ಕುಂದಾಪುರ: ಕೋಟ ಸಮೀಪದ ಮಣೂರಿನಲ್ಲಿ ಜ.26 ರ ತಡರಾತ್ರಿ ನಡೆದ ಭರತ್ ಹಾಗೂ ಯತೀಶ್ ಕಾಂಚನ್ ಎನ್ನುವ ಗೆಳೆಯರ ಜೋಡಿ ಕೊಲೆ ಪ್ರಕರಣವು ಹೆಚ್ಚಿನ ವಿಚಾರಣೆಗಾಗಿ ಕುಂದಾಪುರದ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯ (ಸೆಶನ್ಸ್ ಕೋರ್ಟ್)ಕ್ಕೆ ರವಾನೆ ಮಾಡಿ (ಕಮೀಟ್) ನ್ಯಾಯಾಧೀಶರಾದ ನಾಗರತ್ನಮ್ಮ ಶನಿವಾರ ಆದೇಶ ನೀಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ರೆಡ್ಡಿ ಸೋದರರಾದ ಹರೀಶ್ ರೆಡ್ಡಿ, ರಾಜಶೇಖರ್ ರೆಡ್ಡಿ, ಚಂದ್ರಶೇಖರ ರೆಡ್ಡಿ, ರತೀಶ್ ಎಂ. ಕರ್ಕೇರಾ, ಒಳಸಂಚು ನಡೆಸಿದ ಆರೋಪ ಹೊತ್ತಿರುವ ರಾಘವೇಂದ್ರ ಕಾಂಚನ್, ಸಹಕರಿಸಿದ ಆರೋಪದಲ್ಲಿ ಡಿ.ಎ.ಆರ್. ಪೊಲೀಸ್ ಸಿಬ್ಬಂದಿಗಳಾದ ಪವನ್ ಅಮೀನ್, ವಿರೇಂದ್ರ ಆಚಾರ್ಯ, ವಿದ್ಯಾರ್ಥಿ ಪ್ರಣವ್ ರಾವ್, ಮಹಮ್ಮದ್ ತೌಸೀಪ್, ಹಾಗೂ ಪ್ರಕರಣದಲ್ಲಿ ಭಾಗಿಯಾದ ಮಹೇಶ್, ಮೆಡಿಕಲ್ ರವಿ, ರವಿಚಂದ್ರ, ಅಭಿಷೇಕ ಅಲಿಯಾಸ್ ಅಭಿ ಪಾಲನ್ ,ಸಂತೋಷ್ ಕುಂದರ್, ನಾಗರಾಜ ಅಲಿಯಾಸ್ ರೊಟ್ಟಿ ನಾಗರಾಜ, ಸುಜಯ್, ಶಂಕರ ಮೊಗವೀರ, ಪ್ರವೀಣ ಶೆಟ್ಟಿ ಸದ್ಯ ಜೈಲಿನಲ್ಲಿದ್ದಾರೆ.
ಆರೋಪಿಗಳು ಹಿರಿಯಡ್ಕ ಸಬ್ ಜೈಲಿಗೆ…
ಇನ್ನು ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿಗಳು ಕ್ರಿಮಿನಲ್ ಹಾಗೂ ರಾಜಕೀಯ ಹಿನ್ನೆಲೆಯುಳ್ಳವರಾಗಿದ್ದು ಉಡುಪಿಯ ಹಿರಿಯಡಕ ಸಬ್ ಜೈಲಿನಲ್ಲಿರುವ ಆರೋಪಿಗಳು ಒಳಸಂಚು ಮಾಡುತ್ತಾರೆ, ಕೆಲವೊಬ್ಬರು ರೌಡಿ ಶೀಟರ್ ಆಗಿರುವುದರಿಂದ ಜೈಲಿನಲ್ಲಿ ಶಾಂತಿಭಂಗ ಮಾಡುತ್ತಾರೆ, ಕೆಲವರು ರಾಜಕೀಯ ಪ್ರಭಾವ ಬಳಸುತ್ತಾರೆ ಮತ್ತು ಸಾಕ್ಷ್ಯಾಧಾರಗಳ ಮೇಲೆ ಪ್ರಭಾವ ಬೀರುತ್ತಾರೆ ಅದಕ್ಕಾಗಿ ಈ ಎಲ್ಲಾ ಆರೋಪಿಗಳನ್ನು ಕಾರವಾರ ಹಾಗೂ ಶಿವಮೊಗ್ಗ ಜೈಲಿಗೆ ಕಳಿಸಬೇಕು ಎಂದು ಬೆಂಗಳೂರಿನ ಬಂಧಿಕಾನೆ ಮಹಾನಿರೀಕ್ಷಕರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಶನಿವಾರ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆದಿದ್ದು ಆರೋಪಿಗಳ ಪರವಾಗಿ ಕುಂದಾಪುರದ ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಸುದೀರ್ಘ ವಾದ ಮಂಡಿಸಿದ್ದರು. ಆರೋಪಿಗಳನ್ನು ಹಿರಿಯಡಕ ಸಬ್ ಜೈಲಿಗೆ ರವಾನಿಸಲಾಗಿದೆ.
