ಕರ್ನಾಟಕ

ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು: ‘ಆಪರೇಷನ್‌ ಹಿಂದೆ ಮೋದಿ, ಅಮಿತ್ ಶಾ ಕೈವಾಡ’

Pinterest LinkedIn Tumblr


ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗ್ತಿದ್ದಂತೆ ಅತ್ತ ದೆಹಲಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ಸಭೆ ಸೇರಿ ಮುಂದಿನ ನಡೆ ಬಗ್ಗೆ ಚರ್ಚೆಸಿದರು.

‘ಮೋದಿಯಿಂದ ಕುದುರೆ ವ್ಯಾಪಾರ’

ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್ ವಕ್ತಾರ ರಂದೀಪ್‌ ಸುರ್ಜೆವಾಲಾ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಕರ್ನಾಟಕದಲ್ಲಿ ಕುದುರೆ ವ್ಯಾಪಾರ ಮಾಡ್ತಿದ್ದಾರೆ ಎಂದು ದೂರಿದರು. ಈ ಹಿಂದೆ ಪಶ್ಚಿಮ ಬಂಗಾಳದ ಲೋಕಸಭಾ ಚುನಾವಣೆ ಯಲ್ಲಿನ ಮೋದಿ ಭಾಷಣ ಪ್ರಸ್ತಾಪಿಸಿದ ಅವರು, ಆಂಧ್ರ, ತೆಲಂಗಾಣ, ಹರಿಯಾಣ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಶಾಸಕರ ಖರೀದಿ ಮಾಡ್ತಿದೆ ಎಂದು ದೂರಿದರು.

‘ಆಂಧ್ರ, ತೆಲಂಗಾಣ, ಹರಿಯಾಣದಲ್ಲೂ ಆಪರೇಷನ್‌’

ಸಂವಿಧಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅಗೌರವ ತೊರಿಸಿದ್ದಾರೆ ಎಂದು ರಂದೀಪ್‌ ಸುರ್ಜೆವಾಲಾ ಟೀಕಿಸಿದ್ದಾರೆ.

Comments are closed.