ಆರೋಗ್ಯ

40ರ ನಂತರ ಬರಬೇಕಾದ ಸಮಸ್ಯೆ 20 ಮತ್ತು 30ರ ಮಹಿಳೆಯರಲ್ಲಿ ಕಾಣಲು ಕಾರಣ ತಿಳಿಯಿರಿ..!

Pinterest LinkedIn Tumblr

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆದ ಸ್ತನ ಕ್ಯಾನ್ಸರ್ ಜಾಗೃತಿಯಲ್ಲಿ ಪುಣೆಯ ವೈದ್ಯರಿಗೆ ಕೆಲವು ವಿಚಿತ್ರ ಸ್ತನ ಸೋಂಕಿನ ಪ್ರಕರಣಗಳು ಕಂಡು ಬಂದಿದೆ. ಮಧುಮೇಹ, ಟಿಬಿ ಮತ್ತು ಎದೆಹಾಲು ಉಣಿಸುವ ಮಹಿಳೆಯರಲ್ಲಿ ಗೆಡ್ಡೆ, ಸೋಂಕು ಮತ್ತು ಯಾವುದೇ ರೀತಿಯ ಸ್ರಾವವಾಗುವುದನ್ನು ಸಾಮಾನ್ಯವಾಗಿ ಕಾಣಬಹುದು. ಆದರೆ ಇಲ್ಲಿ ಯಾವುದೇ ಕಾರಣವಿಲ್ಲದೆ ಕ್ಯಾನ್ಸರ್ ನ ಎಲ್ಲ ಲಕ್ಷಣಗಳು ಕಾಣಿಸತೊಡಗಿದ್ದವು. ಇದರ ಇನ್ನೊಂದು ದುಃಖಕರ ವಿಷಯವೆಂದರೆ ಇದಕ್ಕೆ ಖಚಿತ ಕಾರಣ ಗೊತ್ತಿಲ್ಲದಿರುವುದು ಮತ್ತು ಯಾವ ರೀತಿಯಿಂದ ಈ ಸಮಸ್ಯೆಯನ್ನು ಚಿಕಿತ್ಸೆ ನೀಡುವುದು ಎಂದು. ಈ ರೀತಿಯ ಸಮಸ್ಯೆಗಳಲ್ಲಿ ಚಿಕಿತ್ಸೆ ಹಲವು ತಿಂಗಳ ಸಮಯ ಕೂಡ ತೆಗೆದುಕೊಳ್ಳಬಹುದು. ಇದರ ಇನ್ನೊಂದು ವಿಷಯವೆಂದರೆ ಎಲ್ಲ ಪ್ರಕರಣಗಳು 40 ರ ನಂತರ ಬರಬೇಕಾದ ಸಮಸ್ಯೆ 20 ಮತ್ತು 30 ವಯಸ್ಸಿನ ಮಹಿಳೆಯರಲ್ಲೇ ಬಂದಿರುವುದು.

ಕಳೆದ 5 ವರ್ಷಗಳ ಹಿಂದೆ ತಿಂಗಳಿಗೆ ಕೇವಲ 1 ಅಥವಾ 2 ಪ್ರಕರಣಗಳು ಕಾಣಿಸುತ್ತಿದ್ದವು, ಆದರೆ ಈಗ ಐದರಿಂದ ಆರು ಪ್ರಕರಣಗಳು ಒಂದು ತಿಂಗಳಿನಲ್ಲಿ ದಾಖಲೆಯಾಗುತ್ತಿವೆ. ವೈದ್ಯರು ಇದನ್ನು ಕ್ಯಾನ್ಸರ್ ಅಲ್ಲ ಎಂದು ಹೇಳುತ್ತಿದ್ದಾರೆ. ಅವರ ಪ್ರಕಾರ ಇದೊಂದು ದೇಹದಲ್ಲಿ ಆಗುವ ರೋಗನಿರೋಧಕ ಪ್ರತಿಕ್ರಿಯೆಯಾಗಿದ್ದು, ಇದರ ಏಕಾಏಕಿ ಬರುವಿಕೆಗೆ ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲ. ಅವರು “ಈ ರೀತಿಯ ಪ್ರಕರಣಗಳು ಹಿಂದೆಯೂ ಕಾಣಿಸಿಕೊಂಡಿದ್ದು ಆದರೆ ತೀವ್ರತೆ ಇಷ್ಟಾಗಿರಲಿಲ್ಲ. ಪ್ರತಿ ತಿಂಗಳು ನಾವು ೬ ಹೊಸ ರೋಗಿಗಳು ಮತ್ತು 15-30 ಹಳೆಯ ರೋಗಿಗಳನ್ನು ಪರೀಕ್ಷಿಸುತ್ತೇವೆ. ಇದು ಸ್ತನ ಟಿ ಬಿ ನಂತೆ ಕಂಡರೂ ಇದು ಟಿ ಬಿ ಅಲ್ಲ ಮತ್ತು ಇದಕ್ಕೆ ನಾವು ಯಾವುದೇ ನಿಖರ ಕಾರಣ ಕೂಡ ಹೇಲುಬುದಕ್ಕೆ ಸಾಧ್ಯವಿಲ್ಲ. ಎಷ್ಟೋ ಸಲ ರೋಗ ನಿರ್ಣಯ ಸರಿಯಾಗಿ ಮಾಡದೆ ಇರುವುದರಿಂದ ರೋಗಿಗಳು ಶಸ್ತ್ರಚಿಕಿತ್ಸೆಯನ್ನು ಸಹ ಮಾಡಿಸಿದ್ದಾರೆ. ಆದರೆ ಒಂದು ಸಲ ನಾವು ಇದನ್ನು ಸರಿಯಾಗಿ ಪತ್ತೆ ಮಾಡಿದರೆ ಈ ರೀತಿಯ ಅನಾಹುತಗಳು ಪುನಃ ಆಗುವುದನ್ನು ತಪ್ಪಿಸಬಹುದು” ಎಂದು ಹೇಳಿದ್ದಾರೆ.

ಸ್ವಚ್ಛತೆಗೆ ಆದ್ಯತೆ ನೀಡುವ ಮತ್ತು ಯಾವುದೇ ರೀತಿಯ ಹಿಂದಿನ ವೈದ್ಯಕೀಯ ಸಮಸ್ಯೆಗಳಿಲ್ಲದಿರುವ ಮಹಿಳೆಯರು ಸಹ ಈ ರೋಗ ಬರುವ ಅಪಾಯದಲ್ಲಿದ್ದಾರೆ. ಹಾಗಾಗಿ ವೈದ್ಯರ ಸಲಹೆಯಂತೆ ಸ್ತನದಲ್ಲಿ ಗೆಡ್ಡೆ, ಮೊಲೆತೊಟ್ಟುಗಳಿಂದ ರಕ್ತ ಅಥವಾ ದ್ರವ ಸೋರುವುದು ಅಥವಾ ಸ್ತನದಲ್ಲಿ ಕಾಣುವ ಯಾವುದೇ ರೀತಿಯ ಅಸ್ವಸ್ಥತೆ ಇದ್ದರೂ ಸಹ ಕೂಡಲೇ ಅವರು ಎಚ್ಚೆತ್ತುಕೊಂಡು ವೈದ್ಯರನ್ನು ಕಾಣಬೇಕು.

Comments are closed.