ವಕೀಲರ ವಾದವೇನು..?
ಆರೋಪಿಗಳನ್ನು ಬೇರೆ ಜೈಲಿಗೆ ಹಂಚಿಕೆ ಮಾಡಬೇಕು ಎಂಬ ಮನವಿ ಹಿನ್ನೆಲೆ ಈ ವಿಚಾರ ಸರಿಯಲ್ಲ ಅವರನ್ನು ಹಿರಿಯಡಕದಲ್ಲಿಯೇ ಇರಿಸಬೇಕು ಎಂದು ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ವಾದ ಮಡಿಸಿದ್ದರು. ಕಳೆದ ಹದಿನೈದು ದಿನಗಳ ಅಂತರದಲ್ಲಿ ಆರೋಪಿತರು ಜೈಲಿನಲ್ಲಿ ಯಾವುದೇ ಗಲಾಟೆ ಮಾಡಿಲ್ಲ, ಆರೋಪಿಗಳ ಕುಟುಂಬಿಕರು ಕೂಡ ಸ್ಥಳಿಯರಾಗಿದ್ದಾರೆ. ಕೆಲವು ಆರೋಪಿಗಳಿಗೆ ಅನಾರೋಗ್ಯ ಸಮಸ್ಯೆಯಿದೆ. ಕುಂದಾಪುರ ನ್ಯಾಯಾಲಯ ಹಾಗೂ ಪ್ರಕರಣ ನಡೆದ ಕೋಟ ಪೊಲೀಸ್ ಠಾಣೆ ವ್ಯಾಪ್ತಿಗೆ ಹಿರಿಯಡಕ ಸಬ್ ಜೈಲು ಸ್ವಾಭಾವಿಕವಾಗಿ ನೀಡಲಾಗುತ್ತದೆ. ಆರೋಪಿಗಳನ್ನು ಬೇರೆ ಕಡೆಗೆ ರವಾನಿಸುವುದು ಅಸ್ವಾಭಾವಿಕವಾಗುತ್ತದೆ. ಈ ಅಸ್ವಾಭಾವಿಕ ಪ್ರಕ್ರಿಯೆಗೆ ಸಮರ್ಪಕ ಕಾರಣವನ್ನೂ ಅಧಿಕಾರಿಗಳು ನೀಡಿಲ್ಲ. ಅದಕ್ಕಾಗಿ ಆರೋಪಿಗಳನ್ನು ಹಿರಿಯಡಕ ಜೈಲಿನಲ್ಲೇ ಇಡಬೇಕು ಎಂದು ವಾದ ಮಂಡಿಸಿದ್ದು ಇದನ್ನು ನ್ಯಾಯಾಧೀಶರು ಪುರಸ್ಕರಿಸಿದ್ದಾರೆ.
ಅಂದು ನಡೆದಿದ್ದೇನು?
ಜ.26 ಶನಿವಾರ ತಡರಾತ್ರಿ ಕೊಲೆಯಾದ ಭರತ್ ಮತ್ತು ಯತೀಶ್ ಇಬ್ಬರು ಕೂಡ ಸ್ನೇಹಿತ ಲೋಹಿತ್ ಕರೆಗೆ ಓಗೊಟ್ಟು ಆತನನ್ನು ರಕ್ಷಿಸಲು ಬಂದಿದ್ದರು. ಅಂದು ತಡರಾತ್ರಿ ಟಾಯ್ಲೆಟ್ ಪಿಟ್ ವಿಚಾರದಲ್ಲಿ ರೌಡಿಶೀಟರ್ ಸೋದರರು ಮತ್ತು ತಂಡ ಲೋಹಿತ್ ಮೇಲೆ ಅಟ್ಯಾಕ್ ಮಾಡಲು ಆತನ ಮನೆ ಮುಂದೆ ಆಗಮಿಸಿದ್ದರು. ಈ ವೇಳೆ ಗಲಾಟೆ ತಪ್ಪಿಸಲು ಬಂದ ಯತೀಶ್ ಹಾಗೂ ಭರತನನ್ನು ದುಷ್ಕರ್ಮಿಗಳು ಮನಸ್ಸೋಇಚ್ಚೆ ತಲವಾರು ದಾಳಿ ನಡೆಸಿ ಕೊಂದಿದ್ದರು. ಬಳಿಕ ಎಲ್ಲರೂ ಅಲ್ಲಿಂದ ಪರಾರಿಯಾಗಿದ್ದು ಮನೆಯಿಂದ ಅನತಿ ದೂರದಲ್ಲಿ ತಲವಾರು ಎಸೆದಿದ್ದರು. ಕೆಲವೇ ದಿನಗಳಲ್ಲಿ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿದ್ದರು.
