ಕರ್ನಾಟಕ

ಬದುಕನ್ನೇ ಬಲಿಪಡೆದ ಕ್ರಿಕೆಟ್‌ ಟೂರ್ನಮೆಂಟ್‌..!

Pinterest LinkedIn Tumblr


ಆತ ಬಿಕಾಂ ಪದವಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಯುವಕ. ಬಿಡುವಿನ ವೇಳೆ ಹಾಗೂ ವಿಕೆಂಡ್ ಗಳಲ್ಲಿ ಕ್ರಿಕೇಟ್ ಟುರ್ನಿಮೆಂಟ್ ಗಳಲ್ಲಿ ಭಾಗವಹಿಸಿಕೊಂಡು, ಆಟದ ವೇಳೆ ಮೈಕ್ ಹಿಡಿದು ಕಾಂಮೆಂಟರಿ ಮಾಡುತ್ತಿದ್ದ. ಆದರೆ ಅದೇ ಮೈಕ್ ಇಂದು ಆತನ ಜೀವವನ್ನು ಬಲಿ ಪಡೆದಿದೆ.

ಕಿರಣ್‌ ಬೆಂಗಳೂರು ಹೊರವಲಯ ಕೊಟ್ಟನಹಳ್ಳಿ ನಿವಾಸಿ. ಬಿಕಾಂ ಓದ್ತಿದ್ದ ಈತನಿಗೆ ಕ್ರಿಕೆಟ್‌ ಎಂದರೇ ಪಂಚಪ್ರಾಣ. ಇದೀಗ ಅದೇ ಕ್ರಿಕೆಟ್‌ ಈತನನ್ನ ಬಲಿ ಪಡೆದಿದೆ. ಕೊಟ್ಟನಹಳ್ಳಿ ನಿವಾಸಿಯಾದ ಕಿರಣ್‌, ರಜಾ ದಿನ. ವೀಕೆಂಡ್‌ ಬಂದರೆ ಸಾಕು ಕ್ರಿಕೆಟ್‌ ಟೂರ್ನಿಮೆಂಟ್‌ಗಳಲ್ಲಿ ಭಾಗವಹಿಸುತ್ತಿದ್ದ. ಅದೇ ರೀತಿ ಇವತ್ತು ನೆಲಮಂಗಲ ತಾಲೂಕಿನ ಮಂಚೇನಹಳ್ಳಿಯಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಟೂರ್ನಮೆಂಟ್‌ಗೆ ಬಂದಿದ್ದ. ಪಂದ್ಯ ನಡೆಯುತ್ತಿದ್ದ ವೇಳೆ ಮೈಕ್‌ ಹಿಡಿದು ಕಾಮೆಂಟ್ರಿ ಕೊಡೋಕೆ ಹೋಗಿದ್ದಾನೆ. ಆದರೆ. ವಿದ್ಯುತ್‌ ರೂಪದಲ್ಲಿ ಬಂದ ಜವರಾಯ. ಕಿರಣ್‌ನನ್ನು ಬಲಿ ಪಡೆದಿದ್ದಾನೆ.

Comments are closed.