ಮುಂಬೈ [ಜೂ.28] : ಹಾಲಿನ ಪ್ಯಾಕ್ ಖಾಲಿಯಾದ ಬಳಿಕ ಎಲ್ಲೆಂದರಲ್ಲಿ ಎಸೆದು ಉಂಟಾಗುವ ಪರಿಸರ ಮಾಲಿನ್ಯ ತಡೆಗೆ ಮಹಾರಾಷ್ಟ್ರ ಸರ್ಕಾರ ಹೊಸ ಯೋಜನೆ ರೂಪಿಸಿದೆ.
ಅದರನ್ವಯ, ಇನ್ನು ಮುಂದೆ ಅರ್ಧ ಲೀ. ಹಾಲಿನ ಪ್ಯಾಕೆಟ್ ಖರೀದಿಸಿದರೆ ಅದಕ್ಕೆ 50 ಪೈಸೆ ಹಣವನ್ನು ಅಂಗಡಿಯವರಿಗೆ ಠೇವಣಿಯಾಗಿ ನೀಡಬೇಕು. ಮುಂದಿನ ಬಾರಿ ಗ್ರಾಹಕ ಹಾಲು ಖರೀದಿಗೆ ಹೋದಾಗ ಖಾಲಿ ಪ್ಯಾಕ್ ನೀಡಿದರೆ 50 ಪೈಸೆ ಮರಳಿ ನೀಡಲಾಗುತ್ತದೆ.
ಇಲ್ಲದೇ ಹೋದಲ್ಲಿ ಆ ಹಣವನ್ನು ಅಂಗಡಿ ಸರ್ಕಾರಕ್ಕೆ ನೀಡುತ್ತಾನೆ. ದಿನಂಪ್ರತಿ 1 ಕೋಟಿ ರು. ಮೌಲ್ಯದ ಹಾಲಿನ ಪೌಚ್‌ಗಳು ಬೀದಿಗಳಲ್ಲಿ ಕಾಣಸಿಗುತ್ತಿದ್ದು, ಇದರಿಂದ ಮಾಸಿಕ ಬೀದಿ ಬದಿಯಲ್ಲಿ ಹಾರಾಡುವ 31 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸರಳವಾಗಿ ನಿರ್ವಹಿಸಲು ಸಾಧ್ಯವಿದೆ ಎಂದು ಮಹಾ ಸರ್ಕಾರ ಅಂದಾಜಿಸಿದೆ.
Comments are closed.