ಮನೋರಂಜನೆ

ದುಷ್ಕರ್ಮಿಯ ಗುಂಡೇಟಿಗೆ ಸ್ಥಳದಲ್ಲೇ ಬಿದ್ದ ಸನ್ನಿ ಲಿಯೋನ್

Pinterest LinkedIn Tumblr


ಮುಂಬೈ: ಬಾಲಿವುಡ್ ಮಾದಕ ಬೆಡಗಿ ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನೋಡಿ ಅಭಿಮಾನಿಗಳು ಮೊದಲು ಗಾಬರಿಗೊಂಡರು ನಂತರ ನಕ್ಕು ಸುಮ್ಮನಾಗಿದ್ದಾರೆ.

ವಿಡಿಯೋದಲ್ಲಿ ಸನ್ನಿ ಲಿಯೋನ್ ರಾತ್ರಿ ವೇಳೆ ಶೂಟಿಂಗ್ ಮಾಡುತ್ತಿರುತ್ತಾರೆ. ಈ ವೇಳೆ ದುಷ್ಕರ್ಮಿಯೊಬ್ಬ ಸನ್ನಿ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡು ಬಿದ್ದ ಕಾರಣ ಸನ್ನಿ ಸ್ಥಳದಲ್ಲಿಯೇ ಬೀಳುತ್ತಾರೆ. ವಿಡಿಯೋ ಮುಗಿಯುವವರೆಗೂ ಅವರು ಎದ್ದೇಳಲಿಲ್ಲ.

ಈ ವಿಡಿಯೋ ಪೋಸ್ಟ್ ಮಾಡಿದ ನಂತರ ಸನ್ನಿ ಲಿಯೋನ್ ಮತ್ತೊಂದು ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಮೊದಲನೇ ವಿಡಿಯೋದ ಭಾಗವಾಗಿದ್ದು, ಇದರಲ್ಲಿ ಸನ್ನಿ ಲಿಯೋನ್ ನಗುತ್ತಾ ಪ್ರಾಂಕ್ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಸನ್ನಿ ಲಿಯೋನ್ ತಮ್ಮ ಮೊದಲನೇ ವಿಡಿಯೋದಲ್ಲಿ ಗ್ರಾಫಿಕ್ ವಾರ್ನಿಂಗ್ ಪಾರ್ಟ್-1: ಸನ್ನಿ ಲಿಯೋನ್ ಅವರ ಪರವಾಗಿ ನಾವು ಈ ವಿಡಿಯೋ ಪೋಸ್ಟ್ ಮಾಡಬೇಕಿತ್ತು. ಕಳೆದ ರಾತ್ರಿ ಸಿನಿಮಾ ಸೆಟ್‍ನಲ್ಲಿ ಏನಾಗಿತ್ತು ಎಂಬುದು ಜಗತ್ತಿಗೆ ಗೊತ್ತಾಗಬೇಕಿತ್ತು ಎಂದು ಕ್ಯಾಪ್ಷನ್ ಕೊಟ್ಟಿದ್ದರು.

ಮತ್ತೊಂದು ವಿಡಿಯೋದಲ್ಲಿ ಗ್ರಾಫಿಕ್ ವಾರ್ನಿಂಗ್ ಪಾರ್ಟ್ -2: ಸದ್ಯ ಆಕೆ ಕ್ಷೇಮವಾಗಿದ್ದಾಳೆ ಎಂದು ಬರೆದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಸನ್ನಿ ಲಿಯೋನ್ ಅವರು ಪೋಸ್ಟ್ ಮಾಡಿದ ಮೊದಲನೇ ವಿಡಿಯೋ ನೋಡಿ ಅಭಿಮಾನಿಗಳು ಗಾಬರಿಗೊಂಡರು, ಬಳಿಕ ಎರಡನೇ ಭಾಗದ ವಿಡಿಯೋ ನೋಡಿ ಜನರು ನಕ್ಕು ಸುಮ್ಮನಾಗಿದ್ದಾರೆ.

Comments are closed.