ಲೀಡ್ಸ್: ಹಿಟ್ಮ್ಯಾನ್ ರೋಹಿತ್ ಶರ್ಮ 2019ನೇ ಐಸಿಸಿ ವಿಶ್ವಕಪ್ನಲ್ಲಿ 5ನೇ ಶತಕ ಸಿಡಿಸಿದರೆ, ಕನ್ನಡಿಗ ಕೆ.ಎಲ್ ರಾಹುಲ್ 3ನೇ ಅರ್ಧ ಶತಕ ಸಿಡಿಸಿ ಸಂಭ್ರಮಿಸಿದರು.
ಇಲ್ಲಿನ ಹೇಡಿಂಗ್ಲೆ ಕ್ರೀಡಾಂಗಣದಲ್ಲಿ ಲಂಕಾ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ಉತ್ತಮ ಆಟವಾಡುವಲ್ಲಿ ಯಶಸ್ವಿಯಾಯಿತು. ಆರಂಭಿಕರಾಗಿ ಕ್ರೀಸ್ಗೆ ಆಗಮಿಸಿದ ರಾಹುಲ್ ಹಾಗೂ ರೋಹಿತ್ ಉತ್ತಮ ಜತೆಯಾಟದೊಂದಿಗೆ ತಂಡಕ್ಕೆ ಬೃಹತ್ ಮೊತ್ತದ ಕೊಡುಗೆ ನೀಡಿದರು. ರೋಹಿತ್ ಎದುರಿಸಿದ 92 ಎಸೆತಗಳಲ್ಲಿ 02 ಸಿಕ್ಸರ್ ಹಾಗೂ14 ಬೌಂಡರಿಗಳೊಂದಿಗೆ 102 ರನ್ ಗಳಿಸುವ ಮೂಲಕ ಏಕದಿನ ವೃತ್ತಿ ಜೀವನದಲ್ಲಿ 27ನೇ ಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ವಿಶ್ವಕಪ್ ಟೂರ್ನಿಯೊಂದರಲ್ಲಿ 5 ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ರಾಹುಲ್ 82 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ ಅರ್ಧ ಶತಕ (76) ಸಿಡಿಸುವ ಮೂಲಕ ರೋಹಿತ್ಗೆ ಸಾಥ್ ನೀಡಿದರು. ಒಂದು ವೇಳೆ ಇಬ್ಬರು ಬ್ಯಾಟ್ಸ್ಮನ್ಗಳು ವಿಕೆಟ್ ಕಳೆದುಕೊಳ್ಳದೇ ಉತ್ತಮ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲ್ಲಿಸಿದರೆ, ವಿಶ್ವಕಪ್ನಲ್ಲಿ ದಾಖಲೆ ನಿರ್ಮಾಣವಾಗಲಿದೆ.
ಲಂಕಾ ಪರ ಲಸಿತ್ ಮಲಿಂಗಾ, ಕಸುನ್ ರಜಿತಾ, ಇಸ್ರು ಉಡಾನ, ಥಿಸಾರ ಪೆರೆರಾ ಹಾಗೂ ಧನಂಜಯ ಡಿ ಸಿಲ್ವಾ ಬೌಲಿಂಗ್ ಮಾಡುತ್ತಿದ್ದಾರೆ
Comments are closed.