ಕ್ರೀಡೆ

ಟೀಂ ಇಂಡಿಯಾ ‘ಕೇಸರಿ’ ಜೆರ್ಸಿ ಅನಾವರಣ ಮಾಡಿದ ಬಿಸಿಸಿಐ !

Pinterest LinkedIn Tumblr

ಲಂಡನ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಟೀಂ ಇಂಡಿಯಾದ ಜೆರ್ಸಿಯನ್ನು ಕೇಸರಿಮಯಗೊಳಿಸುತ್ತಿದೆ ಎಂದು ವಿಪಕ್ಷಗಳ ಆರೋಪದ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡದ ಹೊಸ ಜೆರ್ಸಿಯನ್ನು ಅನಾವರಣ ಮಾಡಿದೆ.

https://www.instagram.com/p/BzQzO8EArLx/?utm_source=ig_embed

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇಸರಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಕಿತ್ತಳೆ ಹಾಗೂ ನೀಲಿ ಮಿಶ್ರಿತ ಜೆರ್ಸಿಯನ್ನು ಬಿಸಿಸಿಐ ಅನಾವರಣಗೊಳಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನಿಯಮದ ಪ್ರಕಾರ ಎರಡು ತಂಡಗಳು ಒಂದೇ ಬಣ್ಣದ ಜೆರ್ಸಿಯನ್ನು ತೊಟ್ಟು ಮೈದಾನಕ್ಕೆ ಇಳಿಯಬಾರದು. ಇಂಗ್ಲೆಂಡ್ ನೀಲಿ ಬಣ್ಣದ ಜೆರ್ಸಿ ತೊಡುವುದರಿಂದ ಟೀಂ ಇಂಡಿಯಾ ಸಹ ನೀಲಿ ಬಣ್ಣದ ಜೆರ್ಸಿ ಹಾಕುತ್ತಿರುವುದರಿಂದ ಈ ಬಾರಿ ಈ ಜೆರ್ಸಿಯಲ್ಲಿ ಬಿಸಿಸಿಐ ಕೊಂಚ ಬದಲಾವಣೆ ಮಾಡಿದೆ.

ಜೂನ್ 30ರಂದು ಆತಿಥೇಯ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೆಣೆಸಲಿದ್ದು ಕೇಸರಿ ಬಣ್ಣದ ಜೆರ್ಸಿಯಲ್ಲಿ ಕಮಾಲ್ ಮಾಡುತ್ತದೆಯೋ ಕಾದು ನೋಡಬೇಕು.

Comments are closed.