ಕಳೆದ ಐದು ತಿಂಗಳ ಹಿಂದೆ ಬೆಚ್ಚಿಬೀಳಿಸಿದ ಪ್ರಕರಣ ಉಡುಪಿ ಜಿಲ್ಲೆಯ ಮಣೂರಿನಲ್ಲಿ ನಡೆದಿತ್ತು. ಮೊದಲಿಗೆ ಟಾಯ್ಲೆಟ್ ಪಿಟ್ ವಿಚಾರದಲ್ಲಿ ಈ ಕೊಲೆ ನಡೆದಿತ್ತು ಎನ್ನಲಾಗಿದ್ದರೂ ಕೂಡ ಅಂದಿನ ದಕ್ಷ ಪೊಲೀಸ್ ಅಧಿಕಾರಿಗಳ ಚಾಣಾಕ್ಷತೆಯ ತನಿಖೆಯಿಂದ ಸಮಗ್ರ ಕೊಲೆ ಪ್ರಕರಣ ಬೇರೆಯೇ ತಿರುವು ಪಡೆದಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಒಂದಷ್ಟು ನಟೋರಿಯಸ್ ರೌಡಿ ಶೀಟರುಗಳು, ಜಿ.ಪಂ ಸದಸ್ಯ ಸೇರಿದಂತೆ 18 ಆರೋಪಿಗಳನ್ನು ಬಂಧಿಸಲಾಗಿತ್ತು.
ನ್ಯಾಯಾಲಯಕ್ಕೆ ಸದ್ಯ ಒಂದು ಹಂತದ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದೆ. ಜನತೆಯನ್ನು ಬೆಚ್ಚಿಬೀಳಿಸಿದ ಜೋಡಿ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಾಧಾರಗಳ ವಿಚಾರಣೆ ಇನ್ನಷ್ಟೇ ನಡೆಯಬೇಕಿದ್ದು ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡುವುದರಿಂದ ಸಾಕ್ಷಿ ನಾಶ ಸಂಭವವಿದೆ ಎಂದು ಪ್ರಾಸಿಕ್ಯೂಶನ್ ಪರ ವಕೀಲರು ವಾದ ಮಂಡಿಸಿದ್ದರಿಂದ ಸದ್ಯ ಜೆ.ಎಂ.ಎಫ್.ಸಿ ಹಾಗೂ ಸೆಶನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ ಆರೋಪಿಗಳಿಗೆ ಜಾಮೀನು ತಿರಸ್ಕರಿಸಲಾಗಿದೆ.
ವರದಿ- ಯೋಗೀಶ್ ಕುಂಭಾಸಿ
ಈ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಗಳು-
ಕೋಟದಲ್ಲಿ ತಲವಾರು ದಾಳಿ: ಕ್ಷುಲ್ಲಕ ಕಾರಣಕ್ಕೆ ಹರಿಯಿತು ಇಬ್ಬರ ನೆತ್ತರು (Updated)
ಆಪ್ತಮಿತ್ರರಿಬ್ಬರ ಬರ್ಬರ ಕೊಲೆ ಪ್ರಕರಣ: ಕೋಟ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ (Video)
ಟಾಯ್ಲೆಟ್ ಪಿಟ್ ನಿರ್ಮಾಣದ ತಕರಾರು: ಆಪ್ತ ಮಿತ್ರರಿಬ್ಬರ ಮೇಲೆ ತಲವಾರು ಬೀಸಿದ ಹಂತಕರು
ಕೋಟ ಆಪ್ತಮಿತ್ರರನ್ನು ಕೊಂದ ಕೊಲೆಗಾರರ ಪತ್ತೆಗೆ ಚುರುಕುಗೊಂಡ ತನಿಖೆ
ಕೋಟದಲ್ಲಿ ಸ್ನೇಹಿತರಿಬ್ಬರ ಮರ್ಡರ್ ಕೇಸ್: ಆರೋಪಿಗಳಿಗಾಗಿ ಮುಂದುವರಿದ ಶೋಧ
ಕೋಟ ಅವಳಿ ಕೊಲೆ: ಹರೀಶ್ ರೆಡ್ಡಿ ಸಹಚರರು ಇನ್ನೂ ಭೂಗತ!
