ಕಳೆದ ಎರಡ್ಮೂರು ವರ್ಷಗಳಿಂದ ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಮ್ಯಾಜಿಕ್ ಮಾಡೇ ಇರ್ಲಿಲ್ಲ. ಅವರು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಐ ಲವ್ ಯು ಚಿತ್ರದ ಬಗ್ಗೆ ಭಾರಿ ಮುತುವರ್ಜಿ ವಹಿಸಿದರು. ಐ ಲವ್ ಯೂ ಸಿನಿಮಾದ ಬಗ್ಗೆ ಭಾರಿ ನಂಬಿಕೆಯಿಂದ ಮಾತನಾಡುತ್ತಿದರು..ಈಗ ಆ ನಂಬಿಕೆ , ಆ ಕಾಳಜಿ , ಆಸಕ್ತಿ ಎಲ್ಲವೂ ವರ್ಕ್ ಆಗಿದೆ. ಮತ್ತೆ ಉಪ್ಪಿ ನಟನೆಯ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಜಾದು ಮಾಡುತ್ತಿದೆ.
ಕಳೆದ ಮೂರ್ನಾಲ್ಕು ವಾರಗಳಿಂದ ಆರ್.ಚಂದ್ರು ಕಲ್ಪನೆಯ ಐಲವ್ಯು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬೇಜಾನ್ ಸೌಂಡ್ ಮಾಡ್ತಿದೆ. ಸಿನಿಮಾನ ನಂಬಿದ ಸರ್ವರಿಗೂ ಜೆಬ್ ತುಂಬ ಹಣವನ್ನು ತಂದುಕೊಡ್ತಿದೆ. ಇದನ್ನು ಚಿತ್ರತಂಡ ಚೈನ್ ಲಿಂಕ್ ಸಕ್ಸಸ್ ಎಂದು ಬಣ್ಣಿಸಿದೆ. ಸಿನಿಮಾ ಮಾಡಿದ ನಿರ್ಮಾಪಕರಿಗೂ , ವಿತರಕರಿಗೂ , ಪ್ರದರ್ಶಕರಿಗೂ , ಪಾಪ್ಕಾರ್ನ್ ಮಾರುವವರಿಂದ ಹಿಡಿದು, ವೈಹಿಕಲ್ ಸ್ಟ್ಯಾಂಡ್ ನೋಡಿಕೊಳ್ಳೋರವರೆಗೂ ಪ್ರತಿಯೋಬ್ಬರಿಗೂ ಐ ಲವ್ ಯೂ ಲಾಭ ತಂದುಕೊಟ್ಟಿದೆಯಂತೆ. ಈ ಸಂಭ್ರಮವನ್ನು ವಿತರಕರು , ಪ್ರದರ್ಶಕರು ಒಳಗೊಂಡು ಇಡೀ ಚಿತ್ರತಂಡ ಮಾಧ್ಯಮಗಳ ಮುಂದೆ ಹೇಳಿಕೊಂಡಿದೆ.
ರಿಯಲ್ ಸ್ಟಾರ್ ಉಪೇಂದ್ರ ಅವರ ಹವಾ ಕರ್ನಾಟಕದಲ್ಲಿ ಎಷ್ಟರ ಮಟ್ಟಿಗೆ ಇದಿಯೋ ಅಷ್ಟೇ ಕ್ರೇಜ್ ಪಕ್ಕ ಆಂಧ್ರಾ , ತೆಲಂಗಾಣದಲ್ಲಿ ಇದೆ. 90ರ ದಶಕದಿಂದಲೇ ತೆಲುಗು ಪ್ರೇಕ್ಷಕರಿಗೆ ಉಪ್ಪಿ ಸಿನಿಮಾದ ಗಮತ್ತು ಏನು ಅಂತ ಗೊತ್ತು, ಈಗ ಐ ಲವ್ ಯೂ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ತೆರೆಕಂಡಿರುವ ಕಾರಣ ಕರ್ನಾಟಕ ಸೇರಿದಂತೆ ಪಕ್ಕದ ಆಂಧ್ರಾ ಸೀಮೆಯಲ್ಲಿಯೂ ಸೌಂಡ್ ಮಾಡ್ತಿದೆ.
ಜೂನ್ 14ರಂದು ಕರ್ನಾಟಕದಲ್ಲಿ 325 ಚಿತ್ರಮಂದಿಗಳಲ್ಲಿ ಐಲವ್ಯು ತೆರೆಕಂಡಿತ್ತು. ಈಗ ಸಿನಿಮಾ ರಿಲೀಸ್ ಆಗಿ 25ದಿನದ ಅಂಚಿನಲ್ಲಿದರು, ರಿಲೀಸ್ ಆದ ಅಷ್ಟು ಚಿತ್ರಮಂದಿಗಳಲ್ಲಿ ಐಲವ್ಯೂ ಯಶಸ್ವಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಆಂಧ್ರಾ ಸಿಮೇಯಲ್ಲಿ 225 ಚಿತ್ರ ಮಂದಿಗಳಲ್ಲಿ ತೆರೆಕಂಡಿತ್ತು ಐ ಲವ್ ಯೂ. ಅಲ್ಲಿಯೂ ಕೂಡ ಯಶಸ್ವಿ ಪ್ರದರ್ಶನ ಕಾಣುತ್ತಿದೆಯಂತೆ.
ಕನಕ ಸಿನಿಮಾ ಸೋತಾಗ ಆರ್.ಚಂದ್ರುಗೆ ಕೆಲ ಹಿತಶತ್ರುಗಳು ಚಂದ್ರು ಅಪ್ಡೇಟ್ ಆಗಿಲ್ಲ ಎಂದು ಕಿಚಾಯಿಸಿದ್ರಂತೆ. ಅದಕ್ಕೆ ನಾವೊಂದು ಯಾಕೆ ಆಪ್ಡೇಟ್ ವರ್ಶನ್ ಸಿನಿಮಾ ಮಾಡಬಾರದು ಎಂದು ಈ ಚಿತ್ರವನ್ನು ಮಾಡಿದೆ. ಅರ್ಜುನ್ ರೆಡ್ಡಿ ಸಿನಿಮಾ ಗೆದ್ದಿದನ್ನು ನೋಡಿ ಈ ಪ್ರಯತ್ನಕ್ಕೆ ಕೈ ಹಾಕಿದೆ ಎಂದರು ಚಂದ್ರು.
ಒಟ್ಟಾರೆಯಾಗಿ ಕನ್ನಡ ಚಿತ್ರರಂಗದಲ್ಲಿ ಒಂದೊಳೆ ಯಶಸ್ಸು ಐ ಲವ್ ಯೂ ಚಿತ್ರದಿಂದ ಸಿಕ್ಕಿರುವುದು ಸಂತಸದ ವಿಚಾರ.. ಅದ್ರಲೂ ಉಪ್ಪಿ ಅಭಿಮಾನಿ ಭಕ್ತ ಗಣಕಂತು ಐ ಲವ್ ಯೂ ಸಕ್ಸಸ್ ಸಖತ್ ಖುಷಿ ತಂದು ಕೊಟ್ಟಿದೆ.
Comments are closed.