ಕರ್ನಾಟಕ

ಮಳೆಯ ಅಬ್ಬರ- ಮತ್ತೊಂದು ಜಲಪ್ರಳಯಕ್ಕೆ ಸಾಕ್ಷಿಯಾಗುತ್ತಾ ..?

Pinterest LinkedIn Tumblr


ಕಳೆದ ವರ್ಷದ ಸುರಿದಿದ್ದ ಭಾರೀ ಮಳೆಗೆ ಕಾಫಿನಾಡು ಚಿಕ್ಕಮಗಳೂರು, ಕೊಡಗು ಅಕ್ಷರಶಃ ತತ್ತರಿಸಿ ಹೋಗಿತ್ತು. ಎಲ್ಲಿ ನೋಡಿದರು ಗುಡ್ಡ ಕುಸಿತ, ಬೆಳೆ ನಾಶದ್ದೇ ದೃಶ್ಯಗಳು ಕಣ್ಣಿಗೆ ಬೀಳ್ತಿದ್ವು. ಅನ್ನದಾತನ ಕಣ್ಣೀರನ್ನು ನೋಡೋಕೆ ಆಗ್ತಿರಲಿಲ್ಲ. ಈ ವರ್ಷವೂ ವರುಣನ ಅಬ್ಬರ ಜೋರಾಗಿದ್ದು, ಮತ್ತೊಂದು ಜಲ ಪ್ರಳಯಕ್ಕೆ ಚಿಕ್ಕಮಗಳೂರು ಸಾಕ್ಷಿಯಾಗುತ್ತಾ ಅಂತ ಜನ ಆತಂಕದಲ್ಲಿ ಎದುರು ನೋಡ್ತಿದ್ದಾರೆ.

ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್ ಪುರದಲ್ಲಿ ಭಾರೀ ಮಳೆಯಾಗ್ತಿದ್ದು, ಮೂಡಿಗೆರೆ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೇ ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿದ್ದು, ಮೂಡಿಗೆರೆ ತಾಲೂಕಿನ ಮೂಲರಹಳ್ಳಿ ಬಳಿ 9 ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಗುಡ್ಡ ಕುಸಿದು ಬಿದ್ದಿದೆ. ಮತ್ತೊಂದೆಡೆ ಮತ್ತಾವರ ಬಳಿ ಪೊಲೀಸ್ ಜೀಪ್ ಪಲ್ಟಿಯಾಗಿದ್ದು, ಸಿಪಿಐ ಸೇರಿದಂತೆ ಪೊಲೀಸ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೊಡಗು ಜಿಲ್ಲೆಯಲ್ಲೂ ಮುಂಗಾರು ಬಿರುಸುಗೊಂಡಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಆದರೆ ಮಡಿಕೇರಿ – ಸೋಮವಾರಪೇಟೆ ರಸ್ತೆಯಲ್ಲಿ ಬಿರುಕು ಬಿಟ್ಟಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ. ಹೀಗಾಗಿ ಸಂಭಾವ್ಯ ಅಪಾಯ ಎದುರಿಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದ್ದು, ಕಳೆದೊಂದು ತಿಂಗಳಿಂದ NDRF ತಂಡ ಮಡಿಕೇರಿಯಲ್ಲೇ ಬೀಡು ಬಿಟ್ಟಿದೆ. ಭಾರೀ ಮಳೆಯಿಂದ ಹಾರಂಗಿ ಜಲಾಶಯದ ಒಳಹರಿವಿನಲ್ಲೂ ಏರಿಕೆಯಾಗಿದೆ.

Comments are closed.