ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಆಗುತ್ತಿದೆ. ಅಬ್ಬರದ ಮಳೆಗೆ ಕುಂದಾನಗರಿ ಜನರ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದರೆ. ಇನ್ನೂ ಬತ್ತಿ ಹೋಗಿದ್ದ ನದಿ, ಹಳ್ಳಗಳ ಒಳ ಹರಿವು ಹೆಚ್ಚಾಗಿದೆ. ಮುಂಗಾರು ತಡವಾದರು ಉತ್ತಮ ಮಳೆ ಆಗುತ್ತಿರುವುದು ರೈತರ ಮೊಗದಲ್ಲಿ ಮಂದಾಸ ಮೂಡಿಸಿದೆ.
ಭೀಕರ ಬರದಿಂದ ಜಲಕ್ಷಾಮ ಎದುರಿಸುತ್ತಿದ್ದ ಗಡಿ ಜಿಲ್ಲೆ ಬೆಳಗಾವಿಗರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಮೂರು ದಿನಗಳಿಂದ ಬೆಳಗಾವಿ ಜಿಲ್ಲೆ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದೆ. ಅಬ್ಬರದ ಮಳೆಗೆ ಜನ ಜೀವನವೂ ತತ್ತರಿಸಿ ಹೋಗಿದೆ. ಅದರಲ್ಲೂ ಬೆಳಗಾವಿ ತಾಲೂಕಿನಲ್ಲಿ ಕಳೆದ 48 ಗಂಟೆಯಿಂದ ಬಿಟ್ಟುಬಿಡದೇ ಮಳೆಯಾಗಿದ್ದು, ಇದರಿಂದ ಬೆಳಗಾವಿಯ ಶಾಹುನಗರ, ಎಸ.ಬಿ.ಮೋಟರ್ ಬಳಿಯ ತಗ್ಗು ಪ್ರದೇಶದಲ್ಲಿನ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ನಿನ್ನೆ ರಾತ್ರಿಯಿಂದಲೇ ಮನೆಗೆ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಗಿದೆ.
ಮಳೆ ನೀರನ್ನ ಹೊರ ಹಾಕುವುದಕ್ಕೆ ಹೆಣಗಾಡಿದ್ದು, ಮನೆಗೆ ನೀರು ನುಗ್ಗಿದ್ದರು ಪಾಲಿಕೆ ಅಧಿಕಾರಿಗಳು ಮಾತ್ರ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಕಳೆದ 15 ವರ್ಷಗಳಿಂದ ಮಳೆಗಾಲ ಬಂದರೆ ಈ ಜನರಿಗೆ ಭಯ ಆರಂಭವಾಗುತ್ತದೆ. ಆದರು ಪಾಲಿಕೆ ಅದಿಕಾರಿಗಳು ಮಾತ್ರ ಶಾಶ್ವತ ಪರಿಹಾರವನ್ನ ಒದುಗಿಸುತ್ತಿಲ್ಲ ಎಂದು ಜನರು ಕಿಡಿಕಾರುತ್ತಿದ್ದಾರೆ.
ಇನ್ನು ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳು ಸೇರಿದಂತೆ ಹಳ್ಳ-ಕೋಳ್ಳಗಳಲ್ಲಿ ನೀರಿನ ಒಳ ಹರಿವು ಹೆಚ್ಚಾಗುತ್ತಿದೆ. ಅದರಲ್ಲೂ ಖಾನಾಪುರದಲ್ಲಿ ಎಡಬಿಡದೆ ಮಳೆಯಾಗುತ್ತಿದ್ದು, ಇದರಿಂದ ಕಣಕುಂಬಿ ಬಳಿಯ ಹೊಳೆ ಪಕ್ಕದ ಮಾರುತಿ ದೇವಸ್ಥಾನದಲ್ಲಿ ನೀರು ನುಗ್ಗಿದೆ. ಅಲ್ಲದೇ, ಅಬ್ಬರದ ಮಳೆಯಿಂದ ರೈತಾಪಿ ವರ್ಗದಲ್ಲಿ ಮಂದಹಾಸ ಮೂಡಿಸಿದೆ.
ಮುಂಗಾರು ಮಳೆ ಒಂದು ತಿಂಗಳು ತಡವಾದರು ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ರೈತರು ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಇನ್ನು ನಗರ ಪ್ರದೇಶದಲ್ಲಿ ಜನರು ಅಬ್ಬರ ಮಳೆಗೆ ಹೆದರಿ ಮನೆಯಿಂದ ಹೊರಕ್ಕೆ ಬರುತ್ತಿಲ್ಲ. ರೇನ್ ಕೋರ್ಟ್, ಛತ್ರಿ ಇಲ್ಲದೇ ಮನೆಯಿಂದಾಚೆಗೆ ಕಾಲಿಡದಂತಹ ಸ್ಥಿತಿ ನಿರ್ಮಾಣವಾಗಿದೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಲೇಟ್ ಆದರು ಲೇಟೇಸ್ಟ್ ಆಗಿಯೇ ಮಳೆರಾಯ ಕೃಪೆ ತೋರಿಸಿದ್ದಾರೆ. ಅಬ್ಬರ ಮಳೆಗೆ ನಗರದ ಪ್ರದೇಶದ ಜನರು ತತ್ತರಿಸಿ ಹೋಗಿದ್ದು, ಮಳೆಯಿಂದ ಏನಾದರು ಅನಾಹುತ ಸಂಭಿಸುವ ಮುನ್ನವೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.
Comments are closed.