭಾಗ್ಯ ತಂದಿದ್ದು ನಾವು. ಆದರೆ ಜನ ಬಿಜೆಪಿಗೆ ವೋಟ್
ಬಾಗಲಕೋಟೆಯ ಬಾದಾಮಿ ತಾಲೂಕಿನ ಆಲೂರ ಎಸ್ ಕೆ ಗ್ರಾಮದಲ್ಲಿ ಗ್ರಾಮ ಕಚೇರಿ ಕಟ್ಟಡದ ಭೂಮಿ ಪೂಜೆ ನೇರವೇರಿಸಿದ ಬಳಿಕ ಮಾತನಾಡಿದ ಅವರು, ಪಂಚಾಯಿತಿಗೆ ಅನುದಾನ, ಅನ್ನಭಾಗ್ಯ, ಶೂಭಾಗ್ಯ ತಂದಿದ್ದು ನಾವು. ಆದರೆ ಜನ ಬಿಜೆಪಿಗೆ ವೋಟ್ ಹಾಕ್ತಾರೆ ಎಂದು ಆಕ್ರೋಶ ಹೊರಹಾಕಿದರು. ಸ್ವಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಬಂದಿದ್ದಕ್ಕೆ ವೇದಿಕೆಯಲ್ಲೇ ಅಸಮಾಧಾನ ಹಂಚಿಕೊಂಡರು. ಬಾದಾಮಿ ಕ್ಷೇತ್ರದಲ್ಲಿ ನಮಗೆ ಲೀಡ್ ಬರುತ್ತೇ ಅಂತ ಅಂದುಕೊಂಡಿದ್ದೆ. ಆದರೆ ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿಗೆ 9 ಸಾವಿರ ಲೀಡ್ ಆಗಿದೆ ಎಂದರು.
ಡಿಸಿಎಂ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್
ನಾನು ಬಾದಾಮಿ ಶಾಸಕನಾದ ಮೇಲೆ 1,300 ಕೋಟಿ ಅನುದಾನ ತಂದಿದ್ದೇನೆ. ಜನ ಏನು ನೋಡಿ ಬಿಜೆಪಿ ಗೆ ವೋಟ್ ಹಾಕ್ತಾರೆ ನನಗೆ ಗೊತ್ತಾಗುತ್ತಿಲ್ಲ, ಕೆಲಸ ಮಾಡಿದವರು ನಾವು, ಓಟ್ ಬಿಜೆಪಿಗೆ ಹಾಕ್ತಾರೆ, ಯಾಕೆ? ಎಂದು ಪ್ರಶ್ನೆ ಮಾಡಿದರು. ಅಹಿಂದ ಸಮಾವೇಶದ ಬಗ್ಗೆ ನಮ್ಮೊಂದಿಗೆ ಚರ್ಚಿಸಿಲ್ಲ ಎಂಬ ಡಿಸಿಎಂ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ನೀಡಿದ್ದು, ನಾವು ಯಾವ ಸಮಾವೇಶ ,ಸಂಘಟನೆಯೂ ಮಾಡ್ತಿಲ್ಲ ಎಂದು ಅಹಿಂದ ಸಮಾವೇಶವನ್ನು ಅಲ್ಲಗೆಳೇದರು.
Comments are closed.