ಮನೋರಂಜನೆ

ಸಮುದ್ರದಲ್ಲಿ ಬೀಳುತ್ತಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾರ ನ್ನು ಕಾಪಾಡಿದ್ದ್ಯಾರು?

Pinterest LinkedIn Tumblr


ಬಾಲಿವುಡ್ ನಲ್ಲಿ ಕಪಲ್ ಗಳು ಪದೇ ಪದೇ ಸುದ್ದಿಯಾಗುತ್ತಿರುವುದು ಹೊಸ ವಿಷಯವೇನಲ್ಲ. ಅದರಲ್ಲೂ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಹಾಗಾಗ ಸಾಮಾಜಿಕ ಜಾಲಾತಾಣಗಳಲ್ಲಿ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗಾ ವಿಹಾರ ನೌಕೆಯಿಂದ ಸಮುದ್ರಕ್ಕೆ ಬೀಳುತ್ತಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾರನ್ನು ಪತಿ ನಿಕ್ ಕಾಪಾಡುವ ಮೂಲಕ ಸುದ್ದಿಯಾಗಿದ್ದಾರೆ.

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಸಪ್ತಪತಿ ತುಳಿದ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಕೆಲವು ದಿನಗಳ ಹಿಂದೆ ಇವರಿಬ್ಬರ ಸಂಸಾರದಲ್ಲಿ ಬಿರುಕು ಮೂಡಿದೆ ಎಂದು ಸುದ್ದಿಯಾಗಿದ್ದರು, ನಂತರ ಅಮೆರಿಕದಲ್ಲಿ ನಡೆದ ‘ಮೆಟ್ ಗಾಲಾ 2019’ ಕಾರ್ಯಕ್ರಮದಲ್ಲಿ ವಿಚಿತ್ರ ಉಡುಗೆಯನ್ನು ತೊಡುವ ಮೂಲಕ ಸುದ್ದಿಯಾಗಿದ್ದರು.

ಇದೀಗಾ ಪತಿ ನಿಕ್ ಸಹೋದರನ ಮದುವೆಯಲ್ಲಿ ಪಾಲ್ಗೊಳ್ಳಲು ಈ ಜೋಡಿ ಪ್ಯಾರೀಸ್ ಗೆ ಹೋಗಿದ್ದಾರೆ. ಈ ವೇಳೆ ವಿಹಾರ ನೌಕೆಯಲ್ಲಿ ಪ್ರಿಯಾಂಕಾ ಮತ್ತು ನಿಕ್ ಎಂಜಾಯ್ ಮಾಡುತ್ತಿದ್ದಾಗ ಸಮುದ್ರಕ್ಕೆ ಬೀಳುತ್ತಿದ್ದ ಪತ್ನಿ ಪ್ರಿಯಾಂಕಾರನ್ನು ಕಾಪಾಡಿ ನಿಕ್ ಹಾಗೂ ಪ್ರಿಯಾಂಕ ವಿಡಿಯೋ ಇದೀಗಾ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಫುಲ್ ವೈರಲ್ ಆಗುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು, ಪತಿ ನಿಕ್ ಜೊತೆ ಅವರ ಸಹೋದರನ ಮದುವೆಯಲ್ಲಿ ಭಾಗವಹಿಸಲು ಪ್ರಿಯಾಂಕ ಪ್ಯಾರೀಸ್‍ಗೆ ಹೋಗಿದ್ದಾರೆ. ಈ ವೇಳೆ ಪ್ರಿಯಾಂಕಾ ಪತಿ ನಿಕ್ ಜೊತೆ ವಿಹಾರ ನೌಕೆಯಲ್ಲಿ ಡ್ಯಾನ್ಸ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾಗ ಬ್ಯಾಲೆನ್ಸ್ ತಪ್ಪಿ ಸಮುದ್ರದಲ್ಲಿ ಬೀಳುತ್ತಿದ್ದರು. ಆಗ ಪತಿ ನಿಕ್ ಜೋನಸ್ ಅವರು ಪ್ರಿಯಾಂಕಾರನ್ನು ಕಾಪಾಡಿದ್ದಾರೆ. ಈ ನಡುವೆ ಪ್ರಿಯಾಂಕಾ ಕೈಯಲ್ಲಿದ್ದ ಗ್ಲಾಸ್ ಸಮುದ್ರದಲ್ಲಿ ಬಿದಿದ್ದೆ. ನಂತರ ಪತಿಯ ಕಡೆ ನೋಡಿದ ಪ್ರಿಯಾಂಕ ಮುಳು ನಗೆ ಬೀರಿದ್ದಾರೆ.

ವಿಹಾರ ನೌಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಪ್ರಿಯಾಂಕ ಥೈ ಹೈ ಸಿಲ್ಟ್ ನ ಮ್ಯಾಕ್ಸಿ ಉಡುಪು ಧರಿಸಿದ್ದರು, ಇನ್ನೂ ನಿಕ್ ಜೀನ್ಸ್ ಜೊತೆ ಕ್ಯಾಶೂಯಲ್ ಶರ್ಟ್ ವೇರ್ ಮಾಡಿದ್ದರು. ಇನ್ನೂ ಪ್ರಿಯಾಂಕಾ ಚೋಪ್ರಾ ಅಭಿಮಾನಿಗಳು ಪ್ಯಾರೀಸ್‍ನಲ್ಲಿ ತಮ್ಮ ಪತಿ ನಿಕ್ ಜೊತೆ ಡ್ಯಾನ್ಸ್ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Comments are closed.