ಮೈಸೂರು: ಮಗು ತನಗೆ ಹುಟ್ಟಿಲ್ಲ ಎಂದು ಆರೋಪಿಸಿ 2 ವರ್ಷದ ಪುಟ್ಟ ಮಗುವನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಹುಣಸೂರು ತಾಲೂಕು ಅಸ್ವಾಳು ಗ್ರಾಮದಲ್ಲಿ ನಡೆದಿದೆ.
ಕುಶಲ್ (2) ಕೊಲೆಯಾದ ಮಗು. ಶಶಿಕುಮಾರ್ ಮಗುವನ್ನು ಕೊಲೆ ಮಾಡಿದ ಆರೋಪಿ ತಂದೆ. ಶಶಿಕುಮಾರ್ ಪರಿಮಳ ಎಂಬರನ್ನು ಪ್ರೀತಿಸಿ ಮದುವೆ ಆಗಿದ್ದನು. ಈ ದಂಪತಿಗೆ ಮೂರು ವರ್ಷದ ಖುಷಿ ಹಾಗೂ 2 ವರ್ಷದ ಕುಶಲ್ ಎಂಬ ಮಕ್ಕಳಿದ್ದರು.
ಶಶಿಕುಮಾರ್ ತನ್ನ ಪತ್ನಿ ಪರಿಮಳ ಜೊತೆ ಜಗಳವಾಡಿ ಆಕೆಯನ್ನು ಬಿಟ್ಟು ಹೋಗಿದ್ದನು. ಬಳಿಕ 6 ತಿಂಗಳ ಹಿಂದೆ ಮತ್ತೆ ಪರಿಮಳ ಜೊತೆ ಸೇರಿ ಸಂಸಾರ ಮಾಡಲು ಆರಂಭಿಸಿದ್ದನು. ಈ ವೇಳೆ 2 ವರ್ಷದ ಕುಶಲ್ ತನಗೆ ಹುಟ್ಟಿಲ್ಲ ಎಂದು ಶಂಕೆ ವ್ಯಕ್ತಪಡಿಸಿ ಶಶಿಕುಮಾರ್ ತನ್ನ ಮಗನನ್ನೇ ಕೊಲೆ ಮಾಡಿದ್ದಾನೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
Comments are closed.