ರಾಷ್ಟ್ರೀಯ

ಮುಂಬೈ ಮಲಾಡ್‌ನಲ್ಲಿ ಗುಡಿಸಿಲುಗಳ ಮೇಲೆ ಗೋಡೆ ಕುಸಿದ ಕಾರಣ ಕನಿಷ್ಠ 13 ಮಂದಿ ಸಾವು

Pinterest LinkedIn Tumblr

ಮಲಾಡ್(ಮಹಾರಾಷ್ಟ್ರ): ಮಂಗಳವಾರ ನಸುಕಿನ ಜಾವ ಮುಂಬೈನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮಲಾಡ್ ಪೂರ್ವ ಪ್ರದೇಶದ ಕುರಾರ್ ಪ್ರದೇಶದಲ್ಲಿ ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಲಾದ ಗುಡಿಸಿಲುಗಳ ಮೇಲೆ ಗೋಡೆ ಕುಸಿದ ಕಾರಣ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ಆಗಮಿಸಿದ್ದು ಪರಿಹಾರ ಕಾರ್ಯ ನಡೆಸುತ್ತಿದೆ. ಈವರೆಗೆ ನಾಲ್ಕು ಜನರನ್ನು ರಕ್ಷಿಸಿ ಶತಾಬ್ಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

“ನಾಲ್ವರನ್ನು ರಕ್ಷಿಸಲಾಗಿದೆ. ಮತ್ತು ಶತಾಬ್ಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ನಮ್ಮ ಸಂತಾಪವಿದೆ. ಆಸ್ಪತ್ರೆಯಲ್ಲಿ ದಾಖಲಾದ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತದೆ” ಬಿಎಂಸಿ ತಿಳಿಸಿದೆ.

ಭಾರೀ ಮಳೆಯಿಂದಾಗಿ ಗುಡಿಸಲುಗಳ ಮೇಲೆ ಕಂಪೌಂಡ್ ಗೋಡೆ ಕುಸಿದಿದೆ.ಇನ್ನೂ ಲವರು ಭಗ್ನಾವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಬಗೆಗೆ ಆತಂಕವಿದೆ ಎಂದು ಹೇಳಲಾಗಿದೆ.

Comments are closed.