ಕರ್ನಾಟಕ

ಶಾಸಕರ ರಾಜೀನಾಮೆಯಲ್ಲಿ ನಮ್ಮ ಪಾತ್ರವಿಲ್ಲ: ಬಿಜೆಪಿ

Pinterest LinkedIn Tumblr


ಅತ್ತ ಕಾಂಗ್ರೆಸ್​ ಮತ್ತು ಜೆಡಿಎಸ್​ ಶಾಸಕರು ಸಾಲು-ಸಾಲಾಗಿ ರಾಜೀನಾಮೆ ನೀಡಿ ರೆಸಾರ್ಟ್​ನತ್ತ ಮುಖ ಮಾಡಿದ್ದರೇ, ಇತ್ತ ಬಿಜೆಪಿ ನಾಯಕರು ಸೇಫ್​ ಗೇಮ್​ ಆರಂಭಿಸಿದ್ದಾರೆ. ಹೌದು ಮಾಧ್ಯಮಗಳ ಜೊತೆ ಅತ್ಯಂತ ಬಿಗುವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು ಈ ರಾಜೀನಾಮೆಯಲ್ಲಿ ನಮ್ಮದೇನು ಪಾತ್ರವಿಲ್ಲ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಹೌದು ಸಾಲು ಸಾಲು ಕೈ ಮತ್ತು ತೆನೆ ನಾಯಕರು ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರೇ, ಇತ್ತ ಬಿಜೆಪಿ ನಾಯಕರು ಮಾತ್ರ ನಮಗೇನು ಮಾಹಿತಿ ಇಲ್ಲ ಎಂದರು. ಘಟನೆ ಬಗ್ಗೆ ಪ್ರತಿಕ್ರಿಯಿಸಿಲು ನಿರಾಕರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ವೈ, ನಾನು ಇಂದಿನಿಂದ ಆರಂಭವಾಗಿರುವ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಜಯನಗರಕ್ಕೆ ತೆರಳಿದ್ದೇ, ಈಗ ವಾಪಸ್ಸಾಗಿ ಉಪಹಾರ ಸೇವಿಸುತ್ತಿದ್ದೇನೆ. ನನಗೇನು ಮಾಹಿತಿ ಇಲ್ಲ. ತಿಳಿದುಕೊಂಡು ಹೇಳುತ್ತೇನೆ ಎಂದರು.

ಇನ್ನೊಂದೆ ಬಿಎಸ್​ವೈ ನಿವಾಸದ ಬಳಿ ಶಾಸಕರೊಂದಿಗೆ ಆಗಮಿಸಿದ್ದ ಆರ್.ಅಶೋಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ನಮಗೇ ಮಾಧ್ಯಮಗಳಿಂದಲೇ ವಿಚಾರ ತಿಳಿಯಿತು. ಸರ್ಕಾರದಲ್ಲಿ ಈ ಪ್ರಮಾಣದ ಅಸಮಧಾನ ಇದೆ ಎಂದು ರಾಜೀನಾಮೆಯಿಂದಲೇ ತಿಳಿಯಿತು. ಈ ವಿಚಾರದಲ್ಲಿ ನಾವು ಸೂತ್ರಧಾರಿಗಳು ಅಲ್ಲ, ಪಾತ್ರಧಾರಿಗಳು ಅಲ್ಲ ಎಂದರು.

ಒಂದೆಡೆ ಬಿಜೆಪಿ ಹೈಕಮಾಂಡ್​​ನಿಂದಲೇ ಈ ಡ್ರಾಮಾ ಸೃಷ್ಟಿಯಾಗಿದೆ ಎಂಬ ಆರೋಪಗಳು ಕೇಳಿಬಂದಿರುವಾಗಲೇ ರಾಜ್ಯ ಬಿಜೆಪಿ ನಾಯಕರ ಈ ಪ್ರತಿಕ್ರಿಯೆಗಳು ಸಾಕಷ್ಟು ಅನುಮಾನ ಸೃಷ್ಟಿಸಿದ್ದು, ಒಂದಷ್ಟು ಸಂಚಲನ ಮೂಡಿಸಿದೆ.

Comments are closed.