ಮನೋರಂಜನೆ

ಸಾರ್ವಜನಿಕ ಸ್ಥಳದಲ್ಲಿ ಸ್ಮೋಕ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ನಟ!

Pinterest LinkedIn Tumblr


ಸೆಲೆಬ್ರೆಟಿಗಳು ಅಂದ್ರೆ ಜನರಿಗೆ ರೋಲ್ ಮಾಡೆಲ್. ಇದೇ ಸೆಲೆಬ್ರೆಟಿಗಳು ಕೆಲವೊಮ್ಮೆ ಮಿತಿ ಮೀರಿ ವರ್ತನೆ ಮಾಡ್ತಾರೆ. ಅಭಿಮಾನಿಗಳಿಗೆ ಮಾದರಿಯಾಗಬೇಕಿದ್ದ ಇವರೇ ತಪ್ಪು ಮಾಡ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧವಿದ್ರು, ಟಾಲಿವುಡ್​​​​ ನಟ ಎನರ್ಜಿಟಿಕ್ ಸ್ಟಾರ್ ರಾಮ್​​​​​​​​​ ಪೋತಿನೇನಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿ ಪೊಲೀಸರಿಂದ 200ರೂ ದಂಡ ವಿಧಿಸಿಕೊಂಡಿದ್ದಾರೆ.

ರಾಮ್​​ ಧೂಮಪಾನ ಮಾಡಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸದ್ಯ ರಾಮ್​​​​​​​​​ ಪೋತಿನೇನಿ ನಿರ್ದೇಶಕ ಪೂರಿ ಜಗನ್ನಾಥ್ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಇಸ್ಮಾರ್ಟ್​ ಶಂಕರ್​ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರದ ಚಿತ್ರೀಕರಣ ಹೈದರಾಬಾದ್​​​ನಲ್ಲಿ ನಡೆಯುತ್ತಿದ್ದು, ಶೂಟಿಂಗ್​​ ಬಿಡುವಿನ ವೇಳೆ ಅವರು ಧೂಮಪಾನ ಮಾಡಲು ಮುಂದಾಗಿದ್ದಾರೆ. ಅದನ್ನು ಗಮನಿಸಿದ ಚಾರ್​ಮಿನಾರ್​ ಪೊಲೀಸರು ಸ್ಥಳದಲ್ಲಿಯೇ 200 ರೂ. ದಂಡ ವಿಧಿಸಿದ್ದಾರೆ

Comments are closed.