ಬಾಗಲಕೋಟೆ: ಸಮ್ಮಿಶ್ರ ಸರ್ಕಾರ ಇಂಗ್ಲಿಷ್ ಮಾದ್ಯಮದಲ್ಲಿ ಶಾಲೆ ತೆರೆಯುತ್ತಿದೆ. ಆದರೆ, ಎಷ್ಟು ಜನ ಶಿಕ್ಷಕರಿಗೆ ಇಂಗ್ಲೀಷ್ ಬರುತ್ತೇ ಅನ್ನೋದು ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಾಗಲಕೋಟೆಯ ಬಾದಾಮಿಯ ಅಲೂರ ಎಸ್. ಕೆ. ಗ್ರಾಮದಲ್ಲಿ ಗುರುವಾರ ಮಾತನಾಡಿದ ಸಿದ್ದರಾಮಯ್ಯ, ಈಗಿನ ಶಿಕ್ಷಕರು ಪಿಯುಸಿ, ಟಿಸಿಹೆಚ್ ಮುಗಿಸಿರುತ್ತಾರೆ. ನಾನು ಓದುವಾಗ ನಮ್ಮ ಮೇಷ್ಟ್ರು ಸೈಕಾಲಾಜಿ ಅಂತ ಹೇಳೋ ಬದಲು ಪಿಸಕಾಲಾಜಿ ಅಂತ ಹೇಳಿಕೊಟ್ಟಿದ್ದರು ನಾವು ಅವಾಗ ಅದನ್ನೇ ಕಲಿತಿದ್ದೇವೆ ಎಂದರು.
ಇನ್ನು ನಮ್ಮೂರಲ್ಲಿ ಇಂಗ್ಲಿಷ್ ಶಾಲೆ ತೆರೆಯಿರಿ ಎಂಬ ಗ್ರಾಮಸ್ಥರ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದ್ದು, ಇಂಗ್ಲಿಷ್ ಒಂದು ಭಾಷೆಯಾಗಿರಬೇಕು. ಮಾದ್ಯಮವಲ್ಲ. ನಾನು ಕನ್ನಡ ಕಲಿತು ನಿರರ್ಗಳವಾಗಿ ಮಾತನಾಡ್ತೇನೆ. ಆದರೆ, ಅದೇ ಇಂಗ್ಲೀಷ್ನಲ್ಲಿ ಗಂಟೆಗಟ್ಟಲೆ ಮಾತನಾಡೋದು ಕಷ್ಟ ಎಂದು ಅವರು ನುಡಿದರು.
ಸದ್ಯ ಪೋಷಕರು ತಮ್ಮ ಮಕ್ಕಳನ್ನ ಇಂಗ್ಲೀಷ್ ಮಾದ್ಯಮದಲ್ಲಿ ಕಲಿಸೋದು ಪ್ಯಾಶನ್ ಆಗಿದೆ. ಪೋಷಕರಿಗೆ ಅಪ್ಪ-ಅಮ್ಮ ಅನ್ನೋ ಬದಲಾಗಿ ಮಮ್ಮಿ, ಡ್ಯಾಡಿ, ಅಂಕಲ್, ಆಂಟಿ ಅನಿಸಿಕೊಳ್ಳೋದೆ ಹಿತವಾಗಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಅಲ್ಲಿನ ನೆರೆದಿದ್ದ ಸಾರ್ವಜನಿಕರು ನಗೆ ಗಡಲಲ್ಲಿ ತೇಲಿದಲ್ಲದೇ ಮುಖ್ಯಮಂತ್ರಿ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ವಿರುದ್ದ ಧಿಕ್ಕಾರ ಘೋಷಣೆ ಕೂಗಿದರು.
Comments are closed.