ಕರಾವಳಿ

ನಾಳೆ ಆನಂದ ಗುರೂಜಿಯವರಿಂದ ಆಯುರ್ ವಿವೇಕ್ ಉದ್ಘಾಟನೆ ; ಆಯುರ್ವೇದಿಕ್ ಔಷಧಿ ಸಸಿ ವಿತರಣೆ

Pinterest LinkedIn Tumblr

ಮಂಗಳೂರು, ಜೂನ್.28: ಆಯುರ್ವೇದಿಕ್ ಉತ್ಪನ್ನಗಳ ರಖಂ ಮಾರಾಟ ಮಳಿಗೆಗಳಲ್ಲಿ ಪ್ರಖ್ಯಾತವಾಗಿರುವ ವಿವೇಕ್ ಟ್ರೇಡರ್ಸ್ ಇದರ ಪ್ರಪ್ರಥಮ ರಿಟೇಲ್ ಮಾರಾಟ ಮಳಿಗೆ “ಆಯುರ್ ವಿವೇಕ್” ಇದೇ ಜೂನ್ 29 ರಂದು ಶನಿವಾರ ಸಂಜೆ 4 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಪಾಲುದಾರ ಮಂಗಲ್ಪಾಡಿ ನರೇಶ್ ಶೆಣೈ ಹೇಳಿದ್ದಾರೆ.

ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಮುಂಭಾಗದಲ್ಲಿರುವ ನೂತನ ಮಳಿಗೆಯನ್ನು ಶ್ರೀ ಡಾ.ಮಹರ್ಷಿ ಆನಂದ್ ಗುರೂಜಿಯವರು ಉದ್ಘಾಟಿಸಲಿದ್ದಾರೆ. ಅಲ್ಲಿ ಆಗಮಿಸುವ ಮೊದಲ ಹತ್ತು ಜನರಿಗೆ ಮಂಗಲ್ಪಾಡಿ ನಾಮದೇವ ಶೆಣೈಯವರ ಸ್ಮರಣಾರ್ಥ ಗ್ರೀನ್ ಮಂಗಳೂರು ಯೋಜನೆಯಡಿಯಲ್ಲಿ ಗುರೂಜಿಯವರ ದಿವ್ಯಹಸ್ತದಿಂದ ಆಯುರ್ವೇದಿಕ್ ಔಷಧಿ ಸಸಿಗಳನ್ನು ವಿತರಿಸಲಾಗುವುದು.

ನಂತರ ಡಾ|ಮಹರ್ಷಿ ಆನಂದ ಗುರೂಜಿಯವರು ಕೊಡಿಯಾಲ್ ಬೈಲಿನಲ್ಲಿರುವ ಟಿವಿ ರಮಣ್ ಪೈ ಹಾಲಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಲಿರುವರು. ಆ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ನಗರ ದಕ್ಷಿಣ ಡಿ ವೇದವ್ಯಾಸ್ ಕಾಮತ್ ಉಪಸ್ಥಿತರಿರುವರು. ಆರ್ಶೀವಚನ ಕಾರ್ಯಕ್ರಮಕ್ಕೆ ಬಂದವರಿಗೆ ಸಸಿಗಳನ್ನು ವಿತರಿಸಲಾಗುವುದು.

ನೂತನವಾಗಿ ಉದ್ಘಾಟನೆಗೊಳ್ಳಲಿರುವ ಆಯುರ್ ವಿವೇಕ್ ರಿಟೇಲ್ ಆಯುರ್ವೇದಿಕ್ ಮಾರಾಟ ಮಳಿಗೆಯಲ್ಲಿ ಎಲ್ಲಾ ಖ್ಯಾತ ಆಯುರ್ವೇದಿಕ್ ಕಂಪೆನಿಗಳ ಉತ್ಪನ್ನಗಳನ್ನು ರಿಟೇಲ್ ಆಗಿ ಖರೀದಿಸುವ ಅವಕಾಶ ಗ್ರಾಹಕರಿಗೆ ದೊರಕಲಿದೆ. ನಗರದ ಹೃದಯಭಾಗದಲ್ಲಿರುವ ಆಯುರ್ ವಿವೇಕ್ ರಿಟೇಲ್ ಮಾರಾಟ ಮಳಿಗೆ ಮುಂದಿನ ದಿನಗಳಲ್ಲಿ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಕಟಿಬದ್ಧವಾಗಿದೆ ಎಂದು ಮಂಗಲ್ಪಾಡಿ ನರೇಶ್ ಶೆಣೈ ತಿಳಿಸಿದ್ದಾರೆ.

ಡಾ.ಮಹರ್ಷಿ ಆನಂದ ಗುರೂಜಿಯವರು ಶನಿವಾರ 29, ಜೂನ್ ರಂದು ಮಧ್ಯಾಹ್ನ 12.15 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವವರಿದ್ದು, ಅವರ ಸ್ವಾಗತಕ್ಕೆ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದು ಎಂದು ನರೇಶ್ ಶೆಣೈ ತಿಳಿಸಿದ್ದಾರೆ.

Comments are closed.