ಇನ್ನೂ ಪತ್ತೆಯಾಗದ ಕೊಲೆಗಾರರು; ನ್ಯಾಯಕ್ಕಾಗಿ ಆಗ್ರಹಿಸಿ ಫೆ.3ಕ್ಕೆ ಕೋಟ ಬಂದ್
ಕೋಟದಲ್ಲಿ ಅವಳಿ ಕೊಲೆ ಪ್ರಕರಣ: ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬಂದ್, ಪ್ರತಿಭಟನೆ (Video)
ಕೋಟ ಅವಳಿ ಕೊಲೆ ಪ್ರಕರಣದ ಆರೋಪಿಗಳ ಬಂಧನ? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಅಂತೆಕಂತೆ!
ಕೋಟ ಡಬ್ಬಲ್ ಮರ್ಡರ್ ಕೇಸ್: ಇಬ್ಬರು ಆರೋಪಿಗಳ ಬಂಧನ
ಕೋಟ ಸ್ನೇಹಿತರ ಕೊಲೆಗೆ ಜಿ.ಪಂ ಸದಸ್ಯನೇ ಸೂತ್ರಧಾರಿ; ಪೊಲೀಸರಿಂದ 6 ಮಂದಿ ಬಂಧನ
ಕೋಟ ಅವಳಿ ಕೊಲೆಯ ಆರು ಆರೋಪಿಗಳಿಗೆ ಫೆ.15ರವರೆಗೆ ಪೊಲೀಸ್ ಕಸ್ಟಡಿ, ಮುಂದುವರಿಯಲಿದೆ ತನಿಖೆ
ಕೋಟ ಜೋಡಿ ಕೊಲೆ ಪ್ರಕರಣ ನಡೆದ ಮನೆಯಲ್ಲಿ ಮಹಜರು; ಕೃತ್ಯಕ್ಕೆ ಬಳಸಿದ್ದ 2 ಬೈಕ್ ವಶ
ಕೋಟ ಸ್ನೇಹಿತರಿಬ್ಬರ ಕೊಲೆ ಪ್ರಕರಣ: ರೆಡ್ಡಿಗೆ ಸಹಕರಿಸಿದ ಇಬ್ಬರು ಪೊಲೀಸರು ಅರೆಸ್ಟ್
ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಿದ ಬಿಜೆಪಿಯವರಿಂದ ಕೊಲೆಗಡುಕರಿಗೆ ಬೆಂಬಲ: ಮಾಜಿ ಸಚಿವ ಸೊರಕೆ
ಕೋಟ ಸ್ನೇಹಿತರಿಬ್ಬರ ಕೊಲೆಯಲ್ಲಿ ಭಾಗಿಯಾದವನೂ ಸೇರಿ ಮತ್ತೆ ಐದು ಮಂದಿ ಬಂಧನ
ಕೋಟ ಜೋಡಿ ಕೊಲೆಗೆ ನ್ಯಾಯ ಕೇಳಿ ದೇವರ ಮೊರೆ ಹೋದವರಿಗೆ ಸಿಕ್ಕಿತು ಭರವಸೆಯ ನುಡಿ (Video
ಕೋಟ ಡಬಲ್ ಮರ್ಡರ್ ಕೇಸಿನ ಪ್ರಮುಖ ಆರೋಪಿ ಚಂದ್ರಶೇಖರ್ ರೆಡ್ಡಿ ಸಮೇತ ಇನ್ನೋರ್ವ ಬಂಧನ(Updated)
ಕೋಟ ಡಬಲ್ ಮರ್ಡರ್ ಕೇಸಿನ 16 ಆರೋಪಿಗಳು ನ್ಯಾಯಾಲಯಕ್ಕೆ ಹಾಜರು: ಇಬ್ಬರಿಗೆ ಪೊಲೀಸ್ ಕಸ್ಟಡಿ (Video)
ಕೋಟ ಡಬಲ್ ಮರ್ಡರ್ ಆರೋಪಿ ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್ ಬಿಜೆಪಿಯಿಂದ ಅಮಾನತು
ಕೋಟ ಮರ್ಡರ್ ಕೇಸಿನ ಮೂವರು ಆರೋಪಿಗಳಿಗೆ ಜೈಲೋ? ಬೇಲೋ? ಫೆ.19 ಕ್ಕೆ ಆದೇಶ
ಕೋಟ ಮರ್ಡರ್ ಕೇಸಿನ ಮೂವರು ಆರೋಪಿಗಳಿಗೆ ಸದ್ಯ ಜೈಲೇ ಗತಿ; ಓರ್ವನಿಗೆ ಪೊಲೀಸ್ ಕಸ್ಟಡಿ
ಕೋಟ ಜೋಡಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ
ಕೋಟ ಜೋಡಿ ಕೊಲೆ ಪ್ರಕರಣ: ಆರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ
Comments are closed.