ಬೆಂಗಳೂರು: ನಾನು ರಾಜಿನಾಮೆ ನೀಡುತ್ತಿದ್ದೇನೆ, ಆದರೆ ಪಕ್ಷ ಬಿಡಲು ನನಗೆ ನೋವಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ರಾಜಿನಾಮೆ ನೀಡಲು ವಿಧಾನಸೌಧಕ್ಕೆ ಆಗಮಿಸಿದ ರಾಮಲಿಂಗಾರೆಡ್ಡಿ, ಸ್ಪೀಕರ್ ಗೆ ರಾಜಿನಾಮೆ ನೀಡಲು ಬಂದಿದ್ದೇನೆ, ಆದರೆ ತಮ್ಮ ಪುತ್ರಿ ಸೌಮ್ಯಾ ರೆಡ್ಡಿ ರಾಜಿನಾಮೆ ಬಗ್ಗೆ ನನಗೇನು ತಿಳಿದಿಲ್ಲ, ನೀವು ಅವರನ್ನೇ ಕೇಳಿ ಎಂದು ಹೇಳಿದ್ದಾರೆ.
ನಾನು ಯಾರನ್ನೂ ನಿಂದಿಸಲು ಬಯಸುವುದಿಲ್ಲ, ಇದಕ್ಕೆ ಪಕ್ಷದ ಹೈಕಮಾಂಡ್ ಅನ್ನು ನಾನು ಬೈಯ್ಯುವುದಿಲ್ಲ, ಕೆಲವು ವಿಷಯಗಳಲ್ಲಿ ನನ್ನನ್ನು ಪಕ್ಷ ನಿರ್ಲಕ್ಷ್ಯಿಸುತ್ತಿದೆ, ಹೀಗಾಗಿ ನಾನು ರಾಜಿನಾಮೆ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ.
ಕಾಲೇಜು ದಿನಗಳಿಂದಲೂ ನಾನು ಕಾಂಗ್ರೆಸ್ ನಲ್ಲಿದ್ದನು, 7 ಬಾರಿ ಶಾಸಕನಾಗಿದ್ದೆ ಎಂದು ಹೇಳಿರುವ ಅವರು, ರಾಜಿನಾಮೆ ನೀಡಬಾರದೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನನ್ನ ಮನವೊಲಿಸಲು ಬಂದಿದ್ದರು, ಆದರೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಅವರಿಗೆ ತಿಳಿಸಿದ್ದಾರೆ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
Comments are closed.